ನಮ್ಮ ಮುಗ್ಧ ಜನ ಸಾಹಿತಿಗಳಿಗೆ, ಲೇಖಕರಿಗೆ ಮತ್ತು ಕಲಾವಿದರುಗಳಿಗೆ ಬಹಳಷ್ಟು ಬಾರಿ ಎಲ್ಲಿಲ್ಲದ ಗೌರವಕೊಡುತ್ತಾರೆ. ಇದು ಎಂದೆಂದಿನಿಂದಲೋ ನಡೆದುಕೊಂಡು ಬಂದಿದೆ. ಈ ಗೌರವ ಕೊಡುವು ದರ ಹಿಂದೆ ಯಾವುದೇ ರೀತಿಯ ಸ್ವಾರ್ಥವಿರು ವುದಿಲ್ಲ. ನಾವು ಸೃಷ್ಟಿಸಲಾರದ್ದನ್ನು ಅವರು ಸೃಷ್ಟಿಸುತ್ತಾರೆ. ಆ ಸೃಷ್ಟಿಯಿಂದ ನಮಗೆ ಮುದ ಸಿಗುತ್ತದೆ ಎಂಬ ಭಾವನೆ ಬರುವುದೇ ಮಹತ್ವಪೂರ್ಣವಾದದ್ದು. ಯಾವುದೇ ಒಬ್ಬ ಸಾಹಿತಿಯ ಒಂದು ಕೃತಿಯನ್ನು ಓದದವರು ಕೂಡ; ಅನನ್ಯತೆಯಿಂದ ನೋಡುವರು. ಸಂಸ್ಕೃತಿಯ ವಿವಿಧ ಮುಖಗಳು ಮುಂದುವರಿಯುವುದು ಹೀಗೆಯೇ ಇರಬಹುದು. ಕೆಲವೊಮ್ಮೆ ನವೆಂಬರ್ ಮತ್ತು ಡಿಸಂಬರ್ ತಿಂಗಳಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಹೋದಾಗ; ಮುಖ್ಯವಾಗಿ ಲೇಖಕ ಅಥವಾ ಸಾಹಿತಿಗಳನ್ನು ಎಷ್ಟು ಸಂಭ್ರ ಮದಿಂದ ಗೌರವಿಸುವರು. ಅದನ್ನು ಕಂಡಾಗ ನಿಜವಾಗಿಯೂ ಅದಕ್ಕೆ ನಾವು ಅರ್ಹರಾ ಅನ್ನಿಸಿಬಿಡುತ್ತದೆ. ಅಷ್ಟೊಂದು ಸರಳ ಮನಸ್ಸಿನಿಂದ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಒಳಗೆ ಬಿಟ್ಟುಕೊಂಡಿರುತ್ತಾರೆ. ಇದರಿಂದಲೇ ಇರಬಹುದು ಕೆಲವರು ನಾನು ಬರೆ ಯಬೇಕು, ಸಾಹಿತಿಯಾಗಬೇಕೆಂದು ತುದಿಗಾಲಿ ನಲ್ಲಿ ನಿಂತಿರುತ್ತಾರೆ.
ಇದಕ್ಕೆ ಯಾವುದೇ ರೀತಿಯ ಪೂರ್ವ ಸಿದ್ಧತೆ ಬೇಕಾಗಿಲ್ಲ ಎಂದು ತಿಳಿದಿರುವುದು ಸ್ವಾಭಾವಿಕ. ಇಂಥ ಮನಸ್ಥಿತಿಯು ಉತ್ತಮ ಕೃತಿಗಳನ್ನು ಓದುವುದರ ಕಡೆಗೆ ಕರೆದೊಯ್ಯಲೂ ಬಹುದು. ಒಂದು ದೃಷ್ಟಿಯಿಂದ ಇದು ಆರೋಗ್ಯಪೂರ್ಣವೂ ಆಗಿರಲು ಸಾಧ್ಯ. ನೂರಾರು ವರ್ಷಗಳಿಂದ ಬಹುಪಾಲು ಮನೆಗಳಲ್ಲಿ ಅಕ್ಷರಾಭ್ಯಾಸವಿಲ್ಲದಿದ್ದರೂ; ಅಂಥ ಮನೆಯಲ್ಲಿ ನಮ್ಮ ಸಂಸ್ಕೃತಿಯ ಶ್ರೇಷ್ಠ ಕೃತಿಯೊಂದನ್ನು ಪೂಜ್ಯತೆಯಿಂದ ಒಂದು ಪಟ್ಟಿಗೆಯಲ್ಲಿಟ್ಟಿರುತ್ತಾರೆ. ಮತ್ತು ಎಂದಾದರೂ ಪವಿತ್ರ ದಿನಗಳಲ್ಲಿ ಅದನ್ನು ಓದಿ ತಿಳಿಸುವ ವಿದ್ವಾಂಸರನ್ನು ಕರೆಸಿ ಕೇಳಿಸಿ ಕೊಂಡು ಗೌರವಿಸುತ್ತಾ ಬಂದಿರುತ್ತಾರೆ.
ಕೊನೆಯ ಪಕ್ಷ ನಾವು ಓದಿಲ್ಲ, ಓದಿಸಿ ಕೊಂಡಾದರೂ ತಿಳಿದುಕೊಳ್ಳೋಣ ಎಂಬ ಭಾವನೆ ರೂಢಿಗತವಾಗಿ ಬಂದಿರುವುದನ್ನು ನೋಡುತ್ತೇವೆ. ಇಂಥ ಮನಸ್ಥಿತಿಯನ್ನು ಕಾಪಾಡಿಕೊಂಡು ಬಂದಿರುವುದರಿಂದಲೇ ಸಾಕ್ಷರತೆಯೂ ವ್ಯಾಪಕವಾಗಿ ಆವರಿಸಿ ಕೊಳ್ಳುತ್ತಾ ಬಂದಿರುವುದು. ಋಷಿಮಾನ್ಯರು, ಸೂಫಿ ಸಂತರು ಎಂಬ ಪರಿಕಲ್ಪನೆಯ ಬಗ್ಗೆ ದಟ್ಟವಾದ ಮರ್ಯಾದೆಯನ್ನು ಉಳಿಸಿ ಕೊಂಡು ಬಂದಿರುವುದು. ಯಾವುದೇ ಸಮಾಜ ಇಂಥದರ ಮೂಲಕವೇ ನಿಧಾನ ವಾಗಿ ಲವಲವಿಕೆಯನ್ನು ಪಡೆಯುತ್ತಾ ಬಂದಿರುವುದು. ಈ ಲವಲವಿಕೆಯೇ ನಾಗರಿಕತೆಯ ರೂಪಕವಾಗಿ ಸಮೃದ್ಧತೆಯನ್ನು ಪಡೆದಿರುವಂತಹದ್ದು. ಇಂದು ಆದುನಿಕ ಸಮಾಜದಲ್ಲಿ ಪ್ರಚಾರ ಮಾಧ್ಯಮಗಳು ತುಂಬ ಸ್ಪರ್ಧಾತ್ಮಕವಾಗಿರುವುದರಿಂದ ಲೇಖಕರನ್ನು ಮತ್ತು ಕಲಾವಿದರನ್ನು ಜೊತೆಜೊತೆಯಾಗಿಯೇ ಕರೆದೊ ಯ್ಯುತ್ತಿರುವುದು.
ಜಗತ್ತಿನ ಎಲ್ಲಾ ಆಗು ಹೋಗು ಗಳಿಗೆ ಸಂಬಂಧಿಸಿದಂತೆ ‘ಸ್ಪಂದನ’ವೇ ಬೇರೆ ಬೇರೆ ಆಯಾಮಗಳನ್ನು ಕಂಡುಕೊಳ್ಳುತ್ತಿರು ವುದು. ಒಬ್ಬ ಕಲಾವಿದನ ಅಥವಾ ಲೇಖಕನ ಮಾತು ಹಾಗೂ ಚಿಂತನೆಯನ್ನು ಕೇಳಲು ನೂರಾರು ಕಿ.ಮೀಟರ್ ಹೋಗುವ ಮನಸ್ಥಿತಿ ಎಂದೆಂದಿನಿಂದಲೋ ಬಂದಿದೆ. ಇಂಥದ್ಧನ್ನು ಕಲ್ಪಿಸಿ ಕೊಂಡು ಚಿಂತಿಸುವುದಕ್ಕೆ ಎಷ್ಟು ಅದ್ಬುತವಾಗಿರುತ್ತದೆ. ಕೆಲವು ದಿವಸಗಳ ಹಿಂದೆ ಬೆಂಗಳೂರಿಗೆ ಪ್ರಸಿದ್ಧ ಲೇಖಕ ರಸ್ಕಿನ್ ಬಾಂಡ್ ಬಂದಿದ್ದರು. ಕೇವಲ ದೊಡ್ಡವರಿಗೆ ಮಾತ್ರವಲ್ಲ; ಮಕ್ಕಳಿಗೆ ತುಂಬಾ ಪ್ರಿಯರಾದ ಲೇಖಕರಲ್ಲವೇ ? ಇವರ ಪುಸ್ತಕ ಬಿಡುಗಡೆ ಮತ್ತು ಉಪವಾಸ ಫೋರಂ ಬುಕ್ ಹೌಸ್‌ನಲ್ಲಿತ್ತು. ಮಕ್ಕಳು ತಮ್ಮ ಪೋಷಕರ ಜೊತೆ ಬಂದು ಹಕ್ಕಿಗಳ ರೀತಿಯಲ್ಲಿ ಚಿಲಿಪಿಲಿಗುಡುತ್ತಿದ್ದರು.
ರಸ್ಕಿನ್ ಬರುವುದಕ್ಕೆ ಒಂದು ಗಂಟೆ ಮುಂಚೆಯೇ ಈ ರೀತಿಯ ಚಿಲಿಪಿಲಿ ಜೊತೆಗೆ; ರ್ಯಾಕ್‌ನಲ್ಲಿ ಬಾಂಡ್ ಅವರ ಕೃತಿಗಳನ್ನು ಪ್ರದರ್ಶಿ ಸಿದ್ದರು. ಅವುಗಳನ್ನು ನೋಡಲು ಮತ್ತು ಕೊಂಡು ತಮ್ಮ ಪ್ರಿಯ ಲೇಖಕನ ಹಸ್ತಕ್ಷರ ಪಡೆಯಲು ಸಿದ್ಧತೆ ನಡೆಸಿದ್ದರು. ಹಿಂದೆ ಇಲ್ಲಿ ನೈಪಾಲ್ ಮತ್ತು ರಾಮಚಂದ್ರಗುಹಾ ಅವರ ಕೃತಿಗಳ ಬಿಡು ಗಡೆಯ ಸಂದರ್ಭದಲ್ಲಿ ಭಾಗವಹಿಸಿರುವೆ. ಆದರೆ ರಸ್ಕಿನ್ ಬಾಂಡ್ ಆಗಮನಕ್ಕೆ ಮಕ್ಕಳ ಸ್ವಾಗತ ಒಂದು ರೀತಿಯಲ್ಲಿ ಚೇತೋಹಾರಿಯಾಗಿತ್ತು. ಬಾಂಡ್ ಅವರು ವೇದಿಕೆ ಪ್ರವೇಶಿಸಿದಾಕ್ಷಣ ಕುಣಿದು ಕುಪ್ಪಳಿಸಿದರು. ಅವರ ಬಳಿ ಹೋಗಿ ಭಾವಚಿತ್ರಕ್ಕೆ ತಮ್ಮ ವೈವಿಧ್ಯಮಯವಾದ ಮುಖಾರವಿಂದಗಳನ್ನು ತೆರೆದುಕೊಂಡರು. ಆಗ ಅವರ ನಗು ಮತ್ತು ಕೇಕೆ ಎಷ್ಟು ಚೆನ್ನಾಗಿತ್ತು.
ಆ ಮಕ್ಕಳ ಸಂಭ್ರಮವನ್ನು ಎಂತೆಂಥ ಗುಣವಾಚಕ ಗಳಲ್ಲಿ ತುಂಬಿಡಬಹುದು ಅನ್ನಿಸಿತ್ತು. ರಸ್ಕಿನ್ ಬಾಂಡ್ ಅವರ ಮಾತಿನ ನಂತರ ಬಹುಪಾಲು ಮಕ್ಕಳು ಪ್ರಶ್ನೆಗಳ ಮಳೆಯನ್ನೇ ಕೆರೆದರು. ಬಹಳ ಮಕ್ಕಳ ಪ್ರಶ್ನೆಗಳಲ್ಲಿ; ಒಂದು ಮುಖ್ಯ ಪ್ರಶ್ನೆ: ‘‘ ನೀವು ಹೇಗೆ ಲೇಖಕರಾದಿರಿ?’’ ಎಂದು. ಅದಕ್ಕೆ ಬಾಂಡ್ ಅವರು ಒಂದು ಅಮೂಲ್ಯ ಸಂದೇಶದಂತೆ, ಒಂದು ಮಾತು ಹೇಳಿದರು ‘‘ನಾನೇನಾದರು ಇಂದು ಲೇಖಕನಾ ಗಿದ್ದರೆ ಅದಕ್ಕೆ ಮುಖ್ಯ ಕಾರಣ ನಾನು ಓದಿದ ಜಗತ್ತಿನ ಅತ್ಯುತ್ತಮ ಕೃತಿಗಳು. ಈಗಲೂ ನಾನು ಓದನ್ನು ನಿಲ್ಲಿಸಿಲ್ಲ. ಓದು ಮತ್ತು ಬರವಣಿಗೆ ಒಟ್ಟೊಟ್ಟಿಗೆ ಸಾಗಬೇಕು. ಹಾಗೆಯೇ ನನ್ನ ಓದು ಏನೇನು ಸಾಲದು ಎಂಬ ಪುಸ್ತಕ ವ್ಯಾಮೋಹ ನಮ್ಮನ್ನು ತುಂಬಾ ಎತ್ತರಕ್ಕೆ ಕರೆದೊಯ್ಯಲು ಸಾಧ್ಯ.
ನಾಳೆ ನೀವು ಲೇಖಕರಾದಾಗ ನಿಮ್ಮನ್ನು ಬೇರೆಯವರು ಬರಮಾಡಿಕೊಂಡು ಗೌರವಿಸಿ ದಾಗ ನಿಮಗೆ ಎಷ್ಟು ಖುಷಿಯಾಗಬಹುದು. ಕೇವಲ ಅಂಥದ್ದನ್ನು ಒಂದು ಕ್ಷಣ ನೆನಪಿಸಿ ಕೊಂಡು ಆನಂದಿಸುವುದಕ್ಕೂ ಎಷ್ಟು ಚೆನ್ನಾಗಿರುತ್ತದೆ’’ ಎಂದಾಗ ನಾನು ಕೂಡ ಒಂದು ಮಗುವಿನಂತೆ ಸಂಭ್ರಮಿಸಿದ್ದೆ. ಈ ಸಂಭ್ರಮದ ಮುಂದುವರಿದ ಭಾಗವಾಗಿ ನನ್ನ ಮನಸ್ಸಿನಲ್ಲಿ ರಸ್ಕಿನ್ ಬಾಂಡ್ ಅವರು ತುಂಬಿಕೊಂಡಿದ್ದರು ಎಂಬುದಕ್ಕೆ ಮುಖ್ಯವಾಗಿ: ಕಳೆದ ವರ್ಷದ ಕೊನೆಯ ಭಾಗ ದಲ್ಲಿ ‘ಔಟ್‌ಲುಕ್’ ವಾರ ಪತ್ರಿಕೆಯಲ್ಲಿ ತಮ್ಮ ಮುಸಾರಿ ದಿನಚರಿಯಲ್ಲಿ ಪುಸ್ತಕ ಸಂಸ್ಕೃತಿಯ ಕುರಿತು ಬರೆದಿದ್ದರು. ಅದರಲ್ಲಿ ಎಂದೆಂದಿಗೂ ಅಮೂಲ್ಯವೆನ್ನುವಂತೆ ಕೆಲವು ವಾಕ್ಯಗಳಿದ್ದವು.
ಅದರಲ್ಲಿ ಅವರು ಹೀಗೆ ವಿವರಿಸುವರು: ‘‘ಒಬ್ಬ ವಿದ್ಯಾವಂತನಾದವನು ವಾರಕ್ಕೊಂದು ಪುಸ್ತಕವನ್ನು ಓದದೆ ಹೇಗೆ ಕಾಲ ಕಳೆಯುವನೋ ನಂಬುವು ದಕ್ಕೆ ಸಾಧ್ಯವಿಲ್ಲ’’ ಎಂಬುದು ನನ್ನನ್ನು ಹಲವು ರೀತಿಯಲ್ಲಿ ಕಾಡತೊಡಗಿತ್ತು. ಈ ಅಮೂಲ್ಯ ರಸ್ಕಿನ್ ಬಾಂಡ್ ವಾಕ್ಯ ನೆನ ಪಿಗೆ ಬಂದಾಗಲೆಲ್ಲ ಲಂಕೇಶ್ ಅವರು ಸ್ಮರಣೆಗೆ ಬರುವರು. ಯಾಕೆಂದರೆ ನಾವು ವಾರಕ್ಕೊಂದು ಪುಸ್ತಕವನ್ನು ಓದದಿದ್ದರೆ ಛೀಮಾರಿ ಹಾಕುತ್ತಿದ್ದರು. ಒಮ್ಮಿಮ್ಮೆ ನಾವು ಓದಿದ್ದೇವೆ ಎಂದು ಸುಳ್ಳು ಹೇಳಿ ದಾಗ; ಮತ್ತೆ ಎಂದಾದರೂ ಸಂಬಂಧ ಪಟ್ಟ ಕೃತಿಯ ಯಾವುದೋ ಭಾಗದ ವಿವರಣೆ ಕೇಳಿ ಪೇಚಿಗೆ ಸಿಕ್ಕಿಸುತ್ತಿದ್ದರು. ಇಂಥದರಿಂದ ನಾವು ಹೇಗೆ ಓದಿನ ಸಂಸ್ಕೃತಿಗೆ ತೆರೆದು ಕೊಂಡೆವು ಎಂಬುದರಿಂದ ಖುಷಿಗೊಳ್ಳುತ್ತೇವೆ.
ಸಾಂಸ್ಕೃತಿಕವಾಗಿ ನಾವು ಸದಾ ಸಂಭ್ರಮಿಸಲು, ಆನಂದಿಸಲು ತೊರೆಗಳ ರೀತಿಯಲ್ಲಿ ಎಂತೆಂಥದೋ ತೆರೆದುಕೊಂಡಿರುತ್ತದೆ. ಆದರೆ ನಾವು ಅಂಥದ್ದನ್ನೆಲ್ಲಾ ಬಾಗಿಲು ತೆರೆದು ನೋಡುವ ಮನೋಭಿಲಾಷೆ ಅಭಿವ್ಯಕ್ತವಾ ಗುತ್ತಲೇ ಇರಬೇಕಾಗುತ್ತದೆ. ಈ ದೃಷ್ಟಿಯಿಂದ ಕಳೆದ ವರ್ಷ ನಾನು ಇಟಲಿಯ ವೆನಿಸ್ ನಗರದಲ್ಲಿ ಸುತ್ತಾಡುವಾಗ ಜಾನ್ ರಸ್ಕಿನ್ ನನ್ನ ಮನಸ್ಸಿನ ತಂಬಾ ಆವರಿಸಿಕೊಂಡಿದ್ದರು. ಒಟ್ಟು ವೆನಿಸ್ ವೈವಿಧ್ಯಮಯವಾದ ನಗರ ‘ರಸ್ಕಿನ್’ನ ಒಂದು ಪ್ರತಿಮೆಯಂತೆ ಕಲ್ಪಿಸಿ ಕೊಂಡೆ. ಯಾಕೆಂದರೆ ಗಾಂಧೀಜಿಯವರ ಮೇಲೆ ‘ಪೋರ್ಸ್ ಕ್ಲೇವಿಜೇರ್’, ‘ಸ್ಟೋನ್ಸ್ ಆಫ್ ವೆನಿಸ್’ ಮತ್ತು ‘ಅನು ಟು ದಿಸ್ ಲಾಸ್ಟ್’ ಕೃತಿಗಳು ತುಂಬಾ ಪ್ರಭಾವವನ್ನು ಬೀರಿದ್ದವು.
ಅದರಲ್ಲೂ ಮುಖ್ಯವಾಗಿ ‘ಅನ್ ಟು ದಿಸ್ ಲಾಸ್ಟ್’ ಕೃತಿಯಂತೂ ಗಾಂಧೀಜಿಯವರ ಮಾನಸಿಕ ದಿಕ್ಕನ್ನೇ ಬದಲಾಯಿಸಿ ಬಿಟ್ಟಿತು. ಅದು ಇಂದು ನಮ್ಮ ನಡುವೆ ‘ಸರ್ವೋದಯ’ ಕೃತಿಯಾಗಿ ಇದೆ. ಅಲ್ಲಿ ರಸ್ಕಿನ್ ಒತ್ತಿ ಹೇಳುವುದು: ಮಕ್ಕಳಿಗೆ ಸ್ವಚ್ಛ ಗಾಳಿಯ ಬಗ್ಗೆ, ಸ್ವಚ್ಛ ನೀರಿನ ಬಗ್ಗೆ, ಹಾಗೂ ಸ್ವಚ್ಛ ಮಣ್ಣಿನ ಬಗ್ಗೆ ತಿಳಿದಿರಬೇಕು ಎನ್ನುವುದು. ನಿಜವಾಗಿಯೂ ಒಂದು ಸಮಾಜಕ್ಕೆ ಇಂದಿಗೂ ರಚನಾತ್ಮಕ ಚಾಲನೆ ಇದ್ದರೆ; ಇಂಥ ಮಾತುಗಳಿಂದಲೇ ಅನಿಸುತ್ತದೆ. ಇರಲಿ, ರಸ್ಕಿನ್‌ನ ‘ಸ್ಟೋನ್ಸ್ ಆಫ್ ವೆನಿಸ್’ ಕುರಿತು ಮತ್ತೆ ಎಂದಾದರೂ ಇದೇ ಅಂಕಣದಲ್ಲಿ ಬರೆಯಲು ಪ್ರಯತ್ನಿಸುವೆ. ರಸ್ಕಿನ್ ಬಾಂಡ್ ಬೆಂಗಳೂರಿಗೆ ಬಂದು ಹೋದ ಮೇಲೆ ಒಂದು ವಾರ ಅವರ ಮತ್ತು ಅವರನ್ನು ಸುತ್ತುವರಿದಿದ್ದ ಮಕ್ಕಳ ಗುಂಗಿನಲ್ಲಿಯೇ ಇದ್ದೆ.
ಇದೇ ಸಮಯದಲ್ಲಿ ಗ್ರಂಥಾಲಯ ಇಲಾಖೆಯ ಪ್ರಧಾನ ಕಚೆೇರಿಯಲ್ಲಿ 2011ರ ಪುಸ್ತಕಗಳ ಆಯ್ಕೆಯ ಪ್ರಕ್ರಿಯೆಯಲ್ಲಿದ್ದೆ. ಅಲ್ಲಿಗೆ ಕಬ್ಬನ್ ಪಾರ್ಕ್‌ನಲ್ಲಿರುವ ಬಾಲಭವನದ ಕಚೇರಿ ಯಿಂದ ಬಾಲಭವನದ ಕಾರ್ಯದರ್ಶಿಗಳಾದ ದಿವ್ಯ ನಾರಾಯಣಪ್ಪ ಹಾಗೂ ಸಂಯೋಜಕಿ ವಿನಂತಿಯವರು ಬಂದು ಭೇಟಿಯಾದರು. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಆಯ್ಕೆ ಯಾದ 90 ಮಕ್ಕಳಿಗೆ ಬರವಣಿಗೆಯ ಕಮ್ಮಟವನ್ನು ಕುರಿತು ವಿವರಿಸಿದರು. ಈ ಮೂರುದಿನಗಳ ಕಮ್ಮಟದಲ್ಲಿ ನಿರ್ದೇಶಕರಾಗಿ ನಡೆಸಿಕೊಡ ಬೇಕೆಂದು ಕೇಳಿದರು. ಸಂತೋಷದಿಂದ ಒಪ್ಪಿ ಕೊಂಡೆ.
‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...
Click here to post your views ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...
ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...