ಕಳೆದ ಕೆಲವು ವಾರಗಳಿಂದ ಒಂದು ರೀತಿಯಲ್ಲಿ ಮಿನಿ ಕ್ಲಿನಿಕ್ ರೀತಿಯಲ್ಲೇ ಕಾರ್ಯನಿರ್ವಹಿಸುವ ವೈದ್ಯಕೀಯ ವೆಬ್ ಸೈಟುಗಳನ್ನು ಪರಿಚಯಿಸಿಕೊಂಡಿದ್ದೇವೆ. ಹುಡುಕುತ್ತಾ ಹೋದರೆ ಅಂತಹ ಅನೇಕ ವೆಬ್‌ಸೈಟುಗಳು ಸಿಗುತ್ತವೆ. ನಾನು ಪರಿಚಯಿಸಿರುವ ವೆಬ್‌ಸೈಟುಗಳು ನಿಮಗೆ ತೃಪ್ತಿ ನೀಡದಿದ್ದಲ್ಲಿ ಅಥವಾ ನೀವು ಹುಡುಕುತ್ತಿರುವ ನಿರ್ದಿಷ್ಟ ವೈದ್ಯಕೀಯ ವಿಷಯ ಸಿಗದಿದ್ದಲ್ಲಿ ನೀವೇ ಒಂದಿಷ್ಟು ಗೂಗಲ್ ಹುಡುಕಾಟ ನಡೆಸಿದರೆ ಸಿಗುತ್ತದೆ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯ ಅಂತರ್ಜಾಲ ತಾಣಕ್ಕೆ ಭೇಟಿ ಕೊಟ್ಟರೆ ಖಂಡಿತ ಒಂದಿಷ್ಟು ಮಾಹಿತಿ ಸಿಕ್ಕೇ ಸಿಗುತ್ತದೆ. ಈಗ ಸದ್ಯಕ್ಕೆ ಆ ವಿಚಾರವನ್ನು ಅಲ್ಲಿಗೆ ಬಿಡೋಣ. ಈ ವಾರ ಸುಮ್ಮನೇ ಕುತೂಹಲಕ್ಕಾಗಿ ಭಾರತದಲ್ಲಿರುವ ಇಂಟರ್‌ನೆಟ್ ಬಳಕೆದಾರರ ಪ್ರಮಾಣ ಮತ್ತು ಜನವರ್ಗಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಏಶಿಯಾ ಡಿಜಿಟಲ್ ಮಾರ್ಕೆಟಿಂಗ್ ಅಸೋಸಿಯೇಶನ್ ಸಂಸ್ಥೆಯು ಪ್ರತೀವರ್ಷದಂತೆ ಈ ವರ್ಷವೂ ತನ್ನ ಸಮೀಕ್ಷಾ ವರದಿಯನ್ನು ‘ಏಶಿಯಾ-ಪೆಸಿಫಿಕ್ ಡಿಜಿಟಲ್ ಮಾರ್ಕೆಟಿಂಗ್ ಇಯರ್ ಬುಕ್ - 2011’ ಎಂಬ ಪುಸ್ತಕ ರೂಪದಲ್ಲಿ ಹೊರತಂದಿದೆ. ಅದರಲ್ಲಿ ಭಾರತೀಯ ಇಂಟರ್‌ನೆಟ್ ಬಳಕೆದಾರರ ಪ್ರಮಾಣ, ಜನವರ್ಗ ಮತ್ತು ಪ್ರಮುಖ ಆನ್‌ಲೈನ್ ಚಟುವಟಿಕೆಗಳಂತಹ ಅಮೂಲ್ಯ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದೆ. ಅದರ ಕೆಲವೊಂದು ಅಂಶಗಳನ್ನು ಇಲ್ಲಿ ನೀಡಿದ್ದೇನೆ.
ನಮ್ಮಲ್ಲಿ ಕಳೆದ ಹತ್ತು ವರ್ಷಗಳಲ್ಲಷ್ಟೇ ಇಂಟರ್‌ನೆಟ್ ವ್ಯಾಪಕವಾಗಿ ಬಳಕೆಗೆ ಬಂದಿದ್ದು. ಆರಂಭದಲ್ಲಿ ಕೇವಲ ದೊಡ್ಡ ದೊಡ್ಡ ಕಂಪೆನಿಗಳು, ಸರಕಾರಿ ಕಚೇರಿಗಳು, ರಕ್ಷಣಾ ಸಿಬ್ಬಂದಿಗೆ ಮಾತ್ರ ನಿಲುಕುವಂತಿದ್ದ ಇಂಟರ್‌ನೆಟ್ ಬಳಕೆ ಅಗ್ಗವಾಗುತ್ತಾ ಜನಸಾಮಾನ್ಯರಿಗೂ ತಲುಪುವಂತಾಗಿದೆ.ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಸ್ಮಾರ್ಟ್‌ಪೋನ್‌ಗಳು ಹೆಚ್ಚು ಹೆಚ್ಚು ಆಕರ್ಷಕವಾಗಿ, ದಕ್ಷವಾಗಿ ಮತ್ತು ಅಗ್ಗದ ಬೆಲೆಗೆ ದೊರೆಯುತ್ತಿರುವುದರಿಂದ ಹಾಗೂ ಇಂಟರ್‌ನೆಟ್ ಸೇವೆ ಒದಗಿಸುವ ಸಂಸ್ಥೆಗಳ ನಡುವಿನ ಪ್ರಬಲ ಪೈಪೋಟಿಯ ಕಾರಣವಾಗಿ ಆ ಸೇವೆಯೂ ಕಡಿಮೆ ಬೆಲೆಗೆ ಸಿಗುತ್ತಿರುವುದರಿಂದ ಇಂಟರ್‌ನೆಟ್ ಬಳಕೆದಾರರ ಸಂಖ್ಯೆಯೂ ಶರವೇಗದಲ್ಲಿ ಬೆಳೆಯುತ್ತಿದೆ.
ಆನ್‌ಲೈನ್ ಅಂಗಡಿಗಳು, ಆನ್‌ಲೈನ್ ಲೈಬ್ರರಿಗಳು, ಆನ್‌ಲೈನ್ ಗೇಮ್‌ಗಳು, ಆನ್‌ಲೈನ್ ಪರೀಕ್ಷೆಗಳು, ಆನ್‌ಲೈನ್ ಕ್ಲಿನಿಕ್ಕುಗಳು, ಆನ್‌ಲೈನ್ ಜಾಹಿರಾತುಗಳು, ಆನ್‌ಲೈನ್ ಹಳದಿ ಪುಟಗಳು, ಆನ್‌ಲೈನ್ ಪತ್ರಿಕೆಗಳು, ಆನ್‌ಲೈನ್ ರೇಡಿಯೋಗಳು... ಹೀಗೆ ಎಲ್ಲವೂ ಆನ್‌ಲೈನ್ ಆಗುತ್ತಿದೆ. ನಮ್ಮ ದೇಶದಲ್ಲಿ ಈಗಿರುವ ನೂರಾ ಇಪ್ಪತ್ತು ಕೋಟಿ ಜನರಲ್ಲಿ ಅರ್ಧದಷ್ಟು ಓದು ಬರಹ ಬಾರದ ಅನಕ್ಷರಸ್ತರು. ಉಳಿದ ಅರ್ಧದಷ್ಟು ಜನರಲ್ಲಿ ಸುಮಾರು ಒಂದೂ ಹನ್ನೆರಡುವರೆ ಕೋಟಿ ಜನ ಇಂಟರ್‌ನೆಟ್ ಬಳಸುತ್ತಿದ್ದಾರೆ ಎಂದರೆ ನಂಬುವುದಕ್ಕೇ ಸಾಧ್ಯವಾಗುವುದಿಲ್ಲ!! ಈ ಹನ್ನೆರಡು ಕೋಟಿ ಇಂಟರ್‌ನೆಟ್ ಬಳಕೆದಾರರಲ್ಲಿ ಸುಮಾರು ಒಂಬತ್ತು ಕೋಟಿ ಜನ ಸಕ್ರಿಯವಾಗಿ ಇಂಟರ್‌ನೆಟ್ ಬಳಸುತ್ತಾರಂತೆ.
ಅಂದರೆ, ಕನಿಷ್ಠ ತಿಂಗಳಿಗೊಮ್ಮೆಯಾದರೂ ತಮ್ಮ ಕಂಪ್ಯೂಟರನ್ನು ಇಂಟರ್‌ನೆಟ್‌ಗೆ ಕನೆಕ್ಟ್ ಮಾಡುತ್ತಾರೆ. ಸುಮಾರು ಏಳೂ ಕಾಲು ಕೋಟಿ ಇಂಟರ್‌ನೆಟ್ ಬಳಕೆದಾರರು ನಗರ ನಿವಾಸಿಯಾಗಿದ್ದರೆ ಸುಮಾರು ಎರಡೂವರೆ ಕೋಟಿ ಬಳಕೆದಾರರು ಗ್ರಾಮೀಣ ಪ್ರದೇಶದ ನಿವಾಸಿಗಳಾಗಿದ್ದಾರೆ. ಇಂಟರ್‌ನೆಟ್ ಬಳಕೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿರುವ ಅಗಾಧ ಅಂತರದಂತೆಯೇ ಪುರುಷ ಮತ್ತು ಮಹಿಳಾ ಬಳಕೆದಾರರ ಸಂಖ್ಯೆಯಲ್ಲೂ ಬಾರಿ ಅಂತರವಿದೆ. ಒಟ್ಟು ಬಳಕೆದಾರರಲ್ಲಿ ಶೇ.83ರಷ್ಟು ಜನ ಪುರುಷರಾಗಿದ್ದರೆ ಉಳಿದ ಶೇ.27ರಷ್ಟು ಬಳಕೆದಾರರು ಮಹಿಳೆಯರಾಗಿದ್ದಾರೆ.
ಭಾರತೀಯರು ಇಂಟರ್‌ನೆಟ್ ಅನ್ನು ಏತಕ್ಕಾಗಿ ಬಳಸುತ್ತಿದ್ದಾರೆ? ಇದಕ್ಕೂ ಇಲ್ಲಿ ಉತ್ತರವಿದೆ. ಭಾರತದಲ್ಲಿ ಇಂಟರ್‌ನೆಟ್ ಅತಿ ಹೆಚ್ಚು ಬಳಕೆಯಾಗುತ್ತಿರುವುದು ಇ-ಮೇಲ್ ಸಂಪರ್ಕಕ್ಕಾಗಿ ಎಂಬ ಅಂಶವನ್ನು ಸಮೀಕ್ಷೆ ಹೊರಗೆಡವಿದೆ. ಅಂದರೆ ಸಮೀಕ್ಷೆಗೊಳಗಾದವರಲ್ಲಿ ಶೇಕಡ 98ರಷ್ಟು ಬಳಕೆದಾರರು ಇ-ಮೇಲ್ ಬಳಸುತ್ತಾರೆ. ಉಳಿದಂತೆ ಪ್ರವಾಸೇತರ ಉತ್ಪನ್ನಗಳ ಹುಡುಕಾಟಕ್ಕೆ ಮತ್ತು ಆನ್‌ಲೈನ್ ಮೂಲಕ ಅವುಗಳನ್ನು ಖರೀದಿಸುವುದಕ್ಕೆ ಶೇಕಡ 76ರಷ್ಟು ಜನ ಇಂಟರ್‌ನೆಟ್ ಬಳಸುತ್ತಾರೆ.
ಹಾಗೆಯೇ, ಉದ್ಯೋಗ ಹುಡುಕುವುದಕ್ಕೆ ಶೇಕಡ 62ರಷ್ಟು ಜನ, ಫೇಸ್‌ಬುಕ್, ಟ್ವಿಟರ್, ಆರ್ಕುಟ್, ಗೂಗಲ್ ಪ್ಲಸ್ ರೀತಿಯ ಸಾಮಾಜಿಕ ಸಂಪರ್ಕತಾಣಗಳ ಬಳಕೆಗಾಗಿ ಶೇ.61ರಷ್ಟು, ಆನ್‌ಲೈನ್ ಮೂಲಕ ಪ್ರವಾಸಿ ಉತ್ಪನ್ನಗಳನ್ನು (ರೈಲು, ವಿಮಾನ, ಬಸ್ಸು ಟಿಕೆಟ್‌ಗಳು ಇತ್ಯಾದಿ) ಖರೀದಿಸುವುದಕ್ಕೆ ಶೇ 59ರಷ್ಟು ಜನ ಇಂಟರ್‌ನೆಟ್ ಬಳಸುತ್ತಾರೆ. ಆಶ್ಚರ್ಯ ಎಂದರೆ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ವೆಬ್‌ಸೈಟುಗಳಲ್ಲಿ ಯಾವೊಂದೂ ಭಾರತೀಯ ಮೂಲದವಲ್ಲ. ಗೂಗಲ್ ತಾಣಗಳು, ಫೇಸ್‌ಬುಕ್, ಯಾಹೂ ಮತ್ತು ಮೈಕ್ರೋಸಾಪ್ಟ್‌ನಂತಹ ವಿದೇಶಿ ಮೂಲದ ವೆಬ್‌ಸೈಟುಗಳೇ ಇಲ್ಲಿ ಜನಪ್ರಿಯವಾಗಿವೆ.
ವೀಡಿಯೋ ತುಣುಕುಗಳ ವೀಕ್ಷಣೆಯಂತಹ ಮನರಂಜನಾ ತಾಣಗಳಲ್ಲೂ ವಿದೇಶಿ ಮೂಲದ ವೆಬ್‌ಸೈಟುಗಳದ್ದೇ ಕಾರುಬಾರು. ಯೂಟ್ಯೂಬ್, ಸಿಬಿಎಸ್ ಇಂಟರ್ಯಾಕ್ಟಿವ್, ಬೀಎಂಪಿತ್ರಿ, ಯಾಹೂ ಸಂಸ್ಥೆಯ ಓಎಂಜಿ ಮುಂತಾದವುಗಳೇ ಪಟ್ಟಿಯ ಮೊದಲ ಸ್ಥಾನದಲ್ಲಿವೆ. ಈ ಸಮೀಕ್ಷೆಯಲ್ಲಿ ಶೇಕಡ 74ರಷ್ಟು ಜನ ವೀಡಿಯೋ ತುಣುಕು ವೀಕ್ಷಿಸಿದ್ದಾಗಿ ಹೇಳಿದ್ದರೆ ಶೇಕಡ 74ರಷ್ಟು ಜನ ತಾವೂ ವೀಡಿಯೋ ತುಣುಕುಗಳನ್ನು ಅಪ್‌ಲೋಡ್ ಮಾಡಿದ್ದಾಗಿ ಹೇಳಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಹದಿನಾಲ್ಕು ವರ್ಷದ ಹುಡುಗಿ ಮತ್ತು ಮೂರು ವರ್ಷದ ಹುಡುಗ ಹಸಿವಿನಿಂದಾಗಿ ಬರ್ಬರ ಸಾವನ್ನಪ್ಪಿದ್ದಾರೆ. ನಾಝ್ರಾ ಖಾತೂನ್ ಎನ್ನ ...
Click here to post your views ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...