ಬುದ್ದ ಇಂದೇನಾದರೂ ಈ ಜಗತ್ತಿನಲ್ಲಿ ಬದುಕಿದ್ದಾನೆ ಎಂದರೆ ಬಹು ಮುಖ್ಯವಾಗಿ ಅದು ಆತನ ಪ್ರತಿಮಾ ರೂಪದಿಂದಾಗಿ ಮಾತ್ರ. ಹೌದು, ಪ್ರತಿಮೆಗಳು ಇತಿಹಾಸ ಸಾರುವ ಪ್ರತಿನಿಧಿಗಳು. ಹಾಗೆಯೇ ಭವಿಷ್ಯಕ್ಕೆ ಬೆಳಕಾಗುವ ದಾರಿದೀಪಗಳು. ಆಶ್ಚರ್ಯಕರವೆಂದರೆ ಅವು ವರ್ತಮಾನದ ವಿದ್ಯಮಾನಗಳ ನಿರೂಪಕಗಳಾಗಿಯೂ ಕಾರ್ಯನಿರ್ವಹಿಸುತ್ತಿವೆ. ಮೊನ್ನೆ ಧ್ವಂಸವಾದ ಮಾಯಾವತಿಯವರ ಪ್ರತಿಮೆ ಇದಕ್ಕೊಂದು ನಿದರ್ಶನ. ಹೌದು, ನೂರು ಅಕ್ಷರ ಮಾಡದ ಕೆಲಸವನ್ನು ಒಂದು ಚಿತ್ರ ಮಾಡುತ್ತದೆ, ಒಂದು ವಿಗ್ರಹ ಮಾಡುತ್ತದೆ. ಯಾಕೆಂದರೆ ಉತ್ತರ ಪ್ರದೇಶದಲ್ಲಿ ಮಾಯಾವತಿಯ ಪ್ರತಿಮೆ ಧ್ವಂಸವಾಗಿದೆ ಎಂದಾಕ್ಷಣ ಇಡೀ ಭಾರತದಾದ್ಯಂತ ಬಿ.ಎಸ್.ಪಿ.ಕಾರ್ಯಕರ್ತರ ಪಡೆ ಈ ವರ್ಷದ ಆರಂಭದ ಚುನಾವಣಾ ಸೋಲನ್ನು ಒಮ್ಮೆಲೆ ಮರೆತು ಒಟ್ಟಿಗೆ ಎದ್ದು ನಿಂತಿತು. ಅದು ಯಾವ ಪರಿಯೆಂದರೆ ಯಾರು ತಾನು ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಎಲ್ಲಾ ಮಾಯಾ ಪ್ರತಿಮೆಗಳನ್ನು ಬೋಲ್ಡೊಜರ್ ಬಳಸಿ ಉರುಳಿಸುತ್ತೇನೆ ಎಂದು ಘೋಷಿಸಿದ್ದರೋ ಅದೇ ವ್ಯಕ್ತಿ ಪ್ರತಿಮೆ ಧ್ವಂಸಗೊಂಡ 12 ಘಂಟೆಗಳ ಒಳಗೆ ಅದೇ ಪ್ರತಿಮೆ ಸ್ಥಾಪಿಸುವ ಮೂಲಕ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಆತ ಮಾಯಾ ಪ್ರತಿಮೆಗೆ ತಲೆಬಾಗಿದರು.
ಸಾಲದಕ್ಕೆ ಆತ ಪ್ರತಿಮೆ ಧ್ವಂಸಕಾರರ ವಿರುದ್ಧ ಸೆಕ್ಷನ್ 209 ರ ಅಡಿಯಲ್ಲಿ ಪ್ರಕರಣ ದಾಖಲಿಸಿದರು. ಆ ಸೆಕ್ಷನ್ ಪ್ರಕಾರ ಆ ಪ್ರತಿಮೆ ಧ್ವಂಸ ಮಾಡಿದ್ದು, ಒಂದು ಧರ್ಮದ ಧಾರ್ಮಿಕ ಆಚರಣೆಗೆ ಹಾನಿ ಮಾಡಿದಂತೆ, ಆ ಧರ್ಮದ ವಿಗ್ರಹಕ್ಕೆ ಧಕ್ಕೆ ಮಾಡಿದ್ದು ಎಂದು ಅರ್ಥ. ಅಂದಹಾಗೆ ಮಾಯಾವತಿಯವರದು ದಲಿತ ಧರ್ಮ ಮತ್ತು ಆಕೆ ಆ ಧರ್ಮದ ಅಧಿದೇವತೆ ಎಂದು ಸ್ವತಃ ಅಖಿಲೇಶ್ ಯಾದವರೇ ಒಪ್ಪಿಕೊಂಡರು.ನಿಜ, ಮಾಯಾವತಿ ಅವರು ತಮ್ಮ ಪ್ರತಿಮೆಯನ್ನು ಸರಕಾರಿ ವೆಚ್ಚದಲ್ಲಿಯೇ ಮಾಡಿರಬಹುದು. ಹಾಗಂತ ಕಾನೂನಿನಲ್ಲಿ ಸರಕಾರಿ ವೆಚ್ಚದಲ್ಲಿ ರಾಜಕೀಯ ನಾಯಕರು ತಮ್ಮ ಪ್ರತಿಮೆಗಳನ್ನು ನಿರ್ಮಿಸಿಕೊಳ್ಳಬಾರದೆಂದಿಯೇ? ಖಂಡಿತ ಇಲ್ಲ.
ಹಾಗೆ ಹೇಳುವುದಾದರೆ ಸ್ವತಃ ತನ್ನ ಪ್ರತಿಮೆಯನ್ನು ತಾನೇ ನಿರ್ಮಿಸಿಕೊಳ್ಳಲು, ಅದನ್ನು ಇತಿಹಾಸದ ಕುರುಹಾಗಿ ಇಟ್ಟು ಹೋಗಲು ಆಡಳಿತಗಾರನೊರ್ವನಿಗೆ ಧಮ್ ಇರಬೇಕು. ತಾನು ಮಾಡುತ್ತಿರುವುದು ಸರಿ, ಅದನ್ನು ಇತಿಹಾಸ ಸದಾಕಾಲ ಜ್ಞಾಪಿಸಿಕೊಳ್ಳುತ್ತಿರಬೇಕು ಎಂದು ತನ್ನನ್ನು ತಾನು ಸ್ವಯಂ ಪ್ರತಿಷ್ಠಾಪಿಸಿಕೊಳ್ಳುವ ಛಾತಿ, ಸ್ವಾಭಿಮಾನದ ಅತ್ಯುನ್ನತ ಮನಸ್ಥಿತಿ ಅಂತಹ ಆಡಳಿತಗಾರನಿಗೆ ಇರಬೇಕು. ಸಂತಸದ ವಿಚಾರವೆಂದರೆ ತನ್ನ ಆಡಳಿತದ ಬಗ್ಗೆ ಅ ಪರಿಯ ಹೆಮ್ಮೆ ಇದ್ದಂತಹ ವ್ಯಕ್ತಿ, ತನ್ನನ್ನು ತಾನು ದೇವನಾಂಪ್ರಿಯ, ಪ್ರಿಯದರ್ಶಿನಿ ಎಂದು ಕರೆದುಕೊಂಡು ಹಾಗೆ ಲಕ್ಷಾಂತರ ಶಿಲಾ ಶಾಸನಗಳನ್ನು ಕೆತ್ತಿಸಿ ಈ ಭಾರತದ ಇತಿಹಾಸದಲ್ಲಿ ಅಮರನಾಗಿ ಉಳಿದ ವ್ಯಕ್ತಿ ಸಾಮ್ರಾಟ್ ಅಶೋಕ ಮಾತ್ರ.
ಈ ನಿಟ್ಟಿನಲ್ಲಿ ಅಶೋಕನನ್ನು ಬಿಟ್ಟರೆ ತನ್ನ ಶ್ರೇಷ್ಠ ಆಡಳಿತದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡು ತನ್ನದೆ ಪ್ರತಿಮೆಗಳನ್ನು ಸ್ಥಾಪಿಸಿ ಇತಿಹಾಸಕ್ಕೆ ಬಿಟ್ಟು ಹೋದ ಆಧುನಿಕ ವ್ಯಕ್ತಿಯೆಂದರೆ ಅದು ಮಾಯಾವತಿ ಮಾತ್ರ. ಖಂಡಿತ, ಇನ್ನು ಎರಡೂವರೆ ಸಾವಿರ ವರ್ಷಗಳ ನಂತರ ಈಗ ನಾವು ಹೇಗೆ ಸಾಮ್ರಾಟ್ ಅಶೋಕನನ್ನು ನೆನೆಸಿಕೊಳ್ಳುತ್ತೇವೆಯೋ ಹಾಗೆಯೇ ಮುಂದಿನ ತಲೆಮಾರು ಮಾಯಾವತಿಯವರನ್ನು ನೆನೆಸಿಕೊಳ್ಳುತ್ತದೆ. ಆಸಕ್ತಿಯಿಂದ ಅಧ್ಯಯನ ಮಾಡುತ್ತದೆ. ತನ್ನ ಮುಂದಿನ ಭವಿಷ್ಯದ ದಾರಿದೀಪವಾಗಿ ಆ ಪ್ರತಿಮೆಯನ್ನು ಆ ತಲೆಮಾರು ತೆಗೆದುಕೊಳ್ಳುತ್ತದೆ.
ಶೋಷಿತರ ಐಕ್ಯಮತ್ಯದ ಸಂಕೇತವಾಗಿಯೂ ಸಹ ಮಾಯವತಿಯವರ ಆ ಪ್ರತಿಮೆಗಳು ಉಳಿದುಬಿಡುತ್ತವೆ. ಈ ನಿಟ್ಟಿನಲಿ ಅದರ ಸಣ್ಣ ಝಲಕ್ ಮೊನ್ನೆ ಅವರ ಪ್ರತಿಮೆ ಧ್ವಂಸಗೊಂಡಾಗ ಇಡೀ ದೇಶಾದ್ಯಂತ ಕಂಡು ಬಂದಿದೆ. ಯಾಕೆಂದರೆ ಪ್ರತಿಮೆ ಧ್ವಂಸಗೊಂಡ ದಿನ ಉತ್ತರ ಪ್ರದೇಶದ ಹಳ್ಳಿ ಹಳ್ಳಿ ಅಕ್ಷರಶಃ ಯುದ್ಧ ಭೂಮಿಯಾಗಿತ್ತು. ಬರೀ ಉತ್ತರ ಪ್ರದೇಶ ಮಾತ್ರ ಯಾಕೆ, ಇಡೀ ದೇಶ ಅಂದು ಯುದ್ಧ ಭೂಮಿಯಾಗಿತ್ತು. ಅಖಿಲೇಶ್ ಏನಾದರೂ ಅದನ್ನು ತಕ್ಷಣವೇ ಸರಿಪಡಿಸದಿದ್ದಿದ್ದರೆ ಇಷ್ಟೊತ್ತಿಗಾಗಲೇ ಪರಿಸ್ಥಿತಿ ಕೈಮೀರಿ ಹೋಗಿರುತ್ತಿತ್ತು.
ಒಂದಂತು ನಿಜ, ಮಾಯಾವತಿ ಇಂದು ಸೋತಿರಬಹುದು. ಆದರೆ ಅವರು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳನ್ನು ಇಂದು ಅವರ ಜೀವಂತ ಪ್ರತಿಮೆಗಳು ಮಾಡುತ್ತಿವೆ. ಶೋಷಿತ ಸಮುದಾಯಗಳಲ್ಲಿ ಅವು ಸ್ವಾಭಿಮಾನವನ್ನು, ಐಕ್ಯಮತ್ಯವನ್ನು ಬಿತ್ತುತ್ತಿವೆ, ತನ್ಮೂಲಕ ತಾನು ಏಕೆ ನಿರ್ಮಿಸಲ್ಪಟ್ಟೆ ಎಂಬ ಪ್ರಶ್ನೆಗೆ ಉತ್ತರವಾಗಿ ಅವು ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಮಾಯಾವತಿಯವರ ಪ್ರತಿಮೆ ನಿರ್ಮಾಣವನ್ನು ವಿರೋಧಿಸುತ್ತಿದ್ದ ಮನುವಾದಿಗಳ ಮನಸ್ಥಿತಿ ಸದ್ಯದ ಪ್ರತಿಮೆ ಧ್ವಂಸ ಮತ್ತದರ ಅತಿಶೀಘ್ರ ಪುನರ್ ಸ್ಥಾಪನೆಯ ಹಿನ್ನೆಲೆಯಲ್ಲಿ ಹೇಗಿರಬೇಡ? ಹೆಚ್ಚೆಂದರೆ ಅಂತಹ ಮನಸ್ಸುಗಳು ಇನ್ನು ಮುಂದೆ ಮಾಯಾವತಿಯವರ ಹಾಗೇ ತಮ್ಮ ಪ್ರತಿಮೆಗಳನ್ನು ತಾವೇ ನಿರ್ಮಿಸಿಕೊಳ್ಳುವ ಕಾಪಿ ಹೊಡೆಯುವ ಕಾರ್ಯಕ್ಕೆ ಕೈ ಹಾಕಬಹುದುಷ್ಟೆ.
ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...
Click here to post your views ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...