ಅಂಕಣ

mail-img print-img

ಸಾವಿನ ವ್ಯಾಪಾರಿಗಳ ಮಾನವ ಹಕ್ಕಿನ ಇತಿಹಾಸ... ಭಾಗ-3

ಗುರುವಾರ - ಆಗಸ್ಟ್ -02-2012

ಆಫ್ರಿಕವನ್ನು ಆಕ್ರಮಿಸಿಕೊಳ್ಳಲು ಇನ್ನು ಹಲವಾರು ಕಾರಣಗಳಿದ್ದವು. ಯೂರೋಪಿನ ರಾಷ್ಟ್ರಗಳು ನಾಯಕತ್ವ ಮತ್ತು ಪೈಪೋಟಿ ನಡೆಸುತ್ತಿದ್ದವು. ಬ್ರಿಟನ್, ಫ್ರಾನ್ಸ್, ಜರ್ಮನಿ, ಬೆಲ್ಜಿಯಂ, ಇಟಲಿ, ಪೋರ್ಚುಗಲ್ ಮತ್ತು ಸ್ಪೇನ್ ಯೂರೋಪಿನಲ್ಲಿ ರಾಜಕೀಯ ನಾಯಕತ್ವಕ್ಕಾಗಿ ಪೈಪೋಟಿ ನಡೆಸುತ್ತಿದ್ದರು. ಪ್ರಪಂಚದ ಇತರೆಡೆಗೆ ಅದರಲ್ಲೂ ಆಫ್ರಿಕಾದಲ್ಲಿ ಭೂಮಿಗಳನ್ನು ವಶಪಡಿಸಿಕೊಳ್ಳುವುದರ ಮೂಲಕ ತಮ್ಮ ಶಕ್ತಿ ಮತ್ತು ಪ್ರತಿಷ್ಠೆ ಪ್ರದರ್ಶಿಸಿದ್ದವು. ಸಾಮಾಜಿಕ ಅಂಶವು ಮೂರನೇ ಪ್ರಮುಖ ಕಾರಣವಾಗಿತ್ತು. ಕೈಗಾರಿಕೀಕರಣ ಹಲವಾರು ಸಮಸ್ಯೆಗಳನ್ನು ಯೂರೋಪಿನಲ್ಲಿ ಹುಟ್ಟು ಹಾಕಿದವು. ನಿರುದ್ಯೋಗ ಸಮಸ್ಯೆ, ಬಡತನ, ಅನಾಥರ ಸಮಸ್ಯೆ, ಹಳ್ಳಿಗಳಿಂದ ಜನರ ವಲಸೆ ಹೀಗೆ ಇನ್ನೂ ಹಲವಾರು ಸಮಸ್ಯೆಗಳು. ಈ ಸಮಸ್ಯೆಗಳು ಏತಕೆ ಹುಟ್ಟಿಕೊಂಡವೆಂದರೆ ಬಂಡವಾಳಶಾಹಿ ಕೈಗಾರಿಕೀಕರಣದಿಂದ ಸಮಾಜದ ಎಲ್ಲಾ ಜನರಿಗೂ ಅನುಕೂಲವಾಗುವುದಿಲ್ಲ. ಬಂಡವಾಳ ಶಾಹಿ ವ್ಯವಸ್ಥೆಯಿಂದ ವಂಚಿತರಾದ ‘ಹೆಚ್ಚುವರಿ’ ಜನರನ್ನು ಹೊಸ ವಸಾಹತುಗಳಿಗೆ ರಫ್ತು ಮಾಡಿ ಸಮಸ್ಯೆಯನ್ನು ಬಗೆಹರಿಸುವುದೇ ಆಲ್ಜೀರಿಯಾ, ಟುನಿಷಿಯಾ, ದಕ್ಷಿಣ ಆಫ್ರಿಕಾ, ಅಂಗೋಲ, ಮಧ್ಯ ಆಪ್ರಿಕಾದ ಜಿಂಬಾಬ್ವೆ ಆಕ್ರಮಿಸುವ ಉದ್ದೇಶವಾಗಿತ್ತು. ೧೯೧೪ರ ಹೊತ್ತಿಗೆ ಯೂರೋಪಿಯನ್ನರು ಹೊರದೇಶಗಳಿಗೆ ಲಕ್ಷಗಳಲ್ಲಿ ವಲಸೆ ಹೋದರು.

]ಯೂರೋಪಿನ ಹೆಚ್ಚಿನ ಜನರು ಕಷ್ಟದ ಕೆಲಸಗಳಿಗೆ ತಯಾರಾಗಿರಲಿಲ್ಲ. ಕಷ್ಟದ ಕೆಲಸ ಅವರಿಗೆ ಅವಮಾನದ ಸಂಕೇತವಾಗಿತ್ತು. ಕೆಲವರು ತಾತ್ಕಾಲಿಕವಾಗಿ ನೆಲೆಸುವ ಉದ್ದೇಶದಿಂದ ವಲಸೆ ಹೋದರು. ವಲಸೆ ಹೋದವರಲ್ಲಿ ಹೆಚ್ಚಿನವರು ಇಂಗ್ಲಿಷಿನವರಾಗಿದ್ದರು. ೨.೫ ಮಿಲಿಯನ್ ಜನ ಕೆನಡ ದೇಶಕ್ಕೆ ವಲಸೆ ಹೋಗುತ್ತಾರೆ. ೧.೫ಮಿಲಿಯನ್ ಜನ ಆಸ್ಟ್ರೇಲಿಯಾ ದೇಶಕ್ಕೆ ೭,೫೦,೦೦೦ ಜನ ನ್ಯೂಜಿಲ್ಯಾಂಡ್ ದೇಶಕ್ಕೆ, ೪,೫೦,೦೦೦ ಜನ ದಕ್ಷಿಣ ಆಫ್ರಿಕಾಕ್ಕೆ, ೨,೦೦,೦೦೦ ಜನ ಭಾರತಕ್ಕೆ ವಲಸೆ ಹೋಗುತ್ತಾರೆ.

ಫ್ರಾನ್ಸ್ ದೇಶದ ನಾಗರಿಕರು ಉತ್ತರ ಆಫ್ರಿಕಾದ ಮೆಗ್ರಾಜ್ ಪ್ರದೇಶಕ್ಕೆ ವಲಸೆ ಹೋಗುತ್ತಾರೆ. ೧.೩ ಮಿಲಿಯನ್ ಜನ ಅಲ್ಜೀರಿಯಾ ದೇಶಕ್ಕೆ ೨,೦೦,೦೦೦ ವೊರೊಕ್ಕೋ ದೇಶಕ್ಕೆ, ೧,೦೦,೦೦೦ ಜನ ಟ್ಯುನೀಶಿಯಾ ದೇಶಕ್ಕೆ , ೨೦,೦೦೦ ಜನ ಇಂಡೋ-ಚೈನಾಗೆ ವಲಸೆ ಹೋಗುತ್ತಾರೆ. ಪೋರ್ಚುಗಲ್ ಅಂಗೋಲ ದೇಶಕ್ಕೆ ೧,೫೦,೦೦೦ ಜನರನ್ನು ‘ರಫ್ತು’ ಮಾಡಿದರೆ, ವೊಜಾಂಬಿಕ್ ದೇಶಕ್ಕೆ ೮೦,೦೦೦ ಜನ ಮತ್ತು ಗೋವಾಗೆ ೨೦,೦೦೦ ಜನರನ್ನು ‘ರಫ್ತು’ ಮಾಡುತ್ತದೆ. ಸ್ಪೇನ್ ದೇಶದ ಆಳ್ವಿಕೆಯಲ್ಲಿ ೫,೫೦,೦೦೦ ಜನ ಅಮೆರಿಕ ಖಂಡಕ್ಕೆ ವಲಸೆ ಹೋಗುತ್ತಾರೆ.ಯೂರೋಪಿಯನ್ ವಸಾಹತುಶಾಹಿಗಳು ಆಫ್ರಿಕಾದಲ್ಲಿ ಕ್ರೂರ ಹಿಂಸೆಯ ಮೂಲಕ ಆಳ್ವಿಕೆ ನಡೆಸಿದರು.

೧೮೮೭ರಲ್ಲಿ ಜೆ.ಬಿ.ಡೆನ್‌ಲಪ್ ದ್ವಿಚಕ್ರ ವಾಹನಗಳಿಗೆ ಬಳಸುವ ರಬ್ಬರನ್ನು ಕಂಡುಹಿಡಿದ. ಇದರಿಂದ ರಬ್ಬರಿಗೆ ಬೇಡಿಕೆ ಹೆಚ್ಚಾಯಿತು. ಇಡೀ ರಬ್ಬರ್ ವ್ಯಾಪಾರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬೆಲ್ಜಿಯಂ ರಾಜ ಲಿಯೋಪಾಲ್ಡ್  ಕಾಂಗೋ ದೇಶದ ಜನರನ್ನು ಜೀತದಾಳುಗಳನ್ನಾಗಿ ಮಾಡಿಕೊಂಡಿದ್ದ. ಆ ದೇಶದ ಜನ ಬೆಲೆಬಾಳುವ ದಂತ ಮತ್ತು ರಬ್ಬರನ್ನು, ಲೋಟ, ಚಮಚ ಮತ್ತು ತಟ್ಟೆಗಳಿಗೆ ಪ್ರತಿಯಾಗಿ ಕಾಂಗೋ ಸರಕಾರಕ್ಕೆ ನೀಡಬೇಕಾಗಿತ್ತು. ಕಾಂಗೋದ ಈ ಜೀತದಾಳು ಜನತೆ ದಂತ ಮತ್ತು ರಬ್ಬರನ್ನು ಕಾಡಿನಲ್ಲಿ ಅಲೆದಾಡಿ ಸಂಗ್ರಹಿಸಿ, ತಮ್ಮ ಬುಡಕಟ್ಟು ನಾಯಕರಿಗೆ ಒಪ್ಪಿಸುತ್ತಿದ್ದರು.

ಬುಡಕಟ್ಟು ನಾಯಕರು ಜೀತದಾಳುಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜನರು ಕಾಡಿನಲ್ಲಿ ಅವಿತುಕೊಳ್ಳುತ್ತಿದ್ದರು.೧೮೮೫-೧೯೦೮ರ ನಡುವೆ ಕಾಂಗೋ ದೇಶದ ಜನಸಂಖ್ಯೆ ೧೦ಮಿಲಿಯನ್‌ನಷ್ಟು ಕಡಿಮೆಯಾಗುತ್ತದೆ.ಲಿಯೋಪಾಲ್ಡ್ || ನ ಸೈನಿಕರು ಒಂದು ಗುಂಡಿಗೆ ಒಂದು ಬಲಕೈಯನ್ನು ಲಿಯೋಪಾಲ್ಡ್ || ನ ಸರಕಾರಕ್ಕೆ ತೋರಿಸಬೇಕಾಗಿತ್ತು. ಆಹಾರಕ್ಕಾಗಿ ಬೇಟೆಯಾಡಲು ಮದ್ದುಗುಂಡು ದುರುಪಯೋಗ ಮಾಡಿಕೊಳ್ಳುತ್ತಾರೆಂಬ ಕಾರಣದಿಂದ ಈ ಕಾನೂನು ಮಾಡಲಾಗಿತ್ತು. ಇದನ್ನು ಪ್ರತಿಭಟಿಸಿದ ಹಳ್ಳಿಗಳ ಮೇಲೆ ಸರಕಾರಿ ಸೈನಿಕ ದಾಳಿಗಳ ಬಗ್ಗೆ ಒಬ್ಬ ಬಿಳಿಯ ಅಧಿಕಾರಿ ಈ ರೀತಿ ವಿವರಿಸುತ್ತಾನೆ: “ಸೈನ್ಯಾಧಿಕಾರಿ ಗಂಡಸರ ತಲೆಗಳನ್ನು ಬಲವಾದ ಚೂಪು ಮರದ ದಸಿಬೇಲಿಗೆ ನೇತುಹಾಕಲು... ಮತ್ತು ಹೆಂಗಸರ, ಮಕ್ಕಳ ತಲೆಗಳನ್ನು ಕಡಿದು ಬಲವಾದ ಚೂಪು ಮರದ ದಸಿ ಬೇಲಿಯ ಮೇಲೆ ಶಿಲುಬೆಯಾಕಾರದಲ್ಲಿ ನೇತುಹಾಕಲು ಆಜ್ಞಾಪಿಸುತ್ತಾನೆ.

ಮೊಟ್ಟವೊದಲ ಬಾರಿಗೆ ಕಾಂಗೋ ಪ್ರಜೆಯನ್ನು ಕೊಲ್ಲುವುದನ್ನು ನೋಡಿದ ಪಾದ್ರಿ ಈ ರೀತಿ ಬರೆಯುತ್ತಾನೆ: “ಒಬ್ಬ ಸೈನಿಕ ಹೇಳುತ್ತಾನೆ, ಇದನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಡ ರಬ್ಬರನ್ನು ತರಲಿಲ್ಲವೆಂದರೆ ಅವರು ನಮ್ಮನ್ನು ಕೊಲ್ಲುತ್ತಾರೆ. ಹೆಚ್ಚಿನ ಕಡಿದ ಕೈಗಳನ್ನು ತಂದರೆ ನಮ್ಮ ಸೇವಾವಧಿಯನ್ನು ಕಡಿಮೆ ಮಾಡುವುದಾಗಿ  ಸೈನ್ಯಾಧಿಕಾರಿ ನಮಗೆ ಆಶ್ವಾಸನೆ ನೀಡಿದ್ದಾರೆ.”ಕತ್ತರಿಸಿದ ಕೈಗಳನ್ನು ತುಂಬಿದ ಬುಟ್ಟಿಗಳನ್ನು ಯೂರೋಪಿನ ಸೈನ್ಯಾಧಿಕಾರಿಗಳ ಮುಂದೆ ಅರ್ಪಿಸಲಾಗುತ್ತಿತ್ತು ಮತ್ತು ಇದು ಮುಂದೆ ಕಾಂಗೋ ದೇಶದ ಚಿಹ್ನೆಯಾಗುತ್ತದೆ. ಕೈಗಳನ್ನು ಕತ್ತರಿಸುವುದೇ ಒಂದು ಉದ್ಯಮವಾಗಿತ್ತು. ಫೋರ್ಸ್ ಪಬ್ಲಿಕ್ ಪಡೆ(ಆಂಗ್ಲ ಹೆಸರು) ರಬ್ಬರ್ ಬದಲಾಗಿ ಕಡಿದ ಕೈಗಳನ್ನು ತರುತ್ತಿದ್ದರು. ಕೈಗಳನ್ನು ಕತ್ತರಿಸಿ ತರುವುದಕ್ಕಾಗಿಯೇ ಕಾಡಿಗೆ ಹೋಗುತ್ತಿದ್ದರು..... ಕತ್ತರಿಸಿದ ಕೈ ಒಂದು ಚಲಾವಣೆಯ ನೋಟಿನಂತಾಯಿತು.

ರಬ್ಬರ್ ಸಂಗ್ರಹಣೆಯಲ್ಲಿ ಕಡಿಮೆಯಾಯಿತೆಂದರೆ ಕತ್ತರಿಸಿದ ಕೈಗಳನ್ನು ಸಂಗ್ರಹಿಸಿ ಒಪ್ಪಿಸುತ್ತಿದ್ದರು. ರಬ್ಬರ್ ಸರಬರಾಜಿನ ಗುತ್ತಿಗೆದಾರರಾದ ಫೋರ್ಸ್ ಪಬ್ಲಿಕ್, ಸೈನಿಕರಿಗೆ ಮತ್ತು ಆದಿವಾಸಿ ಮುಖ್ಯಸ್ಥರಿಗೆ ಕತ್ತರಿಸಿದ ಕೈಗಳ ಒಟ್ಟು ಸಂಗ್ರಹಗಳ ಮೇಲೆ ಬೋನಸ್ಸನ್ನು ನೀಡುತ್ತಿದ್ದರು. ಕತ್ತರಿಸಿದ ಬಲಗೈ ಕೊಲೆಯನ್ನು ಸಾಬೀತು ಪಡಿಸುತ್ತಿತ್ತು. ಸೈನಿಕರು ವ್ಯಕ್ತಿಯ ಕೈಯನ್ನಷ್ಟೆ ಕತ್ತರಿಸುತ್ತಿದ್ದರೂ, ಅವನು ಹಾಗೆಯೇ ನರಳಿ ಸಾಯುತ್ತ್ತಿದ್ದ. ಕೈಗಳನ್ನು ಕತ್ತರಿಸಿದ ಮೇಲೆ ಶರೀರವನ್ನು ಸ್ವಲ್ಪವೂ ಅಲುಗಾಡಿಸದೆ, ಸೈನಿಕರು ಹೋಗುವವರೆಗೂ ಸತ್ತವರಂತೆ ನಟನೆ ಮಾಡಿ, ನಂತರ ಸಹಾಯ ಯಾಚಿಸಿ ಕೆಲವರು ಈ ಮಾರಣ ಹೋಮದಿಂದ ತಪ್ಪಿಸಿಕೊಳ್ಳುತ್ತಿದ್ದರು. ೧೯೦೮ರಿಂದ ೧೯೨೪ರ ಅವಧಿಯಲ್ಲಿ ಕಾಂಗೋ ದೇಶದ ಜನಸಂಖ್ಯೆ ೩೦ಮಿಲಿಯನ್‌ನಿಂದ ೮-೮.೫ ಮಿಲಿಯನ್‌ಗೆ ಇಳಿಕೆಯಾಯಿತು.

೧೯ನೇ ಮತ್ತು ೨೦ನೇ ಶತಮಾನದ ಯೂರೋಪಿನ ಸಾಮ್ರಾಜ್ಯಶಾಹಿಗಳ ಪೈಪೋಟಿಯಲ್ಲಿ ಸ್ಥಳೀಯವಾಗಿ ಹಬ್ಬಿಸಲ್ಪಟ್ಟ ಸಾಂಕ್ರಾಮಿಕ ರೋಗಗಳನ್ನು ವಿಶ್ವಮಟ್ಟದಲ್ಲಿ ಹಬ್ಬಿಸಲು ಯಶಸ್ವಿಯಾದರು. ೧೮೮೦ರಿಂದ ೧೯೨೦ರ ಪೀಳಿಗೆಯಲ್ಲಿ ಐರೋಪ್ಯ ಶಕ್ತಿಗಳು ಏಷಿಯಾ ಮತ್ತು ಆಫ್ರಿಕಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿದವು. ಇದಕ್ಕಾಗಿ ಏಡ್ಸ್ ರೋಗವನ್ನು ವ್ಯಾಪಾರದ ಮುಖಾಂತರ ಹಬ್ಬಿಸುವಲ್ಲಿ ಯಶಸ್ವಿಯಾದರು. ಇಂದು ವಿಶ್ವದಲ್ಲಿ ೩೩ಮಿಲಿಯನ್ ಹೆಚ್‌ಐವಿ ರೋಗಿಗಳಿದ್ದಾರೆ. ಆಫ್ರಿಕಾ ಖಂಡವನ್ನು ವಸಾಹತು ಶಾಹೀಕರಣಗೊಳಿಸಲು  ಯೂರೋಪಿಯನ್ ಸಾಮ್ರಾಜ್ಯವಾದಿ ಕ್ರಿಶ್ಚಿಯನ್ ಧರ್ಮವನ್ನು ಬಳಸಿಕೊಂಡವು.

ಯೂರೋಪಿಯನ್ನರ ಆಗಮನಕ್ಕೆ ಮುನ್ನ ಸಂಪ್ರದಾಯವಾದಿ ಇಸ್ಲಾಂ ಆಫ್ರಿಕಾ ಖಂಡದ ಮುಖ್ಯ ಧರ್ಮವಾಗಿತ್ತು. ಈಗ ಆಫ್ರಿಕಾದ ಒಟ್ಟು ಜನಸಂಖ್ಯೆಯಲ್ಲಿ ಶೇಖಡಾ ೪೫ರಷ್ಟು ಜನ ಕ್ರೈಸ್ತರಿದ್ದಾರೆ.೧೯೨೦ರಲ್ಲಿ ಫ್ರೆಂಚರು ತಾವು ಆಳುತ್ತಿದ್ದ ಕಾಂಗೋ ಪ್ರದೇಶದಲ್ಲಿ ಬಲವಂತವಾಗಿ ನೀಗ್ರೋ ಜನರನ್ನು ರೈಲ್ವೆ ಕಂಬಿ ಹಾಕುವ ಕೆಲಸ ಮಾಡಿಸುತ್ತಿದ್ದರು. ಇಪ್ಪತ್ತು ಸಾವಿರ ಕಪ್ಪು ಜನರು ಹಸಿವು, ಆಯಾಸದಿಂದ ಬಳಲಿ ಪ್ರಾಣ ಬಿಡುತ್ತಾರೆ. ಅದೇ ರೀತಿ ೧೮೮೫ ರಲ್ಲಿ ಸೂಯೆಜ್ ಕಾಲುವೆ ನಿರ್ಮಾಣದ ಉಸ್ತುವಾರಿಯನ್ನು ಫ್ರೆಂಚಿನ ಫರ್ಡಿನಾಂಡ್ ಲೆನ್ಸ್‌ಪರ್ ವಹಿಸಿಕೊಳ್ಳುತ್ತಾರೆ.

೧,೨೦,೦೦೦ ಕಪ್ಪು ಜನರು ಹಸಿವು, ದಣಿವು, ಕಾಲರಾ ಇನ್ನಿತರ ರೋಗಗಳಿಗೆ ತುತ್ತಾಗಿ ಪ್ರಾಣ ಬಿಡುತ್ತಾರೆ. ಕೊನೆಯದಾಗಿ ೧೯೫೦ರಲ್ಲಿ ಇಂಗ್ಲಿಷ್ ಸಾಮ್ರಾಜ್ಯವಾದಿಗಳು ಕೀನ್ಯಾದ ಕಿಕಿಯ ಜನಾಂಗದ ಮೇಲೆ ನಡೆಸಿದ ದೌರ್ಜನ್ಯದ ಬಗ್ಗೆ ಮಾತನಾಡದೆ ಈ ಲೇಖನ ಅಪೂರ್ಣವೆನಿಸುತ್ತದೆ. ಕೀನ್ಯದ ಕಿಕಿಯ ಮವು ಬುಡಕಟ್ಟು ಜನಾಂಗದ ಮೇಲೆ ಬ್ರಿಟಿಷ್ ಸಾಮ್ರಾಜ್ಯವಾದಿಗಳು ನಡೆಸಿರುವ ದೌರ್ಜನ್ಯ ಅಷ್ಟಿಷ್ಟಲ್ಲ. ೧೫ಲಕ್ಷ ಕಿಕಿಯ ಜನರನ್ನು ಭದ್ರಪಡಿಸಿದ ಶಿಬಿರಗಳಲ್ಲಿ ಕೂಡಿ ಹಾಕುತ್ತಾರೆ. ಸಾವಿರಾರು ಸಂಖ್ಯೆಯ ಜನರನ್ನು ಚಿತ್ರಹಿಂಸೆಗೊಳಪಡಿಸಿ ಕೊಲ್ಲಲಾಯಿತು. ಮತ್ತು ಅಸಂಖ್ಯಾತ ಜನರು ಆಹಾರದ ಕೊರತೆ, ಟೈಫಾಯಿಡ್, ಟಿಬಿ, ವಾಂತಿ, ಭೇದಿ ಕಾಯಿಲೆಗಳಿಂದ ಸಾವನ್ನಪ್ಪುತ್ತಾರೆ.ಬಂಧಿಗಳನ್ನು ಗುಲಾಮರಂತೆ ಬಳಸಿಕೊಳ್ಳಲಾಯಿತು.

ಹೊರ ಬಾಗಿಲುಗಳ ಮೇಲೆ ‘ಕೆಲಸ ಮತ್ತು ಸ್ವಾತಂತ್ರ’ ಮತ್ತು ‘ಯಾರು ಅವರಿಗೋಸ್ಕರ ಸ್ವಸಹಾಯ ಮಾಡಿಕೊಳ್ಳುತ್ತಾನೋ ಅವನಿಗೆ ಸ್ವಸಹಾಯ ಮಾಡಲಾಗುವುದು’ ಎಂಬ ಘೋಷಣೆಗಳನ್ನು ಅಂಟಿಸಲಾಗಿತ್ತು. ಧ್ವನಿವರ್ಧಕಗಳಲ್ಲಿ ರಾಷ್ಟ್ರಗೀತೆ ಮತ್ತು ದೇಶಪ್ರೇಮಿ ಹಾಡುಗಳನ್ನು ಬಿತ್ತರಿಸಲಾಗುತ್ತಿತ್ತು. ಕಾನೂನನ್ನು ಗೌರವಿಸದ ಜನರನ್ನು ಕ್ರೂರವಾಗಿ ಕೊಲ್ಲಲಾಗುತ್ತಿತ್ತು.ಬದುಕಿ ಉಳಿದವರು ಹೆಣ ಹೂಳುವ ಹಳ್ಳಗಳನ್ನು ತೋಡಬೇಕಿತ್ತು. ವಿಚಾರಣೆ ವೇಳೆಯಲ್ಲಿ ಹಿಂಸೆಯನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಗಂಡಸರನ್ನು ಚಾಕುವಿನಿಂದ, ಒಡೆದ ಬಾಟಲ್, ಬಂದೂಕಿನ ನಳಿಗೆ, ಹಾವು ಮತ್ತು ಚೇಳುಗಳ ಮೂಲಕ ಹೆದರಿಸಲಾಗುತ್ತಿತ್ತು.

ಗಂಡಸರನ್ನು ತಲೆ ಕೆಳಗೆ ನೇತುಹಾಕಿ ಅವರ ತಲೆಯನ್ನು ನೀರಿನಲ್ಲಿ ಮುಳುಗಿಸಿ ಅವರ ಗುದದ್ವಾರದಲ್ಲಿ ಮರಳನ್ನು ಕಡ್ಡಿಯ ಸಹಾಯದಿಂದ ತುರುಕಲಾಗುತ್ತಿತ್ತು. ಹೆಂಗಸರನ್ನು ಪಹರೆಯವರ ಗುಂಪುಗಳು ಮಾನಭಂಗ ಮಾಡುತ್ತಿದ್ದವು. ಜನರನ್ನು ನಾಯಿಗಳು ಕಚ್ಚಿ ಚಿಂದಿ ಮಾಡುತ್ತಿದ್ದವು. ಪ್ರತಿಭಟಿಸಿದ ಗುಲಾಮರ ಶರೀರಕ್ಕೆ ವಿದ್ಯಚ್ಫಕ್ತಿ ಹರಿಸಿ ಕೊಲೆ ಮಾಡಲಾಗುತ್ತಿತ್ತು. ಗಂಡಸರ ವೃಷಣವನ್ನು ಯಂತ್ರದ ಸಹಾಯದಿಂದ ಹುಡಿಗಟ್ಟುತ್ತಿದ್ದರು. ಚಿಮುಟದ ಸಹಾಯದಿಂದ ಹೆಂಗಸರ ಸ್ತನವನ್ನು ಊನಗೊಳಿಸುತ್ತಿದ್ದರು.ಸೆರೆವಾಸಿಗಳ ಕಿವಿ, ಬೆರಳುಗಳನ್ನು ಕತ್ತರಿಸುತ್ತಿದ್ದರು ಮತ್ತು ಕಣ್ಣುಗಳನ್ನು ಕೀಳುತ್ತಿದ್ದರು. ಭಾರೀ ವಾಹನಗಳ ಹಿಂಭಾಗಕ್ಕೆ ಜನರನ್ನು ಕಟ್ಟಿ, ಅವರ ಶರೀರ ಛಿದ್ರವಾಗುವವರೆಗೂ ವೇಗವಾಗಿ ನಡೆಸುತ್ತಿದ್ದರು. ಜನರನ್ನು ಬೇಲಿ ಹಾಕುವ ಮುಳ್ಳು ಕಂಬಿಯಲ್ಲಿ ಸುತ್ತಿ ಕಂಪೌಂಡಿನ ಒಳಗಡೆ ಹಾಕಿ ಒದೆಯುತ್ತಿದ್ದರು.

೧೦೯೦ ಜನರನ್ನು ನೇಣು ಹಾಕಿ ಕೊಲ್ಲಲಾಗಿದೆ.ಬ್ರಿಟಿಷರು ಶವಗಳನ್ನು ಪಟ್ಟಿ ಮಾಡುತ್ತಿರಲಿಲ್ಲ.ಶವಗಳನ್ನು ಗುರುತಿಲ್ಲದ ಗುಂಡಿಗಳಲ್ಲಿ ಮುಚ್ಚಲಾಗುತ್ತಿತ್ತು. ಲಕ್ಷಾಂತರ ಕಿಕಿಯ ಜನರು ಶಿಬಿರಗಳಲ್ಲಿ ಬಂಧನದ ವೇಳೆಯಲ್ಲಿ ಸತ್ತಿದ್ದಾರೆ. ಜನರ ಕತ್ತು ಹಿಸುಕಿ ಅವರ ನಾಲಗೆಯನ್ನು ಕತ್ತರಿಸಿ ಹೊರ ತೆಗೆಯಲಾಗುತ್ತಿತ್ತು. ಸೈನಿಕ ಶಿಬಿರಗಳಿಗೆ ಹೊದಿಸುವ ತುಕ್ಕಿನ ತಗಡಿನಿಂದ
ಬಂಧಿಗಳ ಗಂಟಲನ್ನು ಕೊಯ್ಯಲಾಗುತ್ತಿತ್ತು.ಬಂಧಿಗಳನ್ನು ಜೀವಂತ ಸುಟ್ಟು ಹಾಕಲಾಗುತ್ತಿತು. ಒಮ್ಮೆ ೧೧ಜನರನ್ನು ಬೆತ್ತದಿಂದ ಹೊಡೆದು ಸಾಯಿಸಿದ ವೇಳೆ ಬ್ರಿಟಿಷ್ ಗವರ‍್ನರ್ ಸರ್ ಇವಲಿನ್ ಬೇರಿಂಗ್ ಹಾಜರಿದ್ದರು.ಯೂರೋಪಿನ ಮತ್ತು ಆಫ್ರಿಕಾದ ಫಾದ್ರಿಗಳು ಶಿಬಿರಗಳಿಗೆ ಭೇಟಿ ನೀಡಿ ತತ್ವಗಳನ್ನು ಭೋದಿಸುತ್ತಿದ್ದರು, ಮತ್ತು ವಸಾಹತ ಆಜ್ಞೆಗಳನ್ನು ನೆರವಿಗೆ ತರುವಲ್ಲಿ ಯಶಸ್ವಿಯಾದರು. ವಸಾಹತು ಸರಕಾರಕ್ಕೆ ಬೇಹುಗಾರಿಕೆಯನ್ನು ನಡೆಸುತ್ತಿದ್ದರು.

ಆಫ್ರಿಕಾದ ಜನರ ವಿಚಾರಣೆ ವೇಳೆ ಪೋಲೀಸರಿಗೆ ನೆರವಾಗುತ್ತಿದ್ದರು.ಇಂದು ಆಫ್ರಿಕಾ ಖಂಡ ಬರಡು ಭೂಮಿಯಾಗಿದೆ. ಸಾಮ್ರಾಜ್ಯ ಶಾಹಿಗಳು ಅಲ್ಲಿನ ಖನಿಜ ಸಂಪತ್ತನ್ನು ದೋಚಿ ಹಸಿವು, ರೋಗಗಳನ್ನು ಬಳುವಳಿಯಾಗಿ ನೀಡಿದ್ದಾರೆ. ಜನಾಂಗೀಯ ಹಿಂಸೆಯನ್ನು ಹುಟ್ಟಿ ಹಾಕಿದ್ದಾರೆ. ರವುಂಡ ದೇಶದಲ್ಲಿ ೧೦ಲಕ್ಷ ಜನ, ಇಥಿಯೋಪಿಯಾದ ಡರ್‌ಪರ್ ಪ್ರಾಂತ್ಯದಲ್ಲಿ ೧೦ ಲಕ್ಷ ಜನ, ಕಾಂಗೋ ದೇಶದಲ್ಲಿ ೧೯೯೮ರಿಂದೀಚೆಗೆ ೫೪ಲಕ್ಷ ಜನ ಜನಾಂಗಗೀಯ ಹಿಂಸೆಗೆ ಬಲಿಯಾಗಿದ್ದಾರೆ. ಇಂದು ವಿಶ್ವದಾದ್ಯಂತ ನಡೆಯುವ ವಿದ್ಯಮಾನಗಳಿಗೂ, ಜನಾಂಗೀಯ ಹಿಂಸಾಕೃತ್ಯಗಳಿಗೂ, ಮಾರಕ ರೋಗಗಳಿಗೂ, ಹಾಗೂ ಸಾಮ್ರಾಜ್ಯ ವಾದಕ್ಕೆ ಇರುವ ಸಂಬಂಧಗಳ ಬಗ್ಗೆ ಚರ್ಚಿ ನಡೆಸಬೇಕಾಗಿದೆ.


 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮುಂಗಾರಿನ ಆಗಮನ:ಸರಕಾರ ಜೋಪಾನ

ರಾಜ್ಯಾದ್ಯಂತ ಮಳೆ ಚುರುಕುಗೊಳ್ಳುತ್ತಿದೆ. ಈ ಸಾಲಿನಲ್ಲಿ ಮಳೆ ನಿರೀಕ್ಷೆಯಷ್ಟು ಬರದೆ ಇದ್ದರೂ, ಮುಂದಿನ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ರಾಜ್ಯಾದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು