ಅಂಕಣ - ಮುಂಬೈ ಮೇರಿ ಜಾನ್‌

mail-img print-img

ತ್ರಾಸಿ-ಮರವಂತೆ ಕಡಲತೀರ ಅಭಿವೃದ್ಧಿಯತ್ತ ಹೆಜ್ಜೆ

ಗುರುವಾರ - ಆಗಸ್ಟ್ -02-2012

‘ಮೊರೆವ ಕಡಲ ಮೊರೆತದಲಿ ಮೈಮರೆ ಯುವೆಯಾ ಪ್ರವಾಸಿ ಕೈ ಬೀಸಿ ಕರೆಯುತ್ತಿದೆ ತ್ರಾಸಿ’ ಈ ತಲೆಬರಹದಲಿ ಸುಮಾರು ಹದಿನೈದು ಇಪ್ಪತು ವರ್ಷಗಳ ಹಿಂದೆ ಮುಂಬಯಿಯಿಂದ ಪ್ರಕಟಿತ ದೈನಿಕ ‘ಕರ್ನಾಟಕ ಮಲ್ಲ’ ಸಾಪ್ತಾಹಿಕ ದಲ್ಲಿ ಸುದೀರ್ಘ ಲೇಖನವೊಂದನ್ನು ಬರೆದು ಪ್ರಕಟಿಸಿದ ನಂತರ ಮತ್ತೆ ತ್ರಾಸಿ-ಮರವಂತೆ ಬೀಚ್ ಬಗ್ಗೆ ಬರೆಯಬೇಕೆನಿಸಿದರೂ ಬರೆಯಲಾ ಗಲಿಲ್ಲ. ಆಗ ಆ ಲೇಖನ ಬರೆಯಲು ಪ್ರಚೋ ದಿಸಿದ ಕಾರ್ಯ-ಕಾರಣಗಳು ಭಿನ್ನವಾದುದು.ಬಹಳ ತುರ್ತು ಕಾರಣಕ್ಕಾಗಿ ಮೊನ್ನೆ ಊರಿಗೆ ಹೋಗಬೇಕಾಯಿತು. ಊರಿನಲ್ಲಿದ್ದಷ್ಟು ದಿನ ಸಂಜೆ ಬೀಚ್‌ಗೆ ಹೋಗಲೇಬೇಕು. ಒಬ್ಬನೇ ಆದರೂ ಸರಿ. ಒಂದತ್ತು ನಿಮಿಷವಾದರೂ ಮೊರೆವ ಕಡಲ ಮೊರೆತವನ್ನು ವೀಕ್ಷಿ ಸುತ್ತ ತೆಪ್ಪಗೆ ಕುಳಿತುಕೊಳ್ಳಬೇಕು. ಪ್ರವಾಸೋದ್ಯಮ ಇಲಾಖೆಯವರು ತ್ರಾಸಿ-ಮರವಂತೆ ಬೀಚ್‌ನ್ನು ಪ್ರವಾ ಸೋದ್ಯಮ ಕೇಂದ್ರವನ್ನಾಗಿ ರೂಪಿಸು ವಲ್ಲಿ ಪ್ರಯತ್ನಿಸುತ್ತಿರುವುದು ಪತ್ರಿಕಾ ವರದಿಗಳಿಂದ ತಿಳಿಯುತ್ತದೆ. ಬೀಚ್ ನಲ್ಲಿ ಕಸಕಡ್ಡಿಗಳನ್ನು ಎಲ್ಲೆಂದರಲ್ಲಿ ಚೆಲ್ಲದಂತೆ, ಬೀಚ್ ಪರಿಸರ ನೈರ್ಮಲ್ಯ ಸಮಿತಿಯೊಂದು ಸ್ಥಳೀ ಯರಿಂದಲೇ ಕಾರ್ಯರೂಪಕ್ಕೆ ಬಂದಿರುವುದು ನನ್ನ ಬಾಲ್ಯ ಗೆಳೆಯ ರಿಚಾರ್ಡ್ ಅಲ್ಮೆಡಾನಿಂದ ತಿಳಿದು ಬಂದಿತ್ತು.

ಈತನೂ ಆ ತಂಡದಲ್ಲಿ ಸಹಭಾಗಿಯಾಗಿದ್ದು, ದೂರದಿಂದ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಸಮುದ್ರದ ನೀರಿಗೆ ಇಳಿಯದಂತೆ ಸೀಟಿ ಊದಿ ಎಚ್ಚರಿಸು ವುದನ್ನು ನಾನೂ ಕುತೂಹಲದಿಂದ ಅಷ್ಟೇ ಗೌರ ವದಿಂದ ಗಮನಿಸಿದ್ದೆ. ಲಯನ್ಸ್ ಕ್ಲಬ್, ರೋಟರಿ ಅಂತೆಲ್ಲ ಓಡಾಡಿಕೊಂಡಿರುವ ‘ರಿಚ್ಚಾ’ನಿಗೆ ತಾನು ಸಮಾಜಸೇವೆ ಮಾಡುತ್ತೇನೆಂಬ ಒಣ ಸೋಗಿಲ್ಲ.ಮೊನ್ನೆ ಶುಕ್ರವಾರ ಬೆಳಗ್ಗೆ 10.30ಕ್ಕೆ ನನ್ನನ್ನು ತ್ರಾಸಿ ಬೀಚ್ ಪಕ್ಕದಲ್ಲಿರುವ ರವಾಸಿ ಬಂಗಲೆಗೆ ಗೆಳೆಯ ರಿಚ್ಚಾ ಆಹ್ವಾನಿಸಿದ್ದನು. ಅಂದು ಉಡುಪಿ ಜಿಲ್ಲಾಧಿಕಾರಿ ಎಂ.ಟಿ.ರೆಜು ಅವರು ಬರುವವ ರಿದ್ದು ಬೀಚ್ ಅಭಿವೃದ್ಧಿ ಸಮಿತಿಯ ಪ್ರಥಮ ಸಭೆಯನ್ನು ಕರೆಯುವವರಿದ್ದರು. ಪತ್ರಿಕಾ ಪ್ರತಿನಿಧಿ ಗಳಿಗೂ ಆಹ್ವಾನ ಹೋಗಿದೆ ಎಂದು ತಿಳಿಯಿತು.

ಪ್ರವಾಸೋದ್ಯಮ ಇಲಾಖೆ ಬಹಳ ಹಿಂದಿ ನಿಂದಲೇ ಇಲ್ಲಿ ತನ್ನ ಹೆಜ್ಜೆಯನ್ನೂರಿದ್ದರೂ ಅಂತಹ ಘನ ಕಾರ್ಯವನ್ನೇನನ್ನೂ ಮಾಡಲಾ ಗಿಲ್ಲ. ಮುಖ್ಯವಾಗಿ ಇಲ್ಲಿನ ಕಡಲ್ಕೊರೆತ ಮತ್ತು ವಿಪರೀತ ಗಾಳಿ ಮಳೆಯಿಂದಾಗಿ ನೆಟ್ಟ ಹೂಗಿಡ ಮರಗಳು ರಾತ್ರಿ ಬೆಳಗಾಗುವುದರೊಳಗೆ ತಲೆಕೆಳ ಗಾಗುತ್ತಿದ್ದವು. ತ್ರಾಸಿ ನನ್ನೂರು ಹೌದು. ತ್ರಾಸಿ- ಮರವಂತೆ ಪರಿಸರದಲ್ಲಿ ಸುಮಾರು 2 ಕಿ.ಮೀ ಉದ್ದವಿರುವ ಕಡಲತೀರದ ಸೊಬಗು ವರ್ಣಿಸ ಲಸಾಧ್ಯ. ವಿಶ್ವದಲ್ಲೇ ಪ್ರಥಮ ಎಂಬಂತಹ ಅಪರೂಪದ ಅಪೂರ್ವ ಸೌಂದ ರ್ಯ ಸಿರಿಯನ್ನು ಕಾಪಿಟ್ಟು ಕೊಂಡ ಈ ತೀರವನ್ನು ಪ್ರವಾ ಸೋದ್ಯಮ ಇಲಾಖೆ ಅಭಿವೃದ್ಧಿ ಪಡಿಸುವುದರ ಬಗ್ಗೆ ನನಗೆ ಅಂತಹ ಕುತೂಹಲವೇನೂ ಇಲ್ಲ.

ಅಭಿವೃದ್ಧಿಯ ಹೆಸರಿನಲ್ಲಿ ‘ಸರಳ ಸೌಂದರ್ಯ’ ಎಲ್ಲಿ ಮಬ್ಬಾಗುವುದೋ ಎಂಬ ಗುಮಾನಿ. ಆದರೂ ತೀರಾ ಸಾಮಾನ್ಯ ಅನುಕೂಲತೆಗಳೂ ಇಲ್ಲಿ ಪ್ರವಾಸಿಗರಿಗೆ ಇಂದಿನ ತನಕ ಸಿಗುತ್ತಿರಲಿಲ್ಲ ಎಂಬುವುದನ್ನೂ ಗಮನಿಸುವಾಗ, ‘ಅಭಿವೃದ್ಧಿ’ ಕಾರ್ಯಗಳು ಅಷ್ಟರಮಟ್ಟಿಗೆ ಬೇಕೇ ಬೇಕೆನ್ನುವು ದನ್ನು ಒಪ್ಪಿಕೊಳ್ಳಲೇಬೇಕು.ರಾಷ್ಟ್ರೀಯ ಹೆದ್ದಾರಿ (ಈಗ 66, ಹಿಂದೆ 17 ಆಗಿತ್ತು!)ಯ ಒಂದು ಕಡೆ ಆವರಣ ಗೋಡೆ ಹಾಕಲಾಗಿದೆ. ವಿಶಾಲವಾದ ‘ವಾಕಿಂಗ್ ಪಾತ್’ ರಚಿಸಿದ್ದಾರೆ. ಇಲ್ಲಿಂದ ಕುಳಿತುಕೊಂಡು ಅಥವಾ ನಡೆದಾಡುತ್ತ ಸಮುದ್ರ ವೀಕ್ಷಣೆ ಅನುಕೂಲಕರ ವಾಗಿದೆ. ಒಳಗಡೆ ಶೌಚಾಲಯ ನಿರ್ಮಾಣ ಗೊಂಡಿದೆ... ಆದರೆ ಆಗಲೇಬೇಕಾದದ್ದು ಬಹಳ ಷ್ಟಿದೆ. ಉದಾ: ವಿದ್ಯುತ್ ದೀಪ, ಕುಡಿಯುವ ನೀರು, ತ್ಯಾಜ್ಯ ವಸ್ತುಗಳ ವಿಲೇವಾರಿ, ಕಾವಲು ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಇತ್ಯಾದಿ.

ಈ ಹಿನ್ನೆಲೆಯಲ್ಲಿ ಅಂದು ನಡೆದ ಸಭೆಯು ಪ್ರಮುಖವಾಗಿತ್ತು. ಆದರೆ ಮಾನ್ಯ ಜಿಲ್ಲಾಧಿಕಾರಿ ಗಳು ಕೇವಲ ಸಮಿತಿಯ ಸದಸ್ಯರು ಮಾತ್ರ ಹಾಜರಿರಲಿ, ಇತರರು (ಮಾಧ್ಯಮದವರೂ ಸೇರಿ) ಹೊರಗೆ ಇರಲಿ, ಎಂದು ವಿನಂತಿಸಿ ಕೊಂಡದ್ದು, ಮಾಧ್ಯಮದ ಪ್ರತಿನಿಧಿಗಳಿಗೆ ಮತ್ತು ಸ್ಥಳೀಯ ಆಸಕ್ತರಿಗೆ ಸರಿ ಕಾಣಲಿಲ್ಲ. ಸಭೆ ಮುಗಿದ ನಂತರ ಮಾಧ್ಯಮದವರನ್ನುದ್ದೇಶಿಸಿ ಅಂದಿನ ಸಭೆಯ ನಿರ್ಣಯಗಳನ್ನು ಸಹಾಯಕ ಕಲೆಕ್ಟರ್ ವಿವರಿಸಿದರು.

ಮುಖ್ಯಾಂಶಗಳು ಇಂತಿವೆ. ತ್ರಾಸಿ-ಮರವಂತೆ ಕಡಲತೀರ ಅಭಿವೃದ್ಧಿ ಸಮಿತಿ ಪುನರ್ ಪರಿಷ್ಕರಣೆ ಮಾಡಿ ನಡೆದ ಪ್ರಥಮ ಸಭೆ. ಉಪ-ಸಮಿತಿ ರಚನೆ. ಉಸಮಿತಿಗೆ ನಿರ್ವಹಣೆ (ಜ್ಞಿಠಿಚ್ಞಚ್ಞ್ಚಛಿ) ಅಧಿಕಾರ ಮತ್ತು ಜವಾ ಬ್ದಾರಿ. ಹೆದ್ದಾರಿ ಬದಿಗಳಲ್ಲಿ ಲಾರಿ ಮುಂತಾದ ವಾಹನಗಳ ಪಾರ್ಕಿಂಗ್ ರದ್ದು. ಅದಕ್ಕಾಗಿ ಸ್ಥಳ ಮೀಸಲಾತಿ, ಅಕ್ರಮ ಮತ್ತು ವಲಸೆ ಕಾರ್ಮಿಕರ ಜೋಪಡಿ ಸ್ಥಳಾಂತರ, ವಾಹನಗಳ ಪಾರ್ಕಿಂಗ್ ಶುಲ್ಕ. ಗೂಡಂಗಡಿಗಳ ಸ್ಥಳಾಂತರ, ಪರ್ಯಾಯ ಸ್ಥಳ ವ್ಯವಸ್ಥೆ. ಆದ್ಯತೆ ಮೇರೆಗೆ ಅಂಗಡಿ- ಮಳಿಗೆ ಗಳಿಗೆ ಅವಕಾಶ. ಸಂಪನ್ಮೂಲಕ್ಕಾಗಿ ಜಾಹೀರಾತು, ತ್ಯಾಜ್ಯ ಕಸಕಡ್ಡಿಗಳಿಗಾಗಿ ಸ್ಥಳ, ಹೆದ್ದಾರಿ ಅಗಲೀಕರಣ ಇತ್ಯಾದಿ ನಿರ್ಣಯಗಳನ್ನು ತೆಗೆದುಕೊಂಡು ಆಗಸ್ಟ್ 15ಕ್ಕೂ ಮೊದಲೇ ಉದ್ಘಾಟನೆಯನ್ನು ಮಾಡ ಲಾಗುವುದೆಂದು ತಿಳಿಸಲಾಯಿತು.

ಮಕ್ಕಳಿಗಾಗಿ ಜಾರುಬಂಡಿ, ಉಯ್ಯಲೆ ಮುಂತಾದ ಆಟದ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. ಇಲ್ಲಿ ಆರಂಭದಲ್ಲಿ ಕೆಲಸ ಮಾಡಲು ಸ್ವಯಂ ಸೇವಕರ ತಂಡ ಮುಂದೆ ಬರಬೇಕು. ಸ್ಥಳೀಯರ ಸಹಕಾರ ತೆಗೆದುಕೊಳ್ಳಬೇಕು. ಕೆಲಸಕ್ಕೆ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂಬ ಆಶಯವನ್ನೂ ಸಭೆಯಲ್ಲಿ ವ್ಯಕ್ತಪಡಿಸಲಾಯಿತು. ಬೀಚೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೆ ಆಯೋಜಿಸುವ ಉತ್ಸಾಹ ತೋರಲಾಯಿತು.

ಅಂದು ರಚನೆಗೊಂಡ ತ್ರಾಸಿ-ಮರವಂತೆ ಕಡಲತೀರ ಅಭಿವೃದ್ಧಿ ಸಮಿತಿಯಲ್ಲಿ ಈ ಕೆಳಕಂಡವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರು - ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ, ಕುಂದಾಪುರ. ಸದಸ್ಯರು: ರಿಚಾರ್ಡ್ ಅಲ್ಮೇಡಾ, ಅನಂತ ಮೊವಾಡಿ, ರೆನ್ಸನ್ ಪಿರೇರಾ, ಮಹಾಬಲ ವಕೀಲ, ಎಸ್.ಜನಾರ್ದನ ಮರವಂತೆ, ಪಿಎಸ್‌ಐ ಗಂಗೊಳ್ಳಿ ಮತ್ತು ತ್ರಾಸಿ (.ಈ.) ಪಂಚಾಯತ್ ಅಭಿವೃದ್ಧಿ ಅಧಿಕಾರಿ. ಈ ಉಪ ಸಮಿತಿಯ ಒಟ್ಟು ಮೇಲ್ವಿಚಾರಣೆ ಜಿಲ್ಲಾಧಿಕಾರಿಗಳದ್ದಾಗಿರುತ್ತದೆ ಎಂದು ತಿಳಿಸಲಾಯಿತು. ಪ್ರವಾಸೋದ್ಯಮ ಇಲಾಖೆಯ ಅಧ್ಯಕ್ಷರಾದ ಎಮ್.ಪ್ರಕಾಶ್ ಅವರು ಉಪಸ್ಥಿತರಿದ್ದರು. ಕೇವಲ ಕಡಲತೀರ ವೀಕ್ಷಣೆಯಲ್ಲದೆ ಸುತ್ತಮುತ್ತಲ ಇತಿಹಾಸ ಪ್ರಸಿದ್ಧ ದೇವಸ್ಥಾನಗಳಾದ ಕೊಲ್ಲೂರು, ಮಾರಣಕಟ್ಟೆ, ಆನೆಗುಡ್ಡೆ, ಒತ್ತಿನೆಣೆ, ಹಲ್ಸ್‌ನಾಡು ಮನೆ ಇತ್ಯಾದಿ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ವಿವರ ಕೈಪಿಡಿಯನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಬೇಕೆಂಬ ಆಶಯ ಸಮಂಜಸವಾದುದು.

ಬಹಳ ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾದುದು ಕಡಲ್ಕೊರೆತ. ಎರಡು ಮೂರು ದಶಕಗಳಿಂದ ಏನಿಲ್ಲವೆಂದರೂ ಒಂದೈವತ್ತು ಮೀಟರ್ ಕಡಲತೀರವನ್ನು ಕಡಲೇ ಕಬಳಿಸಿದೆ! ಹೆದ್ದಾರಿ ಅಗಲೀಕರಣ ಇನ್ನಾರು ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದರು ಮಾನ್ಯ ಜಿಲ್ಲಾಧಿಕಾರಿಗಳು. ಆ ಸಂದರ್ಭದಲ್ಲಿ ಕಡಲಕಿನಾರೆಯ ರಸ್ತೆ ದಂಡೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಕಟ್ಟುವುದು ಅತ್ಯವಶ್ಯಕ.





Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್