ಪ್ರೀತಿಯ ವ್ಯಾಖ್ಯೆಗೆ ಎಲ್ಲ ನ್ಯಾಯವನ್ನೂ ಒದಗಿಸುವಂತೆ ಇರುವ ಒಂದು ಸುಂದರ ಹಿಂದಿ ಸಿನಿಮಾ ‘ಆರಾಧನಾ.’ ಒಂದು ಕಲಾಕೃತಿ ಎನ್ನಬಹುದು. ಈ ಆರಾಧನಾ ಸಿನಿಮಾದ ಹೀರೋ ಆಗಿ ಜೀವಂತ ಅಭಿನಯಿಸಿರುವ ಕಲಾವಿದ ರಾಜೇಶ್ ಖನ್ನಾ. ಇಂಥ ಅವನ ಪಾತ್ರದ ಪರಿಣಾಮದಿಂದಾಗಿ ಎಂದಿಗೂ ನನಗೆ ಸ್ತುತ್ಯರ್ಹ. ಕಾಕಾಗೆ ಸಲಾಂ.
ಆರಾಧನಾ ಸಿನಿಮಾದ ನನ್ನ ಅತ್ಯಂತ ಪ್ರೀತಿಯ ಹಾಡು ಹೀಗಿದೆ-
ಕೋರಾ ಕಾಗಜ್ ಥಾ ಏ ಮನ್ ಮೇರಾ
ಲಿಖ್‌ಲಿಯಾ ನಾಮ್ ಉಸ್‌ಮೇ ತೇರಾ॥
ಚೈನ್ ಗವಾಯಾ ಮೈನೆ ನಿಂದಿಯಾ ಗವಾಯಿ
ಸಾರಿ ಸಾರಿ ರಾತ್ ಜಾಗೂ ದೂ ಮೆ ದುಹಾಯಿ॥
ಟೂಟ್‌ನಾ ಜಾಯೆ ಸಪ್‌ನೆ ಮೆ ಢರ್ ಥಾ ಹೂ
ನಿತ್ ದಿನ್ ಸಪ್‌ನೋ ಮೆ ದೇಖಾ ಕರ್ತಾ ಹೂ॥
ಟೂಟಾ ತಾರಾ ಥಾ ಏ ಮನ್ ಮೇರಾ
ಬನ್ ಗಯಾ ಚಾಂದ್ ಹೋಕೆ ತೇರಾ॥
ಕೋಯಿ ದುಶ್ಮನ್ ಥಾ ಏ ಮನ್ ಮೇರಾ
ಬನ್ ಗಯಾ ಮೀತ್ ಹೋಕೆ ತೇರಾ॥
ಖಾಲಿ ದರ್ಪಣ್ ಥಾ ಏ ಮನ್ ತೇರಾ
ಬಸ್ ಗಯಾ ಪ್ಯಾರ್ ಇಸ್ ಮೇ ತೇರಾ... ಎಂದರೆ
ನನ್ನ ಮನ ಖಾಲಿ ಹಾಳೆಯಾಗಿತ್ತು
ನೀನು ಅದರಲ್ಲಿ ನಿನ್ನ ಹೆಸರು ಬರೆದೆ
ಮನಶಾಂತಿ-ನಿದ್ರೆ ಎಲ್ಲವನ್ನೂ ಸಾಕ್ಷಿಯಾಗಿಸಿದ್ದೇನೆ
ರಾತ್ರಿಗಳೆಲ್ಲಾ ಎಚ್ಚರವಿದ್ದು ಪ್ರಾರ್ಥಿಸಿದ್ದೇನೆ
ಕಂಡ ಕನಸು ಎಲ್ಲಿ ಮುರಿದೀತೋ ಎಂದು ಹೆದರುತ್ತೇನೆ
ದಿನ -ರಾತ್ರಿಗಳಲ್ಲಿ ನನಸಿನ ಕನಸನ್ನು ಕಾಣುತ್ತಿದ್ದೇನೆ.
ನನ್ನ ಮನಸ್ಸು ಮುರಿದ ನಕ್ಷತ್ರವಾಗಿತ್ತು
ನಿನ್ನದಾಗಿದ್ದರಿಂದ ಚಂದ್ರನಾಯಿತು
ನಿನ್ನ ಮನಸ್ಸು ಯಾರೋ ಶತ್ರುವಂತಿತ್ತು
ನಿನ್ನದಾಗಿದ್ದರಿಂದ ಸ್ನೇಹಿತನಾಯಿತು
ನನ್ನ ಮನಸ್ಸು ಖಾಲಿ ಕನ್ನಡಿಯಾಗಿತ್ತು
ಇದರಲ್ಲೀಗ ನಿನ್ನ ಪ್ರೇಮ ತುಂಬಿತು...
ಈ ಹಾಡು ಫಲಿಸುವ ರೀತಿಯಲ್ಲಿ ಇಡೀ ‘ಆರಾಧನಾ’ ಸಿನಿಮಾ ನಾಯಕ-ನಾಯಕಿಯರ ಪ್ರೇಮ ಸಮರ್ಪಣೆಯಲ್ಲಿ ಉತ್ಕೃಷ್ಟವಾಗಿ ಸಾಗುತ್ತದೆ. ಹಲವು ನೆನಪುಗಳನ್ನು ಈ ‘ಆರಾಧನಾ’ ಸಿನಿಮಾ ನನ್ನಲ್ಲಿ ಬೆಚ್ಚಗೆ ಹುಟ್ಟು ಹಾಕಿದೆ. ಬಾಲ್ಯದಲ್ಲಿ ಈ ಸಿನಿಮಾವನ್ನು ನನ್ನ ಅಮ್ಮ-ಅಪ್ಪನ ಜೊತೆ ನೋಡಿದ್ದೆ. ನನ್ನ ಅಮ್ಮನಿಗಂತೂ ಬಹಳ ಇಷ್ಟವಾಗಿ ಹೋಗಿತ್ತು. ಅಷ್ಟೇ ಅಲ್ಲ ಮುಂದೆ ನನ್ನ ಮಕ್ಕಳಿಗೂ ನಾನು ಇದೇ ಅಭಿಮಾನದಿಂದ ಈ ಸಿನಿಮಾವನ್ನು ಟಿವಿಯಲ್ಲಿ ತೋರಿಸಿದ್ದೆ. ನನ್ನ ದೊಡ್ಡ ಮಗ ಗೌತಮನಿಗೆ ಈ ಸಿನಿಮಾ ನೋಡಿದ ಮೇಲೆ ಕಿಶೋರ್‌ಕುಮಾರ್ ಹಾಡುಗಳ ಅಭಿಮಾನಿಯಾಗಿ ಅವನ ಹಲವು ಹಾಡುಗಳನ್ನು ಕಲೆಕ್ಟ್ ಮಾಡಲು ತೊಡಗುವ ಸಂಗೀತದ ಅಭಿರುಚಿ ಬೆಳೆಯಿತು.
ನನ್ನ ಚಿಕ್ಕ ಮಗ ಪೂರ್ಣನಿಗೆ ಇದರಲ್ಲಿ ತಾಯಿ ತನ್ನ ಮಗುವಿಗಾಗಿ ಹಾಡುವ ಈ ಹಾಡು ಬಹಳ ಇಷ್ಟವಾಗಿ ಬಿಟ್ಟಿತು.
ಚಂದಾ ಹೈ ತೂ ಮೇರಾ ಸೂರಜ್ ಹೈ ತೂ
ಓ ಮೇರೆ ಆಂಕೋ ಕಾ ತಾರಾ ಹೈ ತೂ
ಜೀತೀ ಹೂ ಮೆ ಬಸ್ ತುಜೆ ದೇಖ್‌ಕೆ
ಇಸ್ ಟೂಟೆ ದಿಲ್ ಕಾ ಸಹಾರಾ ಹೈ ತೂ
ತೂ ಖೇಲೇ ಖೇಲ್ ಕಹೀ
ಮೇರಾ ಕಿಲೋನಾ ಹೈ ತೂ
ಜೋ ಬಿ ಪೂಚೆ ತುಮೆ ದೇಖ್‌ಕೆ
ಕಿಸ್ ಮಾ ಕಾ ಏ ದುಲ್ಹಾರಾ ಹೈ ತೂ? ಎಂದರೆ
ಚಂದ್ರ ನೀನು ನನ್ನ ಸೂರ್ಯ ನೀನು
ಓ.. ನನ್ನ ಕಣ್ಣುಗಳ ನಕ್ಷತ್ರ ನೀನು
ನಿನ್ನ ನೋಡುತ್ತ ಬದುಕುತ್ತೇನೆ ನಾನು ಇಷ್ಟು ಸಾಕು ನನಗೆ ಈ ಒಡೆದ ಹೃದಯಕ್ಕೆ ಆಸರೆ ನೀನು
ನೀನು ಹೊರಗೆ ಹೋಗಿ ಎಲ್ಲಿ ಆಡಿದರೂ
ನನಗೆ ನೀನೇ ಆಟದ ಬೊಂಬೆ ಯಾರು ನಿನ್ನ ನೋಡಿದರೂ ಕೇಳಬೇಕು
ಯಾವ ತಾಯಿಯ ಮಗ ಇವನು?!
ಈ ಹಾಡಿನ ಅರ್ಥವನ್ನು ತಿಳಿದ ಮೂರನೇ ತರಗತಿ ಓದುತ್ತಿದ್ದ ಪೂರ್ಣ ಆನಂತರದ ದಿನಗಳಲ್ಲಿ ನಾನು ಯಾವ ಕಾರಣಕ್ಕಾದರೂ ಅವನಲ್ಲಿ ಮುನಿಸಿಕೊಂಡು ಮಾತನಾಡದಿದ್ದಾಗ ಮನೆಯ ಹೊರಗಿನ ಜಗಲಿಯ ಮೇಲೆ ಕುಳಿತು ಈ ಹಾಡನ್ನು ಗಟ್ಟಿಯಾಗಿ ತನ್ನ ಶೈಲಿಯಲ್ಲಿ ಕನ್ನಡಕ್ಕೆ ಹೀಗೆ ತಂದು ನನ್ನ ಗಮನ ಸೆಳೆಯಲು ಯತ್ನಿಸುತ್ತಿದ್ದ!
ಚಂದ್ರ ಹೋಯಿತು ಅಯ್ಯೋ ಸೂರ್ಯ ಹೋಯಿತು
ನನ್ನ ಮೇಲೆ ಅಮ್ಮನಿಗೆ ಪ್ರೀತಿ ಹೋಯಿತು... ಎಂದು ದಪ್ಪ ಮುಖ ಮಾಡಿಕೊಂಡು ಅವನು ಕೂತ ತಕ್ಷಣ ನಾನು ಹೋಗಿ ‘‘ಇಲ್ಲಾ ಕಂದ ಅಮ್ಮನಿಗೆ ನಿನ್ನ ಮೇಲೆ ಪ್ರೀತಿ ಎಲ್ಲೂ ಹೋಗಿಲ್ಲ’’ ಎಂದು ಅವನನ್ನು ಅಪ್ಪಿ ಮುದ್ದಿಸಿ ಮುನಿಸು ಕರಗಿ ಮನೆಯೊಳಗೆ ಕರೆದುಕೊಂಡು ಹೋಗುತ್ತಿದ್ದೆ. ಇಂತಹ ಸಾರ್ಥಕ ನೆನಪು ಉಳಿಸಿದ ಸಿನಿಮಾ ‘ಆರಾಧನಾ’.
ಇಂತಹ ಮರೆಯಲಾಗದ ಸಿನಿಮಾ ಹೀರೋ ಆಗಿ ರಾಜೇಶ್ ಖನ್ನಾ ಒತ್ತಿರುವ ಕಥಾನಾಯಕನ ಛಾಪು ಎಂದರೆ ಒಬ್ಬ ಅಪ್ಪಟ ಪ್ರೇಮಿಯದು. ಆ ಪ್ರೇಮ ಬರೀ ಯೌವನದ ಉತ್ಸಾಹದ ಲೈಂಗಿಕ ಪ್ರವಾಹ ಮಾತ್ರವಾಗಿರುವುದಿಲ್ಲ. ಜೀವನದುದ್ದಕ್ಕೂ ಪ್ರೇಮ ಸಾರ್ಥಕವಾಗಬೇಕೆಂಬ ಹೃತ್ಪೂರ್ವಕ ತಪಸ್ಸಿನಂಥ ಪರಿಪಕ್ವ ಆಯ್ಕೆಯಾಗಿರುತ್ತದೆ. ಒಬ್ಬ ತುಂಟ ಪ್ರೇಮಿ, ಯುವಕನಾಗಿ ರಾಜೇಶ್ ಖನ್ನಾನ ಅಭಿನಯ ಎಂದಿಗೂ ಮಾಸುವುದಿಲ್ಲ.
ಹಾಗೆಯೇ ‘ಆರಾಧನಾ’ ಚಿತ್ರಕತೆಯಲ್ಲಿ ಆಕಸ್ಮಿಕವಾಗಿ ಕಥಾ ನಾಯಕ ಪೈಲಟ್ ಮಡಿದರೂ ಕೂಡ ಮದುವೆಗೆ ಮುನ್ನವೇ ಅವನನ್ನು ನಂಬಿ ತಾಯಿಯಾಗಿ ಬಿಡುವ ಪ್ರೇಮಿ ಎಲ್ಲ ಸಂಕಷ್ಟಗಳನ್ನೂ ಸಹಿಸಿಕೊಂಡು ಆ ಮಗುವನ್ನು ಹೆತ್ತು ದೊಡ್ಡವನನ್ನಾಗಿ ಮಾಡುವ ಜವಾಬ್ದಾರಿಯನ್ನು ತನ್ನ ಉಸಿರಾಗಿಸಿಕೊಂಡು ತನ್ನ ಸಂಗಾತಿಯ ಕನಸನ್ನು ನನಸಾಗಿಸುತ್ತಾಳೆ. ಅವನೂ ಅವನ ಅಪ್ಪನಂತೆ ಪೈಲಟ್ ಆಗುತ್ತಾನೆ. ಜೀವನ ಪೂರ್ತಿ ತಾನು ನಂಬಿದ್ದ ಪ್ರೇಮವನ್ನೇ ಆರಾಧಿಸುತ್ತಾಳೆ ಆರಾಧನಾ ಚಿತ್ರದ ನಾಯಕಿ. ಅದಕ್ಕಾಗಿಯೇ ತನ್ನ ಜೀವ ಮುಡಿಪಿಡುತ್ತಾಳೆ.
ತನ್ನ ಹೃದಯದ ಮೇಲಿನ ತನ್ನ ಪ್ರೇಮಿಯ ಅಳಿಸಲಾಗದ ಸಹಿಯನ್ನು ಕೊನೆಯ ತನಕ ಉಳಿಸಿಕೊಳ್ಳುತ್ತಾಳೆ. ನಂಬಿಕೆ ದ್ರೋಹವಾಗದ ಪ್ರೇಮವೊಂದು ಹೇಗಿರುತ್ತದೆ? ಎಂದು ಮೌನದಲ್ಲಿ ಧ್ಯಾನಿಸಿ ಆ ಭಾವವನ್ನು ಅನುಭವಿಸಬೇಕಾದರೆ ಇಂದಿನ ಯುವಜನರು ಈ ಆರಾಧನಾ ಸಿನಿಮಾವನ್ನು ಮತ್ತೆ ಮತ್ತೆ ನೋಡಬೇಕು. ಪ್ರೇಮದ ನಿಜವಾದ ಭಾವನೆ ಖಂಡಿತಾ ಸಫಲವಾಗುತ್ತದೆ ಎಂಬ ಆಶಾವಾದ ತಳೆಯಬೇಕು.
ರೋಮಾಂಟಿಕ್ ಹೀರೋ ಆಗಿ ಬದುಕನ್ನು ಧ್ಯಾನಿಸಬಲ್ಲ ಕಥೆಗಳಲ್ಲಿ ತನ್ನನ್ನೇ ಕೊಟ್ಟುಕೊಂಡು ಅಭಿನಯಿಸಿದ ರಾಜೇಶ್ ಖನ್ನಾರಂಥ ಸುರಸುಂದರಾಂಗನ ಸೌಂದರ್ಯ ಕಾಲನ ಹೊಡೆತಕ್ಕೆ ಸಿಕ್ಕಿ ಶಿಥಿಲವಾದರೂ- ಅವನ ದೇಹ ಇದೀಗ ಇಲ್ಲವಾದರೂ ‘ಆನಂದ್’ ಎಂಬ ಚಿತ್ರದ ಒಬ್ಬ ಪ್ರಾಮಾಣಿಕ ಗೆಳೆಯ, ‘ಭಾವರ್ಜಿ’ ಚಿತ್ರದ ಮುರಿದ ಮನೆಯ ಮನಸ್ಸುಗಳನ್ನು ಒಂದುಗೂಡಿಸುವ ಮನೆಯೆಲ್ಲಿ ಶಾಂತಿ ನೆಲೆಸುವಂತೆ ಮಾಡುವ ಅಡಿಗೆಯವನು, ‘ಮೆಹಬೂಬ’ ಚಿತ್ರದ ಜನ್ಮ ಜನ್ಮಕ್ಕೂ ಉಳಿಯುವ ಪ್ರೇಮಿಯಾಗಿ ರಾಜೇಶ್ ಖನ್ನಾನ ಕೊಡುಗೆ ಎಂದಿಗೂ ಸ್ಮರಿಸುವಂಥದ್ದು.
ನನ್ನ ಇಷ್ಟದ ಮೆಹಬೂಬ ಚಿತ್ರದ ಈ ಹಾಡಿನಲ್ಲಿ ರಾಜೇಶ್ ಖನ್ನಾ ಜನ್ಮಾಂತರಕ್ಕೂ ಉಳಿಯುವ ಪ್ರೇಮಿಯ ಪಾತ್ರದ ಬಾಯಾರಿಕೆಯನ್ನು ಹೀಗೆ ಮಿಡಿಯುತ್ತಾನೆ
ಮೇರೆ ನೈನಾ ಸಾವನ್ ಬಾಧೋ ಫಿರ್ ಭಿ ಮೇರಾ ಮನ್ ಪ್ಯಾಸಾ
ಬರ್ಸೋ ಬೀತ್‌ಗಯೇ ತುಮ್ ಸೆ ಮಿಲೇ ಬಿಚ್‌ಡೆ
ಬಿಜ್‌ಲಿ ಬನ್‌ಕರ್ ಗಗನ್ ಕೆ ಚಮ್‌ಕೆ
ಬೀತೆ ಸಮಯ್ ಕಿ ರೇಖಾ ಮೈನೆ ತುಮ್‌ಕೋ ದೇಖಾ...
ಬಾತ್ ಪುರಾನಿ ಹೈ ಏಕ್ ಕಹಾನಿ ಹೈ ಅಬ್ ಸೋಚೂ ತುಮೆ ಯಾದ್ ನಹೀ ಹೈ
ಅಬ್ ಸೋಚೂ ನಹೀ ಬೂಲೇ ಓ ಸಾವನ್ ಕೆ ಜೂಲೆ
ಮನ್ ಸಂಗ್ ಆಂಖ್ ಮಿಚೋಲಿ ಖೇಲೆ
ಆಶಾ ಔರ್ ನಿರಾಶಾ ಫಿರ್ ಭಿ ಮೇರಾ ಮನ್ ಪ್ಯಾಸಾ....
ಎಂದರೆ
ನನ್ನ ಕಣ್ಣುಗಳು ಶ್ರಾವಣವನ್ನು ಸುರಿಸುತ್ತಿದೆ ಆದರೂ ನನ್ನ ಮನಸ್ಸು ಮತ್ತೆ ಬಾಯಾರಿದೆ
ನಿನ್ನಿಂದ ದೂರವಾಗಿ ವರ್ಷಗಳು ಕಳೆದು ಹೋದವು
ಕಳೆದು ಹೋದ ಸಮಯ ಮಿಂಚಿನಂತೆ ಆಕಾಶದಲ್ಲಿ ಹೊಳೆಯಿತು
ನಾನು ನಿನ್ನ ನೋಡಿದೆ!
ಹಳೆಯ ಮಾತಿದು; ಒಂದು ಕಥೆ
ನಿನಗೆ ನೆನಪಿಲ್ಲವೇನೋ ಎಂದುಕೊಳ್ಳುತ್ತೇನೆ
ಆ ಶ್ರಾವಣದ ಉಯ್ಯಾಲೆಯನ್ನು ನೀನು ಈಗ ಮರೆತಿರಲಾರೆ ಎಂದುಕೊಳ್ಳುತ್ತೇನೆ
ಮನದೊಡನೆ ಆಸೆ ಮತ್ತು ನಿರಾಸೆ ಮನಸ್ಸಿನೊಡನೆ ಕಣ್ಣಾಮುಚ್ಚಾಲೆ ಆಡುತ್ತಿದೆ
ಆದರೂ ನನ್ನ ಮನಸ್ಸು ಮತ್ತೆ ಬಾಯಾರಿದೆ....
‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...
Click here to post your views ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...
ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...