ಅಪಾರ ಸಂಖ್ಯೆಯ ಬುಡಕಟ್ಟು ಜನರು ವಸಾಹತುಶಾಹಿಗಳು ಪರಿಚಯಿಸಿದ ರೋಗಗಳಿಗೆ ಬಲಿಯಾಗಿದ್ದರಿಂದ ತೋಟಗಳಲ್ಲಿ ಕಾರ್ಮಿಕರ ಅಭಾವ ತಲೆದೋರಿತು. ಇದನ್ನು ನೀಗಿಸಲು ವಸಾಹತುಶಾಹಿಗಳು ಪಶ್ಚಿಮ ಆಫ್ರಿಕಾದಲ್ಲಿ ಹಲವಾರು ಶತಮಾನಗಳಿಂದ ನಡೆಯುತ್ತಿದ್ದ ನೀಗ್ರೋ ಜನರ ವ್ಯಾಪಾರದತ್ತ ಗಮನಹರಿಸಿದರು. ಲಕ್ಷಾಂತರ ನೀಗ್ರೋಗಳನ್ನು ಆಫ್ರಿಕಾದಿಂದ ತಂದು ಅಟ್ಲಾಂಟಿಕ್ ತೀರದ ಅಮೆರಿಕ ದೇಶದ ತೋಟದ ಮಾಲಕರಿಗೆ ಮಾರಾಟ ಮಾಡುತ್ತಿದ್ದರು. 15-19ನೇ ಶತಮಾನದಲ್ಲಿ ಈ ಅಟ್ಲಾಂಟಿಕ್ ತೀರದ ಗುಲಾಮರ ವ್ಯಾಪಾರವು 10ರಿಂದ 12 ಮಿಲಿಯನ್ ಕಪ್ಪು ಜನರನ್ನು ಹೊರಪ್ರಪಂಚಕ್ಕೆ ಕರೆತಂದಿತ್ತು. ಅಟ್ಲಾಂಟಿಕ್ ಸಮುದ್ರದಲ್ಲಿ ನೀಗ್ರೊ ಜನರನ್ನು ಸಾಗಣೆ ಮಾಡುವಾಗ 1.2 ರಿಂದ 2.4 ಮಿಲಿ ಯನ್ ಕಪ್ಪು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಕ್ಯಾರಿಬಿಯನ್ ದ್ವೀಪಗಳಲ್ಲಿ ಯೂರೋಪಿನ ಬಿಳಿಯ ಭೂಮಾಲಕರು ನೆಲೆಸಿದ್ದರು. ಈ ಬಿಳಿಯರ ತೋಟಗಳಲ್ಲಿ ನೀಗ್ರೋಗಳು ಕೆಲಸ ಮಾಡುತ್ತಿದ್ದರು. ಈ ಕಂದು ನೀಗ್ರೋ ಜನರನ್ನು ಶೋಷಣೆ ಮಾಡಿ ಗಳಿಸಿದ ಹಣದಿಂದ, ಯೂರೋಪಿನಲ್ಲಿ ಮೋಜಿನ ವಿಲಾಸೀ ಜೀವನ ನಡೆಸುವುದು ಐರೋಪ್ಯ ಬಿಳಿಯ ತೋಟದ ಮಾಲಕರ ಬಹುದಿನದ ಕನಸಾಗಿತ್ತು. ಇದು ಅಮೆರಿಕದ ಖಂಡದಲ್ಲಿ ಯೂರೋಪಿಯನ್ ಸಾಮ್ರಾಜ್ಯವಾದಿಗಳು ನಡೆದುಕೊಂಡ ಬಂದ ಕಟುಸತ್ಯಗಳು.
ಭಾರತದ ವಸಾಹತೀಕರಣ:ಇನ್ನು ಭಾರತದ ವಿಷಯಕ್ಕೆ ಬಂದರೆ ಇವರ ಚರಿತ್ರೆ ಭಿನ್ನವಾಗಿಲ್ಲ. 1498ಮೇ ತಿಂಗಳಲ್ಲಿ ಪೋರ್ಚುಗೀಸರು ಭಾರತ ಪ್ರವೇಶಿಸಿದರು. ಯೂರೋಪಿನ ವಸಾಹತು ದೇಶಗಳ ಮಧ್ಯೆ ತೀವ್ರ ಪೈಪೋ ಟಿಯ ನಡುವೆ ಡಚ್ಚರು, ಇಂಗ್ಲಿಷರು, ಫ್ರೆಂಚರು ಮತ್ತು ನಂತರ ಇತರರು ಆಗಮಿ ಸಿದರು. ರಾಜರ ಆಳ್ವಿಕೆಯಲ್ಲ್ಲಿದ್ದ ಪ್ರದೇಶ ಗಳನ್ನು ನಿಧಾನವಾಗಿ ತಮ್ಮ ಆಳ್ವಿಕೆಗೆ ತೆಗೆದುಕೊಂಡರು, ಮತ್ತು ಗುಲಾಮ ರಾಜ್ಯ ಗಳ ಮುಖಾಂತರ ಪರೋಕ್ಷವಾಗಿ ಆಳುತ್ತಿ ದ್ದರು. 1600ರಲ್ಲಿ ಭಾರತ ಮತ್ತು ಪೂರ್ವ ಏಶಿಯ ಜೊತೆ ವ್ಯಾಪಾರ ಮಾಡಲು ರಾಣಿ ಎಲಿಜಬೆತ್, ಈಸ್ಟ್ ಇಂಡಿಯಾ ಕಂಪೆನಿ ಪ್ರಾರಂಭಿಸುವುದಕ್ಕೆ ಅನುಮೋದನೆ ನೀಡುತ್ತಾರೆ. ಬ್ರಿಟಿಷರ ದಬ್ಬಾಳಿಕೆಯಿಂದ ನರಳಿದ್ದ ಭಾರತೀಯ ಜನತೆ 1876-78ರ ನಡುವೆ ಭೀಕರ ಬರಗಾಲದಿಂದ ತತ್ತರಿಸಿತು. ಈ ಬರಗಾಲವು 1.25-10 ಮಿಲಿಯನ್ ಜನರನ್ನು ಬಲಿತೆಗೆದುಕೊಂಡಿತು. 1850ರ ಸುಮಾರಿಗೆ ಚೀನಾದಲ್ಲಿ ಕಾಣಿಸಿಕೊಂಡ ಪ್ಲೇಗ್ ರೋಗ ಭಾರತ ಉಪಖಂಡಕ್ಕೆ ಹಬ್ಬಿ, ಭಾರತದಲ್ಲಿ ಹತು ಮಿಲಿಯನ್ ಜನ ರೋಗಕ್ಕೆ ಬಲಿಯಾಗುತ್ತಾರೆ.
ಭಾರತದ ಜನ ಆಗಾಗ್ಗೆ ಬರಗಾಲ ಮತ್ತು ವಸಾಹತುಶಾಹಿಗಳು ಪರಿಚಯಿಸಿದ ರೋಗ ಗಳಿಗೆ ತುತ್ತಾದರೂ, ಜನ ಸಂಖ್ಯೆಯು 1750ರಲ್ಲಿ 125 ಮಿಲಿಯನ್ ಇದ್ದರೆ, 1941ರ ಹೊತ್ತಿಗೆ 389 ಮಿಲಿಯನ್ ತಲುಪಿತ್ತು.ವಾಸ್ಕೋಡಿಗಾಮ 1498ರಲ್ಲಿ ಭಾರತಕ್ಕೆ ಹೊಸ ಸಮುದ್ರ ಮಾರ್ಗವನ್ನು ಕಂಡುಹಿಡಿ ಯುವ ಮೂಲಕ ಯೂರೋಪ್ ಮತ್ತು ಭಾರತದ ಮಧ್ಯೆ ನೇರವಾದ ವ್ಯಾಪಾರಕ್ಕೆ ಕಾರಣ ಕರ್ತನಾದ. ಪೋರ್ಚುಗೀಸರು ಗೋವಾ, ಡಿಯೂ, ಡಾಮನ್ ಪ್ರದೇಶಗಳಲ್ಲಿ, ವ್ಯಾಪಾರೀ ಕೇಂದ್ರಗಳನ್ನು ಸ್ಥಾಪಿಸಿದರು. ನಂತರ ಡಚ್ಚರು ಮತ್ತು ಫ್ರೆಂಚರು ವ್ಯಾಪಾರೀ ಕೇಂದ್ರಗಳನ್ನು ಸ್ಥಾಪಿಸಿದರು. 1619ರಲ್ಲಿ ಇಂಗ್ಲಿಷರು ಗೋವಾ ದಲ್ಲಿ ವ್ಯಾಪಾರೀ ಕೇಂದ್ರವನ್ನು ಸ್ಥಾಪಿಸಿದರು.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ತೆರಿಗೆ , ಕ್ರೂರ ಆಳ್ವಿಕೆಯಿಂದ ರೋಸಿ ಹೋಗಿದ್ದ ಜನರು 1857ರಲ್ಲಿ ದಂಗೆ ಎದ್ದರು. ಒಂದು ವರ್ಷದ ದಂಗೆಯ ತರುವಾಯ ಈಸ್ಟ್ ಇಂಡಿಯಾ ಕಂಪೆನಿ ಇಂಗ್ಲೆಂಡಿನಿಂದ ಸೈನಿಕರನ್ನು ಕರೆತಂದು ದಂಗೆಯನ್ನು ಅಡಗಿಸುತ್ತದೆ. ಈ ದಂಗೆಯ ನಾಯಕತ್ವ ವಹಿಸಿದ್ದ ಮೊಗಲ್‌ದೊರೆ ಬಹಾದ್ದೂರ್ ಶಾ ಜಫಾರ್‌ರನ್ನು ಬರ್ಮಾ ದೇಶದಲ್ಲಿ ಬಂಧಿಸಿಡಲಾಯಿತು ಮತ್ತು ಅವರ ಮಕ್ಕಳ ತಲೆಯನ್ನು ಕತ್ತರಿಸಿ ರಾಜರ ಆಳ್ವಿಕೆಗೆ ವಾರಸುದಾರರು ಇಲ್ಲದಂತೆ ಮಾಡಲಾಯಿತು.
ಬ್ರಿಟಿಷರ ಆಳ್ವಿಕೆ ಅತ್ಯಂತ ಕೆಟ್ಟ, ಭಯಂಕರ ಮತ್ತು ಪರಮನೀಚತನದಿಂದ ಕೂಡಿತ್ತು. ಸಮುದ್ರ ಕಳ್ಳರಾಗಿದ್ದ ಬ್ರಿಟಿಷರು ಭಾರತವನ್ನು ಪ್ರವೇಶಿಸಿ ಭಾರತದ ಪ್ರಾಂತ್ಯಗಳನ್ನು ಲೂಟಿ ಮಾಡಿ ನಾಶ ಮಾಡಿದರು. 17ನೇ ಶತಮಾನ ದಲ್ಲಿ ಭಾರತವು ವಿಶ್ವದ ಆರ್ಥಿಕತೆಯಲ್ಲಿ 2ನೇ ಸ್ಥಾನ ಹೊಂದಿತ್ತು. ವಿಶ್ವದ ಒಟ್ಟು ಸಂಪತ್ತಿನಲ್ಲಿ ಭಾರತದ ಪಾಲು 22%ದಷ್ಟಿತ್ತು. ಬ್ರಿಟಿಷರು ಭಾರತ ಬಿಟ್ಟು ತೊಲಗಿದಾಗ ಅದರ ಪಾಲು 0.1%ಕ್ಕೆ ಇಳಿದಿತ್ತು.ಮೊಗಲರ ಆಳ್ವಿಕೆಯಲ್ಲಿ ಭಾರತ ಚಿನ್ನದಿಂದ ಕಂಗೊಳಿಸುತ್ತಿತ್ತು. ಬ್ರಿಟಿಷರು ಚಿನ್ನದ ದೂಳನ್ನು ಬಿಟ್ಟು, ಅಪಾರ ಪ್ರಮಾಣದ ಚಿನ್ನವನ್ನು ತಾಯ್ನಿ ಡಿಗೆ ಕದ್ದೊಯ್ದರು. 1901-1910ರ ಕಡಿಮೆ ಅವಧಿಯಲ್ಲಿ ಕೋಲಾರದ ಚಿನ್ನದ ಗಣಿಯಿಂದ 1,70,000 ಕೆ.ಜಿ ಚಿನ್ನವನ್ನು ಜಾನ್‌ಟೇಲರ್ ಎಂಡ್ ಕಂಪೆನಿ ತಾಯ್ನೊಡಿಗೆ ರವಾನಿಸುತ್ತದೆ.
ಆಗ ಈ ಗಣಿಯಲ್ಲಿ ಒಂದು ಟನ್ ಅದಿರಿಗೆ 40 ಗ್ರಾಂ ಚಿನ್ನ ದೊರೆಯುತ್ತಿತ್ತು. 1956ರಲ್ಲಿ ಗಣಿ ರಾಷ್ಟ್ರೀಕರಣ ಮಾಡುವವರೆಗೂ ಇಂಗ್ಲಿ ಷರು ಪ್ರತೀ ತಿಂಗಳು ಅವರ ದೇಶದ ಖಜಾನೆಗೆ ಚಿನ್ನ ರವಾನಿಸುತ್ತಿದ್ದರು. ಬ್ರಿಟಿಷರ ಭಾರತದ ಆಳ್ವಿಕೆ ಒಂದು ಸಂಘ ಟಿತ ದರೋಡೆಕೋರರ ದರೋಡೆಯಾಗಿತ್ತು. ಈ ಸಂಘಟಿತ ದರೋಡೆ ಬ್ರಿಟಿಷರ ಕೈಗಾರಿಕಾ ಕ್ರಾಂತಿಗೆ ಸಹಾಯವಾಗಿತ್ತು. ಕೊನೆಯ 200ವರ್ಷಗಳ ಬ್ರಿಟೀಷರ ಆಳ್ವಿಕೆಯಲ್ಲಿ ಚಿನ್ನ, ಬೆಳ್ಳಿ,ವಜ್ರ ಹೊರತುಪಡಿಸಿ ಒಂದು ಟ್ರಿಲಿಯನ್ ಡಾಲರ್ ಹಣದ ಮೊತ್ತವನ್ನು ಲೂಟಿ ಮಾಡಿದರು. ಕೊಹಿನೂರ್ ವಜ್ರವೊಂದೇ 10 ಬಿಲಿ ಯನ್ ಪೌಂಡ್ ಬಾಳುತ್ತದೆ. ಭಾರತದಿಂದ ಲೂಟಿ ಮಾಡಿದ ಹಣವು 1770ರ ಮಧ್ಯ ಭಾಗದ ಪಶ್ಚಿಮ ರಾಷ್ಟ್ರಗಳ ಕೈಗಾರಿಕಾ ಕ್ರಾಂತಿಗೆ, ಅದರಲ್ಲೂ ಬ್ರಿಟಿಷ್ ಕೈಗಾರಿಕಾ ಕ್ರಾಂತಿಗೆ ಸಂಪೂರ್ಣವಾಗಿ ಸಹಾಯವಾಗಿತ್ತು.
18ನೇ ಶತಮಾನದ ಸಂಪತ್ತು ಬ್ರಿಟಿಷ್ ಮತ್ತು ಫಾನ್ಸ್ ದೇಶದ ವ್ಯಾಪಾರೀ ಕಳ್ಳರನ್ನು ಆಕರ್ಷಿಸುತ್ತದೆ. ಸುಮಾರು 350 ವರ್ಷಗಳ ಕಾಲ ಬ್ರಿಟಿಷರ ಹಿಂಸಾತ್ಮಕ ಆಳ್ವಿಕೆಗೆ ಒಳ ಪಟ್ಟ ಭಾರತದಲ್ಲಿ ಭೀಕರ ಬರಗಾಲ, ರೋಗ ಮತ್ತು ಗುಂಡೇಟಿಗೆ ಬಲಿಯಾಗಿ 40 ಮಿಲಿಯನ್ ಜನರು ಸಾವನ್ನಪ್ಪುತ್ತಾರೆ.ಬ್ರಿಟಿಷರು ಭಾರತದಿಂದ ಹಣದ ಜೊತೆಗೆ ತಂತ್ರಜ್ಞಾನವನ್ನು ಕೊಂಡೊಯು ತ್ತಾರೆ. ವಿಲ್ ಡ್ಯೂರೆಂಟ್ ಅಮೆರಿಕದ ಇತಿಹಾಸ ತಜ್ಞ ಈ ರೀತಿ ಬರೆಯುತ್ತಾರೆ. ಭಾರತವು ಹಡಗು ನಿರ್ಮಾಣದಲ್ಲಿ ಮತ್ತು ಉಕ್ಕು ಬಟ್ಟೆ ಉದ್ಯಮದಲ್ಲಿ ಕಂಗೊಳಿಸುತ್ತಿತ್ತು. ಬ್ರಿಟಿಷರ ಪ್ರವೇಶದ ನಂತರ ಎಲ್ಲಾ ನಾಶವಾಯಿತು. ವಸಾಹತುಶಾಹಿ ಆಳ್ವಿಕೆ ಜನಾಂಗೀಯ ಬಣ್ಣ ದಿಂದ ಕೂಡಿರುತ್ತದೆ. ಬ್ರಿಟಿಷ್ ಸರ್ವಾಧಿಕಾರಿ ಆಳ್ವಿಕೆ ವಸಾಹತು ದೇಶಗಳಲ್ಲಿ ಜನರನ್ನು ಹತ್ತಿಕ್ಕಲು ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಹಿಂಸೆಯನ್ನು ಬಳಸುತ್ತಿದ್ದರು.
ಲಂಡನ್ನಿನ ತಮ್ಮ ಕಚೇರಿಯಿಂದಲೇ ವಸಾಹತುಗಳನ್ನು ನಿಯಂತ್ರಿ ಸುತ್ತಿದ್ದರು. ತಾವು ಆಳುತ್ತಿದ್ದ ವಸಾಹತು ಗಳಲ್ಲಿ ಅಲ್ಪಸಂಖ್ಯಾತ ಜನಾಂಗೀಯ ಗುಂಪೊಂದನ್ನು ಪ್ರೋತ್ಸಾಹಿಸಿ ಬಹು ಸಂಖ್ಯಾತ ಜನರ ಮೇಲೆ ಎತ್ತಿಕಟ್ಟುತ್ತಿದ್ದರು. ಸಾಮಾನ್ಯವಾಗಿ ಸಂಪ್ರದಾಯವಾದಿ ಅಲ್ಪ ಸಂಖ್ಯಾತರಿಗೆ ಆದ್ಯತೆ ನೀಡುತ್ತಿದ್ದರು. ಬ್ರಿಟಿಷ್ ಸಾಮ್ರಾಜ್ಯ ಶಾಹಿಗಳು ನಿರೂ ಪಿಸಿದ 1947ರ ಜನಾಂಗೀಯ ಹಿಂಸೆಗೆ ಒಂದು ಕೋಟಿಗೂ ಹೆಚ್ಚು ಜನರು ಭಾರತದಲ್ಲಿ ಬಲಿಯಾಗುತ್ತಾರೆ. ಆಫ್ರಿಕಾದ ವಸಾಹತೀಕರಣ: ಆಫ್ರಿಕಾ ಖಂಡವು 1870ರ ಮಧ್ಯೆೆ ಯೂರೋಪಿ ಯನ್ ವಸಾಹತುಗಳಿಂದ ಹಲವಾರು ರೀತಿಯ ದಾಳಿಗಳನ್ನು ಎದುರಿಸಿದವು.
ಮುಖ್ಯವಾಗಿ ರಾಜತಾಂತ್ರಿಕ ಒತ್ತಡ, ವಸಾಹತು ದಾಳಿ, ಸೈನಿಕ ದಾಳಿ. ಅಂತಿಮ ವಾಗಿ ಸೈನಿಕ ಆಕ್ರಮಣ ವಸಾಹತೀಕರಣ ದಲ್ಲಿ ಅಂತ್ಯಗೊಳ್ಳುತ್ತದೆ. ವಿದೇಶಿ ಆಳ್ವಿಕೆಗೆ ಆಫ್ರಿಕಾದ ಬುಡಕಟ್ಟು ಜನಾಂಗಗಳು ತೀವ್ರ ಪ್ರತಿರೋಧವನ್ನು ಒಡ್ಡುತ್ತವೆ. 20ನೇ ಶತಮಾನದ ಆರಂಭಕ್ಕೆ ಬಹುತೇಕ ಆಫ್ರಿಕಾ ಖಂಡವು ಯುತೋಫಿಯಾ, ಲೈಬೀರಿಯಾ, ಹೊರತು ಪಡಿಸಿ ವಸಾಹತು ಆಳ್ವಿಕೆಗೆ ಒಳಪಡುತ್ತದೆ.
ಆಫ್ರಿಕಾ ಖಂಡವನ್ನು ಆಕ್ರಮಿಸಿಕೊಳ್ಳುವುದಕ್ಕೆ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿತ್ತು. ಗುಲಾಮರ ಮಾರಾಟ ಕುಸಿದಿದ್ದರಿಂದ ಮತ್ತು ಕೈಗಾರಿಕಾ ಕ್ರಾಂತಿಯ ಬೆಳವಣಿಗೆಯಿಂದ ಮೇಲಿನ ಸಮಸ್ಯೆಗಳು (ಕಾರಣಗಳು) ಹುಟ್ಟಿಕೊಳ್ಳುತ್ತವೆ. ಬಂಡವಾಳಶಾಹಿ ಕೈಗಾರಿಕೆಗಳಿಗೆ ಅತ್ಯವಶ್ಯಕವಾಗಿ ಬೇಕಾಗಿದ್ದ ಕಚ್ಚಾ ಸಾಮಾಗ್ರಿಗಳು, ಖನಿಜಗಳು ಮಾರುಕಟ್ಟೆ ಮತ್ತು ಲಾಭದಾಯಕ ಉದ್ದಿಮೆಗಳು ಯೂರೋಪಿನ ವಸಾಹತುಶಾಹಿಗಳು ಆಫ್ರಿಕಾ ಖಂಡವನ್ನು ಆಕ್ರಮಿಸಿಕೊಳ್ಳಲು ಪ್ರೇರೇಪಿಸಿದವು. ಆರ್ಥಿಕ ಕಾರಣವು ಆಫ್ರಿಕಾವನ್ನು ಆಕ್ರಮಿಸಿಕೊಳ್ಳಲು ಪ್ರಮುಖ ಕಾರಣವಾಗಿತ್ತು.
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...