ಅಂಕಣ - ಜೋಲಿ ಲಾಲಿ

mail-img print-img

ಧರ್ಮದ ಹೆಸರಲ್ಲಿ ಅಮಾನವೀಯ ಕೃತ್ಯ

ಶನಿವಾರ - ಆಗಸ್ಟ್ -04-2012

ಮಂಗಳೂರೆಂದರೆ ಕರಾವಳಿಯ ಭಾಗ; ಕಡಲ ತೀರ. ದಕ್ಷಿಣ ಕನ್ನಡದ ಹಿರಿಮೆ. ಮಂಗಳಕರ ಘಳಿಗೆಯ ಶಕುನವನ್ನು ತನ್ನ ಹೆಸರಲ್ಲೇ ಹೊತ್ತುಕೊಂಡಿರುವ ಊರಿನ ಗರಿಮೆ. ಇಂಥ ಊರಿನಲ್ಲಿ ಆಗಾಗ ನಡೆಯುವ ಅಶಾಂತಿ ಮೂಲದ ಗಲಭೆಗೆ ಧರ್ಮ ಜಾಗೃತಿಯ ಕೊರತೆ ಕಾರಣವಾಗಿದೆಯೇ ವಿನಃ ಜಾಗೃತಿ ಕಾರಣವಾಗಿಲ್ಲ.
ಕನ್ನಡ ನಾಡಿನ ಕರಾವಳಿ
ಕನ್ನಡ ದೇವಿಯ ಪ್ರಭಾವಳಿ

ವ್ಯಕ್ತಿಯೊಬ್ಬ ಇಂಥ ಸೌಹಾರ್ದತೆಯನ್ನು ಮರೆತು ಆಕ್ರಮಣಕಾರಿಯಾದಾಗ ಮಾತ್ರ ಮಂಗಳೂರಿನ ಮಂಗಳಕರ ಹೆಸರಿಗೆ ಮಸಿ ಬಳಿಯುವಂಥ ‘ಹೋಂ ಸ್ಟೇ ಪ್ರಕರಣ’ಗಳು ನಡೆಯುತ್ತವೆ. ‘ಹಿಂದೂ ಧರ್ಮ ಜಾಗರಣೆ’ ಎಂದು ಧರ್ಮದ ಹೆಸರನ್ನು ಮುಂದಿಟ್ಟುಕೊಂಡು ಆದರ್ಶ ಪಾಲಿಸುವೆವೆಂದು ಅಮಾನವೀಯ ದಾರಿ ಹಿಡಿಯುವ ಅಪಾಯಕಾರಿ ವ್ಯಕ್ತಿಗಳು ದುಷ್ಕರ್ಮಿಗಳಾಗಿರಲು ಮಾತ್ರ ಸಾಧ್ಯ. ನಿಜವಾದ ಧರ್ಮ ಪಾಲಕರೇ ಆಗಿದ್ದರೆ ಇದೊಂದು ಮೂಲ ಮಂತ್ರ ಸಾಲದೇ?

-ಜಾಗೃತಿ ಮೂಡಿಸಲು- ಮೂಡಲು
ಓಂ ಸಹನಾವವತು
ಸಹನೌ ಭುನಕ್ತು
ಸಹ ವೀರ್ಯಂ ಕರವಾವ ಹೈ
ತೇಜಸ್ವಿ ನಾ ವ ಧಿತ ಮಸ್ತುಮಾ
ವಿಧ್ವಿಶಾವಹೈ ಓಂ ಶಾಂತಿ ಶಾಂತಿ ಶಾಂತಿಃ


ಪಥಂಜಲೀ ಯೋಗದಲ್ಲೂ ಆರಂಭದಲ್ಲಿ ಪಠಿಸಬೇಕಾದ ಧ್ಯಾನದ ಮಂತ್ರವಿದು. ‘‘ನನ್ನ ಸಹ ಜೀವಿಗಳಿಗೂ ಒಳಿತಾಗಲಿ. ತೇಜಸ್ಸು ಧೈರ್ಯಗಳಿಂದ ಶಾಂತಿ ಲಭಿಸಲಿ’’ ಎಂಬುದು ಈ ಮಂತ್ರದ ಮೆಡಿಟೇಶನ್ ಭಾಗ; ಎಂದರೆ ಧರ್ಮ ಜಾಗೃತಿಯ ಸಿಂಧುತ್ವದ ಭಾಗ. ಒಂದು ವೇಳೆ 
so called ‘ಜಾಗರಣೆ’ ಸಂಘಟನೆಯ ಸದಸ್ಯರು ಈ ಒಂದು ‘ಶಾಂತಿಮಂತ್ರ’ ಪ್ರವರ್ತಕರಾಗಿದ್ದರೂ ಕೂಡಾ ಇಂದು ಹಿಂದು ಧರ್ಮ ಸುಧಾರಣೆಯ ಬೆಳಕು ಕಂಡು ಮಾನವತೆಯ ಬೆಳಕನ್ನು ಕಾಣುವ ಸ್ನೇಹ ಸೇತುವಾಗುತ್ತಿತ್ತು. ಆದರೆ ಸಹ ಜೀವಿಗಳ ಒಳಿತನ್ನು ಮರೆತು ನೀತಿಯನ್ನು ಅನೀತಿಯಾಗಿಸಲು ಹೊರಡುವ -ಧರ್ಮದ ಭಾವನೆಯನ್ನು ಮಾತ್ರ ಕೆರಳಿಸುವ ಮತಿ ಹೀನರಿಂದ ಮಂಗಳಕರವಾದ ಘಳಿಗೆಗಳನ್ನು ರಕ್ಷಿಸುವ ನಿಯತ್ತು ತಪ್ಪಿ ಹೋಗಿ ಮೊನ್ನೆ ನಡೆದಂಥ ಅಮಂಗಳ ಕೃತ್ಯಗಳು ನಡೆದು ಊರಿಗೆ ಕೆಟ್ಟ ಹೆಸರು ತರುವ ದುಸ್ಸಾಹಸ ನಡೆಯುತ್ತಿರುತ್ತದೆ.

ಇಂಥ ಅಲ್ಪ ಮತಿಗಳ ಸಂಖ್ಯೆಯನ್ನು ಹತ್ತಿಕ್ಕಿ-ಅವರನ್ನು ತೇಜೋವಧೆ ಗೊಳಿಸಿ ಶಿಕ್ಷಿಸುವಂಥ ಸೂಕ್ಷ್ಮಮತಿಗಳ ಸಂಖ್ಯೆ ಮಂಗಳೂರಿನಲ್ಲಿ -ಇದೇ ಕರಾವಳಿ ತೀರದಲ್ಲಿ ಹೆಚ್ಚಾಗಬೇಕು. ಆಗ ಮಾತ್ರ ಇಂಥ ದುಷ್ಟತನ ಹತೋಟಿಗೆ ಬರುವುದೋ ಅಥವಾ ಪರಿವರ್ತನೆಯಾಗುವುದೋ ಆಗುತ್ತದೆಯೇ ಹೊರತು ತಾತ್ಕಾಲಿಕ ಪ್ರತಿಭಟನೆಯಾಗಿ-ಇಂಥ ದುಷ್ಕರ್ಮಿಗಳು ಮತ್ತೆ ತಲೆ ಎತ್ತಿದರೆ ಸಾಮಾನ್ಯ ಮನುಷ್ಯನಿಗೆ ಮನುಷ್ಯತ್ವದ ಮೇಲೆ ನಂಬಿಕೆಯೇ ಹೊರಟು ಹೋಗಿ ಹುಚ್ಚು ಹಿಡಿಯುವ ಸ್ಥಿತಿ ಬಂದು ಬಿಡಬಹುದು. ಹೀಗಾಗಲೇ ಕೂಡದು.

ಮಂಗಳೂರಿನ ಮಾರ್ನಿಂಗ್ ಮಿಸ್ಟ್ ‘ಹೋಂ ಸ್ಟೇ’ಯಲ್ಲಿ ಆಗಿದ್ದಾದರೂ ಏನು? ಒಂದಿಷ್ಟು ಹುಡುಗ - ಹುಡುಗಿಯರು ಮೆಜಾರ್ಟಿ ವಯಸ್ಸಿಗೆ ಬಂದವರು ಹುಟ್ಟು ಹಬ್ಬವೊಂದರ ಸಂತೋಷ ಕೂಟವನ್ನು ಅವರದೇ ರೀತಿಯಲ್ಲಿ ಸ್ವತಂತ್ರವಾಗಿ ಆಚರಿಸಿಕೊಳ್ಳುತ್ತಿದ್ದರು. ಇದೊಂದು ಸ್ನೇಹಕೂಟ. ಈ ಕೂಟದಲ್ಲಿ ಸಾಮಾಜಿಕ ಅಪಾಯವೊಡ್ಡುವ ಯಾವುದಾದರೂ ಅನೈತಿಕ ಚಟುವಟಿಕೆ ನಡೆಯುತ್ತಿದೆ-ಅದನ್ನು ಸರಿಪಡಿಸಬೇಕು ಎಂಬ ಒಳಿತನ್ನು ಬಯಸುವವರೇ ಆಗಿದ್ದರೆ ಮೊಟ್ಟಮೊದಲು ಮಾಡ ಬಹುದಾಗಿದ್ದ ಸಾಧುವಾದ ಕೆಲಸ ಯಾವುದು? ‘ವಿಚಾರಣೆ’.

ವಿಚಾರಣೆ ಮಾತ್ರ ಧರ್ಮ ಸಮ್ಮತವಾದ ಕಾನೂನು. ಸಹನೆಯಿಂದ ಆ ಮಕ್ಕಳನ್ನು ಮುಖಾಮುಖಿಯಾಗಿ ಭೇಟಿಯಾಗಿ ಏನು ಮಾಡುತ್ತಿದ್ದೀರಿ? ಎಂದು ವಿಚಾರಿಸಿ ಅಭಿಪ್ರಾಯ ವಿನಿಮಯ ಮಾಡಿಕೊಂಡು ಪ್ರತ್ಯಕ್ಷ ಕಂಡ-ಕೇಳಿದ ಸಂಗತಿಯನ್ನು ಪ್ರಮಾಣಿಸಿ ನೋಡಬಹುದಿತ್ತು. ಸ್ನೇಹ ಸೇತುವನ್ನು ಕಾಪಾಡಬಹುದಿತ್ತು. ಆದರೆ ಹಿಂದು-ಮುಂದು ನೋಡದೆ ಆ ಯುವಕ -ಯುವತಿಯರನ್ನು ತಮ್ಮ ಅಶ್ಲೀಲ ಕಣ್ಣುಗಳಿಂದ ಮಾತ್ರ ನೋಡಿ ಅಮಾನುಷವಾಗಿ ಥಳಿಸಿರುವ ಈ omination ಅನ್ನು ಹಿಂದೂ ದೇವರುಗಳಾದ ಬ್ರಹ್ಮ- ವಿಷ್ಣು- ಮಹೇಶ್ವರರೂ ಕೂಡ ಕ್ಷಮಿಸಲಾರರು.

ಧರ್ಮವನ್ನು ರಕ್ಷಿಸಲೆಂದು ಹುಟ್ಟಿದವರು ಅವರು.ಧರ್ಮವೆಂದರೆ ಶೋಕವನ್ನು ನಿವಾರಿಸಿ ಅಶೋಕವಾಗಿಸುವಂಥದ್ದು, ಜೀವನ ಸಂಗೀತವನ್ನು ಕೇಳಿಸುವಂಥದ್ದು. ಹಿತವಾದ ಶೃತಿಯಲ್ಲಿ ಹಾಡುವಂಥದ್ದು,. ಯಾವುದೇ ಕಾರಣಕ್ಕೂ ಆಕ್ರಮಣಕಾರಿಯಾಗಿ -ಮಾನವ ಪ್ರೇಮ ಕಳೆದುಕೊಳ್ಳುವಂಥ ವಿಕೃತಿಯಲ್ಲ.; ಭಾವೈಕ್ಯತೆ. ಮಂಗಳೂರು-ಅಮಂಗಳೂರು ಆಗದಿರಲಿ.

‘‘ಕೇಳನೋ ಹರಿ ತಾಳನೋ ತಾಳ ಮೇಳಗಳಿದ್ದು

ಪ್ರೇಮವಿಲ್ಲದ ಗಾನ ಕೇಳನೋ ಹರಿ ತಾಳನೋ.....’’

-ಪುರಂದರ ದಾಸರು.


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್