ಒಂದು ವರ್ಷದ ಹಿಂದೆ ಆಗಸ್ಟ್ ತಿಂಗಳಲ್ಲಿ ‘ಕ್ವಿಟ್ ಇಂಡಿಯಾ ಚಳವಳಿ’ಯನ್ನು ಆಚರಿ ಸುವ ದಿನದಂದು ಭಾರತದ ಪ್ರಸಕ್ತ ಆಡಳಿತ ವರ್ಗಗಳಿಗೆ ಕ್ವಿಟ್ ಇಂಡಿಯಾ ಸಂದೇಶವನ್ನು ರವಾನಿಸುವಂತಹ ಒಂದು ಬೃಹತ್ ಚಳವಳಿ ರೂಪುಗೊಂಡಿತ್ತು. ಗಾಂಧೀವಾದಿ ಎಂದು ಕರೆಯಲ್ಪಡುವ ಅಣ್ಣಾ ಹಝಾರೆ ತಮ್ಮ ಗಾಂಧಿ ಮಾರ್ಗದಲ್ಲಿಯೇ ಒಂದು ಜನಪರ ಆಂದೋಲ ನವನ್ನು ರೂಪಿಸಿ, ಸತ್ಯಾಗ್ರಹದ ಅಸ್ತ್ರವನ್ನು ಆಳ್ವಿಕರ ಮೇಲೆ ಪ್ರಯೋಗಿಸುವ ಮೂಲಕ ದೇಶದ ಯುವ ಜನತೆಯನ್ನು ಒಂದುಗೂಡಿ ಸಿದ್ದರು. ತಮ್ಮ ಅಹಿಂಸಾತ್ಮಕ ಚಳವಳಿಯ ಮೂಲಕ ದೇಶದ ಯುವಜನತೆಯನ್ನು ಆಕರ್ಷಿಸಿದ ಅಣ್ಣಾ ಆಳುವ ವರ್ಗಗಳಲ್ಲಿ ನಡುಕ ಹುಟ್ಟಿಸಿದ್ದೂ ಉಂಟು. ‘ಟೀಂ ಅಣ್ಣಾ’ ಕೈಗೊಂಡ ಕಾರ್ಯಕ್ರಮಗಳ ಒತ್ತಡ ತಂತ್ರಕ್ಕೆ ಮಣಿದ ಕೇಂದ್ರ ಸರಕಾರ ಲೋಕ ಪಾಲ್ ಮಸೂದೆಯನ್ನು ಸಿದ್ಧಪಡಿಸಿದ್ದೂ ಆಯಿತು. ಮಸೂದೆಯ ಮೂಲ ಸ್ವರೂಪ ಹೇಗೇ ಇದ್ದರೂ ನಾಲ್ಕು ದಶಕಗಳ ಕಾಲ ್ಞನನೆಗುದಿಯಲ್ಲಿದ್ದ ಒಂದು ಮಸೂದೆ ಪುನಃ ಚಾಲ್ತಿಗೆ ಬಂದಿದ್ದು ಅಣ್ಣಾ ಹಝಾರೆೆಯ ಶ್ರಮದಿಂದ ಎಂದು ನಿಸ್ಸಂದೇಹವಾಗಿ ಹೇಳ ಬಹುದು.
ಆದರೆ ಅಣ್ಣಾ ತಂಡದ ನಡೆನುಡಿಗಳು ಪಾರದರ್ಶಕವಾಗಿದ್ದರೂ ಪ್ರಾಮಾಣಿಕವಾಗಿರ ಲಿಲ್ಲ. ತಮ್ಮ ರಾಜಕೀಯ ಪ್ರಾಬಲ್ಯದ ಮೂಲಕ ತಮ್ಮದೇ ಆದ ಔದ್ಯಮಿಕ ಲೋಕವನ್ನು ಸೃಷ್ಟಿಸಿ ಕೊಂಡು ಕಾರ್ಪೊರೇಟ್ ಆಧ್ಯಾತ್ಮಿಕತೆಯನ್ನು ಜನತೆಗೆ ಬೋಧಿಸುವ ಬಾಬಾರಾಮದೇವ್ ಅವರೊಡನೆ ಕೈ ಮಿಲಾಯಿಸಿ ಕೈ ಸುಟ್ಟು ಕೊಂಡ ‘ಟೀಂ ಅಣ್ಣಾ’ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಚಾರ ಕೈಗೊಂಡು ಪರೋಕ್ಷವಾಗಿ ಬಿಜೆಪಿಯ ವಿಜಯಕ್ಕೆ ಕಾರಣವಾಗಿದ್ದು ಈಗ ಇತಿಹಾಸ.
ತಾವು ಮಾಡುತ್ತಿರುವ ತಪ್ಪನ್ನು ಇತರರು ಎತ್ತಿ ತೋರಿಸಿದ ಮೇಲೂ ಹಿಂದಕ್ಕೆ ಸರಿಯದೆ ಹೋದ ಅಣ್ಣಾ ಹಝಾರೆೆಯನ್ನು ಗಾಂಧಿ ವಾದಿ ಎಂದು ಕರೆಯುವುದಾದರೂ ಹೇಗೆ. ಗಾಂಧೀಜಿ ತಮ್ಮ ತಪ್ಪನ್ನು ತಾವೇ ತಿದ್ದುಕೊಳ್ಳುವಂತಹ ರಾಷ್ಟ್ರೀಯತೆ ಇದ್ದವರು. ಇರಲಿ ಅಣ್ಣಾ ಹಝಾರೆ ಕಾಂಗ್ರೆಸ್ ಅಥವಾ ಯುಪಿಎ ವಿರುದ್ಧ ಪ್ರಚಾರ ಮಾಡಿದ್ದೂ ಸಹ ಒಂದು ಒತ್ತಡದ ತಂತ್ರವೇ ಎಂದು ಒಪ್ಪಿಕೊಳ್ಳೋಣ.
ಆದರೆ ಕರ್ನಾಟಕದಲ್ಲಿ ಬಿಜೆಪಿ ಆಳ್ವಿಕೆ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕರ್ಮಕಾಂಡವನ್ನು ಕುರಿತು ಒಂದೇ ಒಂದು ಮಾತನ್ನೂ ಆಡದೆ ಬೆಂಗಳೂರಿನಲ್ಲಿ ಭ್ರಷ್ಟಾಚಾರ ವಿರೋಧಿ ಸಮಾವೇಶವನ್ನು ನಡೆಸಿದ ಹಝಾರೆ ಸಾಧಿಸಿದ್ದಾದರೂ ಏನು? ಬಿಜೆಪಿ ಮತ್ತು ಸಂಘಪರಿವಾರದ ಬೆಂಬಲ ಗಳಿಸಿದ್ದೇ ಅಥವಾ ಕಾಂಗ್ರೆಸ್ ವಿರೋಧಿ ಪಕ್ಷಗಳ ಒಲವು ಗಳಿಸಿದ್ದೇ? ಆರೆಸ್ಸೆಸ್‌ಗೂ ತಮಗೂ ಸಂಬಂಧವೇ ಇಲ್ಲ ಎಂದು ಹಝಾರೆ ಖಚಿತ ವಾಗಿ ಹೇಳುತ್ತಿದ್ದಾಗಲೇ ಸಂಘಪರಿವಾರದ ನಾಯಕರು, ಹಝಾರೆ ಅಂದೋಲನಕ್ಕೆ ತಾವು ಒದಗಿಸಿದ ಪರಿಕರಗಳನ್ನು ಕುರಿತು ಡಂಗುರ ಸಾರುತ್ತಿದ್ದುದು ವಿಡಂಬನೆಯಾಗಿ ಕಂಡಿತ್ತು.
ಹಝಾರೆ ತಮ್ಮ ಪಕ್ಷಾತೀತ ನಿಲುವಿಗೆ ಬದ್ಧರಾಗಿದ್ದ ಪಕ್ಷದಲ್ಲಿ ಕೂಡಲೇ ಸಂಘ ಪರಿವಾರದ ನೆರಳಿನಿಂದ ದೂರವಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಹಝಾರೆಗೆ ಜನಬೆಂಬಲ ಅಗತ್ಯ ವಾಗಿತ್ತು. ಆಂದೋಲನವನ್ನು ಮುನ್ನಡೆಸಲು ತಮ್ಮ ತತ್ವ, ಉದ್ದೇಶ, ಧ್ಯೇಯ, ಆದರ್ಶಗಳಿಗಿಂತಲೂ ಮಾಧ್ಯಮಗಳನ್ನು ಆಕರ್ಷಿಸುವ, ಆಳ್ವಿಕರ ಮನಸೆಳೆಯುವ ಜನಸ್ತೋಮವೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ ಎಂಬ ಭ್ರಮೆ ಹಝಾರೆಯವರನ್ನು ಆವರಿಸಿದ್ದು ಇಡೀ ಆಂದೋಲನದ ದುರಂತ.
ಹಾಗಾಗಿಯೇ ಸ್ವತಃ ಅಕ್ರಮಗಳ ಆರೋಪ ಎದುರಿಸಿದ ಕಿರಣ್ ಬೇಡಿ ಅಥವಾ ಕೋಟ್ಯಂತರ ರೂ.ಗಳ ವ್ಯವಹಾರ ನಡೆಸುವ ಎನ್‌ಜಿಒ ಒಡೆಯ ಕೇಜ್ರಿವಾಲ್ ಅವರನ್ನು ದೂರ ಇರಿಸುವ ಅಥವಾ ನೇಪಥ್ಯಕ್ಕೆ ಸರಿಸುವ ಪ್ರಯತ್ನವನ್ನೂ ಹಝಾರೆ ಮಾಡಲಿಲ್ಲ. ತಮ್ಮ ಪ್ರತಿರೋಧ ವ್ಯಕ್ತಪಡಿಸಿದರೆ ಚಳವಳಿ ಎಲ್ಲಿ ಕುಸಿಯುವುದೋ ಎಂಬ ಭೀತಿಗೊಳಗಾಗಿ ಹಝಾರೆ ಅನುಸರಿಸಿದ ಮಾರ್ಗ ಮೌನವ್ರತ. ಅನ್ಯಾಯದ ವಿರುದ್ಧ ಮಾತನಾಡದಿರುವುದು ಅನ್ಯಾಯ ಮಾಡುವುದಕ್ಕಿಂತಲೂ ಹೇಯ ಕೃತ್ಯ ಎಂಬ ಸರಳ ಸಂಗತಿಯನ್ನೂ ಹಝಾರೆಗೆ ಗ್ರಹಿಸಲಾಗಲಿಲ್ಲ.
ಪರಿಣಾಮ ಟೀಂ ಅಣ್ಣಾ ಎನ್ನುವುದು ಕೆಲವೇ ವ್ಯಕ್ತಿಗಳ ಕೂಟವಾಗಿ ಪರಿಣಮಿಸಿ ತನ್ನ ಆರಂಭಿಕ ಮೊನಚನ್ನು ಕಳೆದುಕೊಳ್ಳಲಾ ರಂಭಿಸಿತು. ಇದನ್ನು ಗ್ರಹಿಸಿದ ಯುಪಿಎ ಸರಕಾರ ಲೋಕಪಾಲ್ ಮಸೂದೆ ಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ರೂಪಿಸಲು ಮುಂದಾಗಿತ್ತು. ಇದು ಅಣ್ಣಾ ಹಝಾರೆಯ ವೈಫಲ್ಯವೂ ಹೌದು, ರಾಜಕೀಯ ವ್ಯವಸ್ಥೆಯ ಚಾಣಾಕ್ಷತನವೂ ಹೌದು. ಲೋಪವನ್ನು ಸರಿಗಟ್ಟುವ ನಿಟ್ಟಿನಲ್ಲಿ ಅಣ್ಣಾ ಹಝಾರೆ ತಮ್ಮ ತಂಡವನ್ನು ಪುನರ್ರಚಿಸುವ ಪ್ರಯತ್ನ ಮಾಡಬೇಕಿತ್ತು. ಹಲವು ನಿಷ್ಠಾವಂತ ಸದಸ್ಯರ ರಾಜೀನಾಮೆಯ ಹಿನ್ನೆಲೆಯಲ್ಲಿ ಮತ್ತು ಹಲವು ಸದಸ್ಯರ ವಿರುದ್ಧ ಆರೋಪಗಳ ಹಿನ್ನೆಲೆ ಯಲ್ಲಿ ಟೀಂ ಅಣ್ಣಾ ತನ್ನ ಪ್ರಾಮಾಣಿಕತೆಯನ್ನು ನಿರೂಪಿಸುವತ್ತ ಕೊಂಚವಾದರೂ ಯೋಚಿಸ ಬೇಕಿತ್ತು.
ಆದರೆ ಕಾಲಕ್ರಮೇಣ ಅಣ್ಣಾ ತಂಡ ದಲ್ಲಿ ಹಝಾರೆಯವರ ದನಿ ಕ್ಷೀಣಿಸತೊಡಗಿ ಕೇಜ್ರಿವಾಲ್-ಕಿರಣ್ ಬೇಡಿ ಮುಂತಾದವರ ನಾಟಕೀಯ ವರ್ತನೆಗಳೇ ಪ್ರಧಾನವಾಗಿ ವ್ಯಕ್ತವಾಗತೊಡಗಿದ್ದು ಇಡೀ ಆಂದೋಲನದ ಸ್ವರೂಪವನ್ನೇ ಬದಲಾಯಿಸಿದೆ. ಹಾಗಾಗಿಯೇ ಈ ವರ್ಷ ದೆಹಲಿಯ ಜಂತರ್ ಮಂತರ್‌ನಲ್ಲಿ ಆರಂಭವಾದ ಉಪವಾಸ ಸತ್ಯಾಗ್ರಹ ಕೆಲವೇ ದಿನಗಳಲ್ಲಿ ಅಂತ್ಯಗೊಂಡಿದ್ದು ಅಣ್ಣಾ ಆಂದೋಲ ನವನ್ನು ವಿಭಿನ್ನ ಹಾದಿಯಲ್ಲಿ ಕೊಂಡೊಯ್ಯಲಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷ ಹಝಾರೆಯವರ ಹಿಂದೆ ಜನಸ್ತೋಮ ನಿಲ್ಲದಿರಲು ತಮ್ಮ ತಂಡದ ಎಡಬಿಡಂಗಿ ನೀತಿಗಳೇ ಕಾರಣ ಎಂಬ ವಾಸ್ತವವನ್ನು ಗ್ರಹಿಸದ ಹಝಾರೆ ಜನಬೆಂಬಲ ಗಳಿಸುವ ಸಲು ವಾಗಿ ಬಾಬಾ ರಾಮದೇವ್ ಅವರ ಆಶ್ರಯ ಪಡೆದಿದ್ದು ಇಡೀ ಚಳವಳಿಯ ಬುಡವನ್ನೇ ಅಲುಗಾ ಡಿಸಿದೆ. ಪರಿಣಾಮ ಜನರ ವಿಶ್ವಾಸವೂ ಕ್ಷೀಣಿಸತೊಡಗಿದೆ.
ಈ ಸಂದರ್ಭದಲ್ಲಾದರೂ ತಮ್ಮ ನಿಲುವು ಬದಲಿಸಿ ತಮ್ಮ ಧ್ಯೇಯೋದ್ದೇಶಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊ ಯ್ಯುವ ನಿರ್ಧಾರ ಕೈಗೊಳ್ಳದೆ ಅಣ್ಣಾ ಹಝಾರೆ ರಾಜಕೀಯ ಪಕ್ಷ ರಚಿಸುವ ನಿರ್ಧಾರ ತಳೆದು ತಮ್ಮ ನಿರಶನವನ್ನು ಅಂತ್ಯಗೊಳಿಸಿದ್ದಾರೆ. ಒಂದು ವೇಳೆ ಸರ ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಿದಲ್ಲಿ ಈ ನಿರ್ಧಾರದಿಂದ ಹಿಂದೆಗೆಯುವುದಾ ಗಿಯೂ ಕೇಜ್ರಿವಾಲ್ ಹೇಳಿದ್ದಾರೆ. ತಾವೇ ಬೀಜ ಬಿತ್ತಿ ಬೆಳೆಸಿದ ಸುಂದರ ಸಸ್ಯವನ್ನು ತಮ್ಮ ಕೈಯಾರೆ ಹೊಸಕಿ ಹಾಕುವ ಹಝಾರೆೆಯವರ ಈ ಪ್ರವೃತ್ತಿಯನ್ನು ಹೇಗೆ ಒಪ್ಪಲು ಸಾಧ್ಯ? ಹಝಾರೆಯವರನ್ನು ವಿರೋಧಿಸಿದರೆ ಭ್ರಷ್ಟಾ ಚಾರದ ಪರ ನಿಂತಂತೆ ಎಂಬ ಭ್ರಮೆಗೊಳ ಗಾದವರು ಮಾತ್ರ ಟೀಂ ಅಣ್ಣಾ ಕೈಗೊಂಡಿರುವ ನಿರ್ಣಯವನ್ನು ಬೆಂಬಲಿಸಬಹುದಷ್ಟೆ.
ಒಂದು ರಾಜಕೀಯ ಪಕ್ಷ ರಚಿಸುವುದಕ್ಕೂ, ಜನಾಂದೋಲನವನ್ನು ರೂಪಿಸುವುದಕ್ಕೂ ಇರುವ ಮೂಲಭೂತ ವ್ಯತ್ಯಾಸವನ್ನು ಗ್ರಹಿಸದ ಅಣ್ಣಾ ತಂಡದ ಅಪ್ರಬುದ್ಧತೆ ಕಳೆದ ಚುನಾವಣೆಗಳಲ್ಲೇ ಸ್ಪಷ್ಟವಾಗಿ ಗೋಚರಿಸಿತ್ತು.ಆಂದೋಲನಗಳು ಆಳುವ ವರ್ಗಗಳ ಮೇಲೆ ಒತ್ತಡ ಹೇರುವ ಮೂಲಕ ಜನಪರ ಆಳ್ವಿಕೆಗೆ ದಾರಿಮಾಡಿಕೊಡುವ ಒಂದು ತಂತ್ರವಾಗಿ ಕಾರ್ಯ ನಿರ್ವಹಿಸಬೇಕಾ ಗುತ್ತದೆ. ಸೈದ್ಧಾಂತಿಕ ನೆಲೆಗಟ್ಟು ಇರಲಿ ಇಲ್ಲದಿರಲಿ, ಜನತೆಯಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಮೂಲಕ ಆಳುವ ವರ್ಗಗಳ ಗುಣಲಕ್ಷಣಗಳನ್ನು ಜನತೆಗೆ ಪರಿಚಯಿಸುವ ಮೂಲಕ ಜನತೆಯನ್ನು ಹೋರಾಟಗಳಿಗೆ ಪ್ರಚೋದಿಸುವ ನಿಟ್ಟಿನಲ್ಲಿ ಆಂದೋಲನಗಳು ಹೊರಹೊಮ್ಮುತ್ತವೆ.
ರಾಜಕೀಯ ಪ್ರಜ್ಞೆ ಮೂಡಿಸುವುದಕ್ಕೂ, ಸ್ವತಃ ರಾಜಕೀಯ ಪ್ರವೇಶಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಈ ವ್ಯತ್ಯಾಸವನ್ನು ಅಣ್ಣಾ ತಂಡ ಗ್ರಹಿಸದೆ ಇರುವುದು ದುರದೃಷ್ಟಕರ. ರಾಜಕಾರಣ ಎಂದರೆ ಪಕ್ಷ ರಾಜಕೀಯ ಮಾತ್ರ ಎಂದು ಭಾವಿಸುವ ಅಣ್ಣಾ ತಂಡದ ಧೋರಣೆ ಒಂದು ಅಪಕ್ವ ಜನಾಂದೋಲನದ ಸಂಕೇತವಾಗಿ ಕಾಣುತ್ತದೆ.
ಇಂದಿನ ಭಾರತ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಒಂದು ಸ್ಪಷ್ಟ ಸೈದ್ಧಾಂತಿಕ ತಳಹದಿ ಇಲ್ಲದೆ, ದೇಶದ ಜನಸಾಮಾನ್ಯರ ಇಂಗಿತಗಳನ್ನು ಗ್ರಹಿಸುವ ಮತ್ತು ತಮ್ಮ ಧ್ಯೇಯೋದ್ದೇಶಗಳನ್ನು ಜನರಿಗೆ ತಿಳಿಸುವ ಆಲೋಚನೆಯೇ ಇಲ್ಲದೆ ಕೇವಲ ಲೋಕಪಾಲ್ ಮಸೂದೆ ಮತ್ತು ಚುನಾವಣಾ ಸುಧಾರಣೆಗಳಿಗಾಗಿ ರಾಜಕೀಯ ಪಕ್ಷ ಸ್ಥಾಪಿಸುವುದು ಏಕಮುಖೀ ಸಂಚಾರವಾಗುತ್ತದೆ. ಅಣ್ಣಾ ಹಝಾರೆಯವರ ಬದ್ಧತೆ, ಶ್ರದ್ಧೆ, ಪ್ರಾಮಾ ಣಿಕತೆ ಮತ್ತು ಕಾಳಜಿಗಳನ್ನು ಗೌರವದಿಂದ ಕಾಣುತ್ತಲೇ ಹೇಳುವುದಾದರೆ ಅಣ್ಣಾ ಸುಮ್ಮನಿದ್ದುಬಿಡುವುದು ಒಳಿತು.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...