ಬಹಳ ದಿನಗಳಿಂದ ಇಂಟರ್‌ನೆಟ್ ಬಳಸುತ್ತಿರುವ ಎಲ್ಲರಿಗೂ ಒಂದು ಸಮಸ್ಯೆ ಕಾಡುತ್ತಿರುತ್ತದೆ. ಅದೆಂದರೆ, ಸಾಫ್ಟ್‌ವೇರ್ ಬಂಡಲ್, ಮ್ಯೂಸಿಕ್ ಅಥವಾ ಮೂವಿಗಳಂತಹ ಬೃಹತ್ ಗಾತ್ರದ ಫೈಲುಗಳನ್ನು ಯಾವುದಾದರೂ ವೆಬ್‌ಸೈಟಿನಿಂದ ಡೌನ್‌ಲೋಡ್ ಮಾಡುವಾಗ ಬಹಳ ಸಮಯ ತೆಗೆದುಕೊಳ್ಳುವುದು. ಈಗಿನ ಕಾಲವೇ ಹಾಗೆ, ಎಲ್ಲವೂ ವೇಗವಾಗಿ ನಡೆಯಬೇಕು. ಐದೈದು ದಿನ ಕುಳಿತುಕೊಂಡು ಟೆಸ್ಟ್ ಕ್ರಿಕೆಟ್ ನೋಡುವ ವ್ಯವಧಾನ ಈಗಿಲ್ಲ. ಕನಿಷ್ಠ ಒಂದು ದಿನ ಕುಳಿತುಕೊಂಡು ಏಕದಿನ ಪಂದ್ಯ ನೋಡುವುದೂ ಕಷ್ಟ. ಈಗೇನಿದ್ದರೂ ಟಿ-೨೦ ಯುಗ. ವಾಸ್ತವದಲ್ಲಿ ಇದು ಇಂದಿನ ಕಾಲದ ನಮ್ಮ ಮನಸ್ಥಿತಿಯನ್ನು ಮಾರ್ಮಿಕವಾಗಿ ವಿವರಿಸುತ್ತದೆ. ಹದಿನೈದು ವರ್ಷಗಳ ಹಿಂದೆ ಇಂಟರ್‌ನೆಟ್ ಬಳಕೆ ಸಾರ್ವಜನಿಕವಾಗಿ ಬೆಳೆಯಲಾರಂಭಿಸಿದಾಗ ಒಟ್ಟಾರೆ ಇಂಟರ್‌ನೆಟ್‌ನ ವೇಗವೇ ಕಡಿಮೆ ಇತ್ತು. ಒಂದು ವೆಬ್‌ಸೈಟಿನ ಪುಟ ತೆರೆಯಬೇಕಾದರೆ ನಾವು ಮೌಸ್ ಬಟನ್ ಒತ್ತಿ ಕಂಪ್ಯೂಟರ್ ಪರದೆಯನ್ನು ರಕ್ಷಿಸುತ್ತಾ ಪುಟ ತೆರೆಯುವುದನ್ನು ಕಾಯುತ್ತಾ ಕುಳಿತುಕೊಳ್ಳಬೇಕಿತ್ತು.
ಡೈಲ್‌ಅಪ್ ಕನೆಕ್ಷನ್‌ಗಳ ಜಾಗದಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕ ಬಂದಿದ್ದೇ ಒಂದು ದೊಡ್ಡ ಕ್ರಾಂತಿಯನ್ನೇ ಹುಟ್ಟು ಹಾಕಿತು. ಡೈಲ್‌ಅಪ್ ಕನೆಕ್ಷನ್‌ಗಳಲ್ಲಿ ನೀವು ಇಂಟರ್‌ನೆಟ್ ಸಂಪರ್ಕ ಹೊಂದಿದಾಕ್ಷಣದಿಂದ ನಿಮ್ಮ ಫೋನ್ ಎಂಗೇಜ್ ಆಗಿಬಿಡುತ್ತಿತ್ತು. ಅಂದರೆ, ಇಂಟರ್‌ನೆಟ್ ಬಳಕೆ ಮಾಡುತ್ತಿದ್ದ ಸಮಯದಲ್ಲಿ ಆ ಫೋನಿನಿಂದ ಕಾಲ್ ಮಾಡುವುದಾಗಲೀ ಅಥವಾ ಸ್ವೀಕರಿಸುವು ದಾಗಲೀ ಮಾಡುವುದು ಆಗುತ್ತಿರಲಿಲ್ಲ.
ಅಲ್ಲದೇ, ಗಂಟೆಗಳ ಲೆಕ್ಕದಲ್ಲಿ ಇಂಟರ್‌ನೆಟ್ ಬಳಕೆಯಿದ್ದ ಕಾಲವದು. ನಿಮ್ಮ ಕಂಪ್ಯೂಟರ್ ಎಷ್ಟು ಹೊತ್ತು ಇಂಟರ್‌ನೆಟ್ ಸಂಪರ್ಕದಲ್ಲಿರುತ್ತಿತ್ತೋ ಅಷ್ಟು ಅವಧಿಗೆ ಹಣ ಪಾವತಿಸಬೇಕಿತ್ತು. ಇಂಟರ್‌ನೆಟ್ ಕನೆಕ್ಟ್ ಮಾಡಿ ಮರೆತು ಮಲಗಿದರೆ ಮುಗಿಯಿತು. ಮುಂದಿನ ಟೆಲಿಫೋನ್ ಬಿಲ್ ನಿಮ್ಮ ಜೇಬು ಕತ್ತರಿಸಿ ಬಿಡುತ್ತಿತ್ತು. ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕದ ಆವಿಷ್ಕಾರದೊಂದಿಗೆ ಈ ಎರಡೂ ಸಮಸ್ಯೆಗಳು ಕೊನೆಯಾದವು. ವೊದಲನೆಯದಾಗಿ ಇಂಟರ್‌ನೆಟ್ ವೇಗದ್ದು. ಡೈಲ್‌ಅಪ್ ಕನೆಕ್ಷನ್‌ಗೆ ಹೋಲಿಸಿದರೆ ಬ್ರಾಡ್‌ಬ್ಯಾಂಡ್ ಭಾರೀ ವೇಗವನ್ನು ಹೊಂದಿದೆ. ಲಿಂಕಿನ ಮೇಲೆ ಕ್ಲಿಕ್ ಮಾಡಿ ಕಾಯುತ್ತಾ ಕುಳಿತುಕೊಳ್ಳವ ಪ್ರಮೇಯ ಉಳಿಯಲಿಲ್ಲ. ಸಾಮಾನ್ಯ ವೆಬ್‌ಪುಟಗಳಾದರೆ ಒಂದೆರಡು ಸೆಕೆಂಡುಗಳಲ್ಲಿ ತೆರೆದುಕೊಂಡು ಬಿಡಲಾರಂಭಿಸಿದವು. ಅಂತೆಯೇ ಗಂಟೆಗಳ ಲೆಕ್ಕದಲ್ಲಿ ಇಂಟರ್‌ನೆಟ್ ಬಳಸುವ ಯುಗವೂ ಬ್ರಾಡ್‌ಬ್ಯಾಂಡ್‌ನೊಂದಿಗೆ ಕೊನೆಗೊಂಡಿತು. ಬದಲಿಗೆ ಒಟ್ಟು ಡೌನ್‌ಲೋಡ್/ಅಪ್‌ಲೋಡ್ ದತ್ತಾಂಶದ ಪ್ರಮಾಣದ ಆಧಾರದಲ್ಲಿ ಶುಲ್ಕ ನಿಗದಿಯಾಗುವುದು ರೂಢಿಗೆ ಬಂತು.
ಇಂಟರ್‌ನೆಟ್ ಸೇವೆ ಒದಗಿಸುವ ಕೆಲವೊಂದು ಕಂಪೆನಿಗಳು ನಿರ್ದಿಷ್ಟ ಶುಲ್ಕಕ್ಕೆ ಅನಿಯಮಿತ ಬಳಕೆಯನ್ನೂ ಪ್ರಾರಂಭಿಸಿದವು.ಈಗ ಹೆಚ್ಚಿನ ಪ್ರಮಾಣದಲ್ಲಿರುವುದು ಅನಿಯಮಿತ (ಅನ್‌ಲಿಮಿಟೆಡ್) ಬಳಕೆಯ ಇಂಟರ್‌ನೆಟ್ ಸಂಪರ್ಕಗಳೇ. ಎರಡನೆಯದಾಗಿ ಯಾವ ಫೋನಿನಿಂದ ಇಂಟರ್‌ನೆಟ್ ಸಂಪರ್ಕ ಪಡೆದುಕೊಂಡಿರುತ್ತೇವೋ ಆ ಫೋನ್ ಎಂಗೇಜ್ ಆಗುವುದಿಲ್ಲ. ಒಂದೆಡೆ ಇಂಟರ್‌ನೆಟ್ ಬಳಸು ತ್ತಲೇ ಇನ್ನೊಂದೆಡೆ ಫೋನ್ ಕೂಡ ಉಪಯೋಗಿಸಬಹುದು.
ಈಗ ಮೂರನೆ ಕ್ರಾಂತಿಯೂ ಶುರುವಾಗಿದೆ. ಅದು ತ್ರೀಜಿ ಕ್ರಾಂತಿ. ಡೈಲ್‌ಅಪ್ ಕನೆಕ್ಷನ್‌ಗೆ ಹೋಲಿಸಿ ದರೆ ಬ್ರಾಡ್‌ಬ್ಯಾಂಡ್ ಸುಮಾರು ಹತ್ತುಪಟ್ಟು ವೇಗ ವಾಗಿತ್ತು. ಅದೇ ರೀತಿ ಬ್ರಾಡ್ ಬ್ಯಾಂಡ್‌ಗೆ ಹೋಲಿಸಿದರೆ ತ್ರೀಜಿ ಸುಮಾರು ಇಪ್ಪತ್ತರಿಂದ ಮೂವತ್ತು ಪಟ್ಟು ವೇಗವಾಗಿದೆ. ಅಂದರೆ, ಟೆಸ್ಟ್‌ನಿಂದ ಏಕದಿನ, ನಂತರ ಟಿ-೨೦ ಕ್ರಿಕೆಟ್ ರೀತಿಯಲ್ಲಿ!ಸದ್ಯಕ್ಕೆ ಈ ತ್ರೀಜಿ ಸಂಪರ್ಕದ ಬಹುದೊಡ್ಡ ಸಮಸ್ಯೆ ಎಂದರೆ ಆ ಸೇವೆಯನ್ನು ಪಡೆಯುವುದಕ್ಕೆ ತಗುಲುವ ದುಬಾರಿ ಬೆಲೆ! ಪ್ರತಿ ಸೆಕೆಂಡಿಗೆ ೫೧೨ ಕೆ.ಬಿ ಡೌನ್‌ಲೋಡ್/ಅಪ್‌ಲೋಡ್ ಸಾಮರ್ಥ್ಯ ಇರುವ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಪಡೆದರೆ ಅನಿಯಮಿತವಾಗಿ ಉಪಯೋಗಿಸಿದರೂ ತಿಂಗಳಿಗೆ ಸುಮಾರು ೮೦೦ ರೂಪಾಯಿ ಖರ್ಚಾಗುತ್ತದೆ. ಆದರೆ, ೩ಜಿ ಅಪ್‌ಲೋಡ್ ಡೌನ್‌ಲೋಡ್ ವೇಗ ಸುಮಾರು ೨೧ ಎಂ.ಬಿ.ಗಳ ತನಕ ಇರುತ್ತದೆ. ಸುಮಾರು ೨ ಜಿಬಿ ದತ್ತಾಂಶ ಬಳಕೆಗೆ ಒಂದು ಸಾವಿರ ರೂಪಾಯಿ ಖರ್ಚಾಗುತ್ತದೆ.
ಸಾರಾಂಶದಲ್ಲಿ ಹೇಳುವುದಾದರೆ ೩ಜಿ ಮೇನಿಯ ನಿಧಾನಕ್ಕೆ ಪ್ರಾರಂಭವಾಗಿರುವುದು ನಿಜವಾದರೂ ಅದಿನ್ನೂ ಸಾಮಾನ್ಯ ಜನರ ಕೈಗೆ ಎಟುಕುತ್ತಿಲ್ಲ. ಹದಿನೈದು-ಇಪ್ಪತ್ತು ಸಾವಿರ ಆದಾಯವಿರುವ ನೌಕರನೊಬ್ಬ ತನ್ನ ಮನೆಯಲ್ಲಿ ಅನಿಯಮಿತವಾಗಿ ೩ಜಿ ಇಂಟರ್‌ನೆಟ್ ಬಳಸುವುದಕ್ಕೆ ಸಾಧ್ಯವಿಲ್ಲ. ಸದ್ಯದಲ್ಲಿ ಅದು ಸರಕಾರ, ಬೃಹತ್ ಖಾಸಗಿ-ಸರಕಾರಿ ಕಂಪೆನಿಗಳು, ದೊಡ್ಡ ದೊಡ್ಡ ಸಂಸ್ಥೆಗಳು, ದೊಡ್ಡ ಆದಾಯ ಪಡೆಯುವ ಜನ ಮಾತ್ರವೇ ಉಪಯೋಗಿಸುವ ಸೇವೆಯಾಗಿ ಉಳಿದುಕೊಂಡಿದೆ. ಇತ್ತೀಚೆಗೆ ಬಿಎಸೆನ್ನೆಲ್ ಜನಸಾಮಾನ್ಯರಿಗೂ ೩ಜಿ ಸೇವೆ ಕೈಗೆಟುಕುವಂತಹ ಕೆಲವು ಯೋಜನೆಗಳನ್ನು ಪ್ರಟಿಸಿದೆಯಾದರೂ ಅದೂ ತೃಪ್ತಿಕರವಾಗಿಲ್ಲ. ಪರ್ಸನಲ್ ಕಂಪ್ಯೂಟರುಗಳಲ್ಲಿ ಅನಿಯಮಿತ ದತ್ತಾಂಶ ಅಪ್‌ಲೋಡ್/ಡೌನ್‌ಲೋಡ್‌ಗೆ ಅವಕಾಶವಿರುವ ೩ಜಿ ಸೇವೆಗೆ ಪ್ರತೀ ತಿಂಗಳಿಗೆ ೭೦೦-೮೦೦ ರೂಪಾಯಿ ಖರ್ಚಾಗುವಂತಾದರೆ ಅದು ಜನಸಾಮಾನ್ಯರಿಗೆ ಎಟಕುವ ಸೇವೆ ಎನ್ನಬಹುದು. ಸದ್ಯದಲ್ಲೇ ಅದೂ ಬರುತ್ತದೆ.
ಅಲ್ಲಿಯವರೆಗೆ? ಅಲ್ಲಿಯವರೆಗೆ ಇರುವ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕದಲ್ಲೇ ಹೆಚ್ಚು ವೇಗವಾಗಿ ಕಾರ್ಯ ನಿರ್ವಹಿಸುವಂತಹ ಕೆಲವು ತಂತ್ರಗಳನ್ನು ಕಲಿತುಕೊಳ್ಳಬೇಕಷ್ಟೆ. ಸಾಮಾನ್ಯ ವೆಬ್‌ಪುಟಗಳನ್ನು ತೆರೆಯುವಾಗ ಸಾಮಾನ್ಯವಾಗಿ ವೇಗದ ಸಮಸ್ಯೆ ಎದುರಾಗುವುದಿಲ್ಲ. ಅದು ಎದುರಾಗುವುದು ಈಗಾಗಲೇ ಹೇಳಿದಂತೆ ಬೃಹತ್ ಫೈಲುಗಳನ್ನು ಡೌನ್‌ಲೋಡ್ ಮಾಡುವಾಗ. ಅದು ಮ್ಯೂಸಿಕ್ ಫೈಲ್ ಇರಬಹುದು, ಮೂವಿ ಫೈಲ್ ಇರಬಹುದು ಅಥವಾ ಬೃಹತ್ ಸಾಫ್ಟ್‌ವೇರ್ ಬಂಡಲ್ ಇರಬಹುದು. ಅಂತಹ ಸಂದರ್ಭದಲ್ಲಿ ವೇಗವಾಗಿ ಹೇಗೆ ಫೈಲುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ಕೆಲವು ತಂತ್ರಗಳನ್ನು ಅನುಸರಿಸಬೇಕು. ಅವುಗಳ ಬಗ್ಗೆ ಮುಂದಿನವಾರ ಚರ್ಚಿಸೋಣ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮೊದಲ ಯುದ್ಧವನ್ನು ಗೆದ್ದಿದ್ದಾರೆ. ಸರಕಾರ ಸುಸೂತ್ರವಾಗಿ ನಡೆಯ ಬೇಕೆಂದಿದ್ದರೆ ಈ ಯುದ್ಧವನ್ನು ಗೆಲ್ಲಲೇ ಬೇಕಾಗ ...
Click here to post your views ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...