ಅಂಕಣ

mail-img print-img

ಪಂಚಾಯತ್ ರಾಜ್: ಗುರಿ ಸಾಧಿಸಲೇಬೇಕು

ಮಂಗಳವಾರ - ಜುಲೈ -10-2012

ಪಂಚಾಯತ್-ರಾಜ್ಯದ ಗುರಿ ಗ್ರಾಮೀಣ ಅಭಿವೃದ್ಧಿಯನ್ನು ಸಾಧಿಸಿ ಸಮೃದ್ಧ ರಾಜ್ಯವನ್ನಾಗಿ ನಿರ್ಮಾಣ ಮಾಡಬೇಕೆಂಬುದೇ ಆಗಿದೆ. ಈ ದಿಸೆಯಲ್ಲಿ ರಾಜ್ಯಮಟ್ಟದಲ್ಲಿ ಒಂದು ರಾಜ್ಯ ಪಂಚಾಯತ್ ಪರಿಷತ್ತನ್ನು ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ, ಜಿಲ್ಲಾ ಮಟ್ಟದಲ್ಲಿ 30 ಜಿಲ್ಲಾ ಪಂಚಾಯತ್‌ಗಳನ್ನು, ತಾಲೂಕು ಮಟ್ಟದಲ್ಲಿ 176 ತಾಲೂಕು ಪಂಚಾಯತ್‌ಗಳನ್ನು, ಗ್ರಾಮಗಳ ಮಟ್ಟದಲ್ಲಿ 5627 ಗ್ರಾಮ ಪಂಚಾಯತ್ಗಳನ್ನು ಚುನಾಯಿತರ ಅಧ್ಯಕ್ಷತೆಯಲ್ಲಿ 1993ರ ಕರ್ನಾಟಕ ಪಂಚಾಯತ್‌ರಾಜ್ ಕಾಯ್ದೆ ಪ್ರಕಾರ ರಚಿಸಲಾಗಿದೆ.ಸುಮಾರು 40ಯೋಜನಾ ಕಾರ್ಯಕ್ರಮಗಳಿಗೆ ಹಾಗೂ ಸುಮಾರು 22 ಯೋಜನೇತರ ಕಾರ್ಯಕ್ರಮಗಳಿಗೆ 2010-11ರಲ್ಲಿ 16102.85 ಕೋಟಿ ಮೊತ್ತವನ್ನು ನಮ್ಮ ಪ್ರಜಾ ಸರಕಾರ ಬಜೆಟ್ ಪ್ರಕಾರ ನಿಗದಿಗೊಳಿಸಲಾಗಿತ್ತು. ಈ ಹಣ ಸಾಕಾಗುವುದಿಲ್ಲವೆಂದು ಸರಕಾರವು ಚಾಲು ವರ್ಷವಾದ 2012-13ನೆ ವರ್ಷದಲ್ಲಿ 19596.12 ಕೋಟಿ ಹಣವನ್ನು ನಿಗದಿಗೊಳಿಸಿದೆ. ಈ ಮೊತ್ತವನ್ನು 30 ಜಿಲ್ಲಾ ಪಂಚಾಯತ್‌ಗಳಿಗೆ 7971.05 ಕೋಟಿ, 176 ತಾಲೂಕು ಪಂಚಾಯತ್‌ಗಳಿಗೆ 9521.73 ಕೋಟಿ, 5627 ಗ್ರಾಮ ಪಂಚಾಯತ್‌ಗಳಿಗೆ 2983.34 ಕೋಟಿ ಹೀಗೆ ಹಂಚಿಕೆ ಮಾಡಲಾಗಿದ್ದು ಈ ಹಣವನ್ನೆಲ್ಲಾ 31-3-2013ರ ಒಳಗಾಗಿ ಪಂಚಾಯತ್ ರಾಜ್ ಸಂಸ್ಥೆಗಳು ಹಾಗೂ ಅವುಗಳ ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಸದಸ್ಯರೆಲ್ಲರೂ ಸೇರಿ ವೆಚ್ಚಮಾಡಿ ಪಂಚಾಯತ್ ಸಂಸ್ಥೆಗಳ ಸರ್ವೋನ್ನತ ಆಡಳಿತ ಹಾಗೂ ಸರ್ವಾಂಗೀಣ ಗ್ರಾಮೀಣ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಮುಂದಾಗಲೇಬೇಕಾಗಿದೆ.

ಹಾವೇರಿ ಜಿಲ್ಲೆಯ ಬಗ್ಗೆ ಹೇಳುವು ದಾದರೆ 2011-12ರಲ್ಲಿ ಯೋಜನೆ ಹಾಗೂ ಯೋಜನೇತರ ಕಾರ್ಯಕ್ರಮ ಗಳಿಗೆ 395.60 ಕೋಟಿ ಮೊತ್ತವನ್ನು ಸರಕಾರ ನೀಡಿದ್ದು, 2012-13ನೆ ಚಾಲು ಸಾಲಿಗೆ 476.29 ಕೋಟಿ ಮೊತ್ತವನ್ನು ನೀಡಲಾಗಿದೆ. ಈ ವರ್ಷದ ಈ 476.29 ಕೋಟಿ ಮೊತ್ತವನ್ನು ಹಾವೇರಿ ಜಿಲ್ಲಾ ಪಂಚಾಯತ್‌ಗೆ 169.51 ಕೋಟಿ, 7ತಾಲೂಕು ಪಂಚಾಯತ್‌ಗಳಿಗೆ 273.98 ಕೋಟಿ, 208 ಗ್ರಾಮ ಪಂಚಾಯತ್‌ಗಳಿಗೆ 32.80 ಕೋಟಿ ವಿತರಿಸಲಾಗಿದೆ. ಹಾವೇರಿ ಜಿಲ್ಲೆಯ ಗ್ರಾಮೀಣ ಜನಸಂಖ್ಯೆ 11.40 ಲಕ್ಷವಿದ್ದು ನಗರ ಜನಸಂಖ್ಯೆ 2.99 ಲಕ್ಷ ವಿರುತ್ತದೆ. ರಾಜ್ಯದ ಗ್ರಾಮೀಣ ಜನಸಂಖ್ಯೆ 3.49 ಕೋಟಿಯಿದ್ದು ನಗರ ಜನಸಂಖ್ಯೆ 1.80 ಕೋಟಿಯಿದೆ ಎಂಬುದನ್ನು ಗಮನಿಸ ಬೇಕಾದದ್ದು ಅಗತ್ಯವಿದೆ.

ಗ್ರಾಮೀಣ ಜನರ ಅಭಿವೃದ್ಧಿ ಹಾಗೂ ಪ್ರಗತಿಗಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ಇಲಾಖೆ ರಚಿತವಾ ಗಿದೆಯೆಂಬುದನ್ನು ಯಾರೂ ಮರೆಯಬಾರದು.ಈ ಜಿಲ್ಲಾ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ 4800-7275 ರೂ.ಗಳ ಕನಿಷ್ಠ ವೇತನ ಶ್ರೇಣಿಯಿಂದ 28275-39900ರೂ.ಗಳ ಗರಿಷ್ಠ ವೇತನ ಪಡೆಯುತ್ತಿರುವ 372922 ಹುದ್ದೆ ದಾರರು ಇದ್ದಾರೆ. ಇಷ್ಟೆಲ್ಲಾ ಸಿಬ್ಬಂದಿ, ಗ್ರಾಮೀಣ ಜನಸಂಖ್ಯೆ ಹಾಗೂ ಪ್ರಜಾಪ್ರತಿನಿಧಿಗಳು ಇದ್ದರೂ ಈ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಪ್ರತಿವರ್ಷ ಸರಕಾರವು ಬಜೆಟ್‌ದಲ್ಲಿ ನಿಗದಿಸುತ್ತಿರುವ ಹಣ ಭಾರೀ ಕಡಿಮೆ.

ಪಂಚಾಯತ್‌ಗಳಿಗೆ ಅಧಿಕಾರ ಸಾಕಷ್ಟು ಇದೆ. ಆದರೆ ಅವುಗಳಿಗೆ ನೀಡುತ್ತಿರುವ ಹಣ ತೃಪ್ತಿಕರವಲ್ಲ. ಪಂಚಾಯತ್‌ಗಳು ತೃಪ್ತಿಕರವಾಗಿ, ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಅಭಿವೃದ್ಧಿ ಹಾಗೂ ಆಡಳಿತ ಸಾಧಿಸಬೇಕಾದಲ್ಲಿ ಅವುಗಳಿಗೆ ಹೆಚ್ಚಿನ ಹಣಬೇಕು. ಅಂದರೆ ಮಾತ್ರ ಪಂಚಾಯತ್‌ಗಳು ಸಬಲವಾಗಬಲ್ಲವು. ಇಲ್ಲವಾದರೆ ಅವು ಅಬಲವಾಗಿ ಸಮೃದ್ಧ ರಾಜ್ಯ ಉದಯವಾಗಲು ಕಷ್ಟಕರ.ಪಂಚಾಯತ್‌ಗಳಿಗೆ ನೀಡಿದ ಹಣ ಎಷ್ಟೇ ಇದ್ದರೂ ಅವೆಲ್ಲಾ ಸದ್ಬಳಕೆಯಾಗಲೇಬೇಕು. ದುರ್ಬಳಕೆ ಹಾಗೂ ನಿರ್ಬಳಕೆಯಾಗಲೇ ಬಾರದು. ಪಂಚಾಯತ್‌ಗಳ ಆಡಳಿತ ಅಭಿವೃದ್ಧಿ ಯಲ್ಲಿ ಭ್ರಷ್ಟಾಚಾರ, ತಾರತಮ್ಯ, ಸ್ವಜನಪಕ್ಷಪಾತ ಅಧಿಕಾರ ದುರುಪಯೋಗ, ದುರಾಡಳಿತ ಅಲ್ಲಲ್ಲಿ ಕಂಡುಬರುತ್ತದೆ. ಇದು ನಿಲ್ಲಲೇಬೇಕು.

ಈ ದಿಶೆಯಲ್ಲಿ ಉತ್ತಮ ಶ್ರೇಷ್ಠ ಹಾಗೂ ಪ್ರತಿಭಾನ್ವಿತ ಪಂಚಾಯತ್‌ಗಳ ಅನೇಕ ಪ್ರತಿನಿಧಿಗಳು ಪದಾಧಿಕಾರಿಗಳು ಶ್ರಮವಹಿಸಿದರೆ ಅವರಿಗೆ ಸಮಾಜ ಚಿರಋಣಿ.ರಾಜ್ಯದ ಪಂಚಾಯತ್ ಗ್ರಾಮೀಣ ಅಭಿ ವೃದ್ಧಿಗೆ ಸರಕಾರದ ಎಲ್ಲಾ ಇಲಾಖೆಗಳ ಸಹಾಯ ಸಹಕಾರ ಇದ್ದೇ ಇದೆ. ಪಂಚಾಯತ್ ರಾಜ್ಯ ಅಭಿವೃದ್ಧಿ, ಇಲಾಖೆಗಳನ್ನೊಳಗೊಂಡ ಎಲ್ಲಾ ಇಲಾಖೆಗಳು ಗ್ರಾಮೀಣ ಹಾಗೂ ನಗರಗಳ ನ್ನೊಳಗೊಂಡ ರಾಜ್ಯದ ಹಾಗೂ ರಾಜ್ಯದ 6.11 ಕೋಟಿ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸರ್ವೋತ್ತಮ ಆಡಳಿತಕ್ಕೆ ಮುಂದಾಗ ಲೇಬೇಕು. ಹಾಗೂ ಸರಕಾರ ನೀಡಿದ ನಿಗದಿತ ಬಜೆಟ್ ಹಣವನ್ನು ಸಂಪೂರ್ಣವಾಗಿ ವೆಚ್ಚ ಮಾಡಿ ನಿಗದಿತ ಆರ್ಥಿಕ ಹಾಗೂ ಭೌತಿಕ ಗುರಿಯನ್ನು ಸಾಧಿಸಲೇಬೇಕು.

ರಾಜ್ಯದಲ್ಲಿ ಅನೇಕ ಪಂಚಾಯತ್‌ಗಳು ಹಾಗೂ ಆಡಳಿತ ಮಂಡಳಿಯವರು ಸಮರ್ಪಕ ಕಾರ್ಯನಿರ್ವ ಹಿಸುತ್ತಿದ್ದರೂ ಕೆಲವು ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತವೆ. ರಾಜ್ಯ ಸರಕಾರದ ಎಲ್ಲಾ 29 ಇಲಾಖೆಗಳು ತಮಗೆ ನೀಡಿದ ಬಜೆಟ್‌ನಲ್ಲಿ ಸಂಪೂರ್ಣ ವೆಚ್ಚ ಮಾಡದೆ 2008-09, 2009-10 ಹಾಗೂ 2010-11 ರಲ್ಲಿ ಒಟ್ಟು 36071.13 ಕೋಟಿ ಹಣವನ್ನು ಬಳಸದೆ ಉಳಿಸಿರುವುದು ಸಿ.ಎ.ಜಿ. ವರದಿ ಯಿಂದ ಖಚಿತವಾಗಿದೆ. 2008-09, 2009- 10, 2010-11 ಈ ಮೂರು ವರ್ಷದ ಅವಧಿಯಲ್ಲಿ ಪಂಚಾಯತ್ ರಾಜ್ ಇಲಾಖೆ 2324.76 ಕೋಟಿ ಭಾರೀ ಮೊತ್ತ ಬಳಸದೆ ಉಳಿಸಿದೆ. ಇದು ಸರಿಯೆ?

2011-12ರಲ್ಲಿ ಬಜೆಟ್ ನಿಗದಿತ ವಾರ್ಷಿಕ ಹಣ 85318.76ಕೋಟಿಯಲ್ಲಿ 31-12- 2011ವರೆಗಿನ 9 ತಿಂಗಳ ಅವಧಿಯಲ್ಲಿ 63989.07 ಕೋಟಿ ವೆಚ್ಚ ಮಾಡಬೇಕಿದ್ದರೂ ಎಲ್ಲಾ ಇಲಾಖೆಗಳು ಕೇವಲ 48369.40 ಕೋಟಿ ಮೊತ್ತವನ್ನು ವಾಸ್ತವಿಕ ವೆಚ್ಚಮಾಡಿ 15619.67 ಕೋಟಿ ಮೊತ್ತವನ್ನು ಬಳಸದೇ ಉಳಿಸಿರುವುದು ರಾಜ್ಯದ ಎ.ಜಿ.ಯವರ ಕಚೇರಿಯಿಂದ ತಿಳಿದುಬಂದಿದೆ. ಅಂತೆಯೇ ಈ 9 ತಿಂಗಳ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ 2011-12ರಲ್ಲಿ ತನಗೆ ನಿಗದಿಯಾದ 1854.48 ಕೋಟಿಯಲ್ಲಿ 9 ತಿಂಗಳಲ್ಲಿ ಕೇವಲ 984.83 ವಾಸ್ತವಿಕ ವೆಚ್ಚಮಾಡಿ 406.03 ಕೋಟಿ ಮೊತ್ತವನ್ನು ಬಳಸುವಲ್ಲಿ ವಿಫಲವಾಗಿದೆ.

2011-12ರ ಇದೇ ವರ್ಷದ ನಿರ್ಬಳಕೆ ಮೊತ್ತವನ್ನು ಕಾದು ನೋಡಬೇಕಾಗಿದೆ.ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ಗಳಿಗೆ ಪ್ರತಿವರ್ಷ ಕಡಿಮೆ ಹಣ ನಿಗದಿ ಮಾಡಿ ಬಿಡುಗಡೆ ಮಾಡುತ್ತಿದ್ದರೂ ಈ ಮೂರು ಹಂತದ ಪಂಚಾಯತ್‌ಗಳು, ಪ್ರತಿ ವರ್ಷ ಹಣವನ್ನು ಸಂಪೂರ್ಣ ವೆಚ್ಚ ಮಾಡದೇ ಶಿಲ್ಕು ಹಣ ಉಳಿಸುತ್ತಿರುವುದು ಅಪಾಯಕಾರಿ. ರಾಜ್ಯದ 168 ತಾಲೂಕು ಪಂಚಾಯತ್‌ಗಳು 31-3-2008ಕ್ಕೆ 581.07 ಕೋಟಿ 31-3- 2009ಕ್ಕೆ 1386.08 ಕೋಟಿ ಭಾರಿ ಮೊತ್ತವನ್ನು ಬಳಸದೆ ಶಿಲ್ಕು ಉಳಿಸಿದೆಯೆಂದು ಅಧಿಕೃತ ವರದಿ ಹೇಳುತ್ತದೆ. ಇಂತಹ ಉದಾಹರಣೆ ಎಲ್ಲಾ ತರಹದ ಪಂಚಾಯತ್‌ಗಳಲ್ಲಿ ಮುಂದುವರಿಯುತ್ತಲೇ ಇದೆ. ಇದು ನಿಲ್ಲಲೇಬೇಕು.

ರಾಜ್ಯಾದ್ಯಂತ ಗ್ರಾಮ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ 20 ಅಂಶಗಳ ಹಾಗೂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಬಗ್ಗೆ ಯಾವ್ಯಾವ ಯೋಜನೆಗಳಿಗೆ ವಾರ್ಷಿಕ ನಿಗದಿತ ಬಜೆಟ್ ಹಣವೆಷ್ಟು, ವೆಚ್ಚವಾದ ಹಣವೆಷ್ಟು ಸಾಧಿಸಿದ ಆರ್ಥಿಕ ಹಾಗೂ ಭೌತಿಕ ಗುರಿಯ ಸಾಧನೆಯೆಷ್ಟೆಂಬ ಬಗ್ಗೆ ವಿಚಾರ ವಿನಿಮಯಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ತ್ರೈಮಾಸಿಕ ಸಭೆಗಳನ್ನು ಕರೆಯುತ್ತಿರುವ ಸತ್‌ಸಂಪ್ರದಾಯವಿದೆ. ಈ ಸಭೆಗಳನ್ನು ತಪ್ಪದೆ ಕರೆದು ಚರ್ಚೆ ಮಾಡಿ ಸೂಕ್ತ ತೀರ್ಮಾನ ತೆಗೆದುಕೊಂಡರೆ ಪಂಚಾಯತ್ ರಾಜ್ ಗ್ರಾಮೀಣ ಅಭಿವೃದ್ಧಿ ಇಲಾಖೆಯಾಗಲೀ ಅಥವಾ ಯಾವುದೇ ಇಲಾಖೆಯಾಗಲೀ ಪ್ರತಿ ವರ್ಷ ನಿಗದಿತ ಮೊತ್ತವನ್ನು ವೆಚ್ಚಮಾಡಲಿಕ್ಕೆ ಸಾಧ್ಯವಿದೆ ಹೊರತು ನಿರ್ಬಳಕೆ ಮಾಡಿ ಗುರಿ ಸಾಧಿಸದ ಅತೃಪ್ತಿಕರ ಕೆಲಸ ಮುಂದುವರೆಯಲಿಕ್ಕೆ ಸಾಧ್ಯವೇ ಇಲ್ಲ.

ಪಂಚಾಯತ್ ರಾಜ್ ಸಬಲ ವಾಗಲೇಬೇಕು, ಹೆಚ್ಚಿನ ಹಣ ಪಡೆಯಲೇ ಬೇಕು. ನಿಗದಿತ ಆರ್ಥಿಕ ಹಾಗೂ ಭೌತಿಕ ಗುರಿಯನ್ನು ಸಾಧಿಸುವಲ್ಲಿ ಹಣದ ಯಾವುದೇ ನಿರ್ಬಳಕೆ ದುರ್ಬಳಕೆಯಾಗದಂತೆ ಸದ್ಬಳಕೆ ಯಾಗಲೇಬೇಕು. ಈ ದಿಶೆಯಲ್ಲಿ ಜನತೆಯ ಜೀವಾಳವಾಗಿರುವ ಜನತೆಯ ಪ್ರತಿನಿಧಿಗಳಾದ ವಿವಿಧ ಪಂಚಾಯತ್‌ಗಳ ಸದಸ್ಯರು, ಅಧ್ಯಕ್ಷರು, ಅಧಿಕಾರಿಗಳು, ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ವಿವಿಧ ಇಲಾಖಾ ಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ಮಾಜಿಗಳು ಎಲ್ಲರೂ ಕ್ರಿಯಾಶೀಲರಾಗಿ ‘ಸರ ಕಾರದ ಕೆಲಸ ದೇವರ ಕೆಲಸ’ವೆಂದು ಪ್ರಜಾ ಸೇವೆ ಮಾಡಿದರೆ ಜನತೆ ಇವರೆಲ್ಲರಿಗೂ ಚಿರಋಣಿ. ಹಾಗೂ ಮಹಾತ್ಮ ಗಾಂಧೀಜಿಯ ವರ ಕನಸು ನನಸಾಗಲಿಕ್ಕೆ ಸಾಧ್ಯ.


ಬಿ.ಜಿ.ಬಣಕಾರ,

ಮಾಜಿ ವಿಧಾನ ಸಭಾಧ್ಯಕ್ಷರು, ಹಿರೇಕೆರೂರ

 


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್