ಕಳೆದ ವಾರ ಇಂಟರ್‌ನೆಟ್ ವೇಗ ಕುರಿತಂತೆ ಕೆಲವು ಮೂಲಭೂತ ಸಮಸ್ಯೆಗಳನ್ನು ಚರ್ಚಿಸಿದ್ದೆವು. ಈ ವಾರ ಅದರ ಮುಂದುವರಿದ ಭಾಗವಾಗಿ ಇರುವ ಬ್ರ್ಯಾಡ್‌ಬ್ಯಾಂಡ್ ಇಂಟರ್‌ನೆಟ್ ವೇಗದಲ್ಲಿ ದೊಡ್ಡ ದೊಡ್ಡ ಪೈಲುಗಳನ್ನು ಕಡಿಮೆ ಸಮಯದಲ್ಲಿ ಹೇಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂಬ ವಿಚಾರವಾಗಿ ಒಂದಿಷ್ಟು ವಿಚಾರ ತಿಳಿದುಕೊಳ್ಳೋಣ.ಇಲ್ಲಿ ಇನ್ನೊಂದು ವಿಷಯವನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು. ನೀವು ಈಗಾಗಲೇ ಗಮನಿಸಿರಬಹುದು. ಕೆಲವೊಂದು ವೆಬ್‌ಸೈಟುಗಳು ವೇಗವಾಗಿ ತೆರೆದುಕೊಳುತ್ತವೆ. ಮತ್ತೆ ಕೆಲವು ವೆಬ್‌ಸೈಟುಗಳು ನಿಧಾನವಾಗಿ ತೆರೆದುಕೊಳ್ಳುತ್ತವೆ. ನಿಮಗಿರುವುದು ಒಂದೇ ಇಂಟರ್‌ನೆಟ್ ಸಂಪರ್ಕವಾಗಿದ್ದರೂ ಆ ಸಂಪರ್ಕದ ಮೂಲಕವೇ ಬ್ರೌಸ್ ಮಾಡಿದಾಗ ಏಕೆ ಹೀಗೆ ಕೆಲವು ವೆಬ್‌ಸೈಟುಗಳು ವೇಗವಾಗಿ ಮತ್ತೆ ಕೆಲವು ವೆಬ್‌ಸೈಟುಗಳು ನಿಧಾನವಾಗಿ ತೆರೆದುಕೊಳುತ್ತವೆ? ಇದು ಹಲವು ಅಂಶಗಳನ್ನು ಆಧರಿಸಿರುತ್ತದೆ. ಆ ನಿರ್ದಿಷ್ಟ ವೆಬ್‌ಸೈಟ್‌ಗಿರುವ ಟ್ರಾಫಿಕ್, ಆ ವೆಬ್‌ಸೈಟನ್ನು ಒಡಲೊಳಗೆ ಇಟ್ಟುಕೊಂಡಿರುವ ಸರ್ವರ್ ಹೀಗೆ ಹಲವು ಅಂಶಗಳು ನಿರ್ಧಾರಕವಾಗಿರುತ್ತವೆ.
ಕೆಲವೊಮ್ಮೆ ಏನಾಗುತ್ತದೆ ಎಂದರೆ ನಿಮ್ಮ ಇಂಟರ್‌ನೆಟ್ ಸಂಪರ್ಕವೇನೋ ವೇಗವಾಗಿರ ಬಹುದು. ಆದರೆ, ನೀವು ಸಂಪರ್ಕಿಸುವ ವೆಬ್‌ಸೈಟಿನ ಸರ್ವರ್ ಅಷ್ಟೇ ಸ್ಪೀಡಾಗಿ ಕಾರ್ಯನಿರ್ವಹಿಸದಿದ್ದರೆ ಪ್ರಯೋಜನ ವಾಗುವುದಿಲ್ಲ. ಅಂತಹ ಸಂದಭರ್ದಲ್ಲೇ ಡೌನ್‌ಲೋಡ್ ಮ್ಯಾನೇಜರ್‌ಗಳು ಅಗತ್ಯವಾಗಿ ಪ್ರಯೋಜನಕ್ಕೆ ಬರುತ್ತವೆ.ಇಪ್ಪತ್ತು ಜನರನ್ನು ನಿಮ್ಮ ಮನೆಯಿಂದ ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋಗುವುದಕ್ಕೆ ಒಂದೇ ಟ್ಯಾಕ್ಸಿ ಬಳಸಿದರೆ ಎಷ್ಟು ಸಮಯ ಹಿಡಿಯುತ್ತದೆ? ಅದೇ ಟ್ಯಾಕ್ಸಿ ಹಲವು ಟ್ರಿಪ್‌ಗಳನ್ನು ಮಾಡಬೇಕಾಗಿ ಬರುವುದರಿಂದ ಹೆಚ್ಚು ಸಮಯ ಬೇಕಾಗುತ್ತದೆ. ಒಂದು ಟ್ಯಾಕ್ಸಿಯ ಬದಲಿಗೆ ಐದು ಟ್ಯಾಕ್ಸಿಗಳಿದ್ದರೆ ಎಲ್ಲರೂ ಒಂದೇ ಸಮಯಕ್ಕೆ ರೈಲ್ವೆ ನಿಲ್ದಾಣವನ್ನು ವೇಗವಾಗಿ ತಲುಪಬಹುದಲ್ಲವೆ?
ಇನ್ನೊಂದು ನಿದರ್ಶನದ ಮೂಲಕ ಹೇಳುವುದಾದರೆ ನೀವು ಹೊಲಕ್ಕೆ ನೀರು ಹಾಯಿಸುವಾಗ ಹತ್ತು ಐದು ಅಗಲದ ಪೈಪನ್ನು ಬಳಸುತ್ತೀರಿ ಎಂದಿಟ್ಟು ಕೊಳ್ಳಿ. ಆದರೆ, ನೀರಿನ ಮೂಲ ಇರುವುದು ಕೇವಲ ಒಂದು ಇಂಚು ಮಾತ್ರ. ಅಂದರೆ ಒಂದು ಇಂಚು ಅಗಲದ ಪೈಪಿನಲ್ಲಿ ಭರ್ತಿಯಾಗಿ ಹರಿಯುವಷ್ಟು ನೀರನ್ನು ನೀವು ಐದು ಇಂಚು ಅಗಲದ ಪೈಪಿನಲ್ಲಿ ಹರಿಸಿದರೆ ಉಳಿದ ನಾಲ್ಕು ಇಂಚು ಜಾಗ ಖಾಲಿಯಾಗಿರುತ್ತದೆ. ಐದು ಇಂಚಿನ ಪೈಪಿನಲ್ಲಿ ಭರ್ತಿಯಾಗಿ ನೀರು ಹರಿಸಬೇಕೆಂದರೆ ಅಂತಹ ಇನ್ನೂ ನಾಲ್ಕು ನೀರಿನ ಮೂಲಗಳು ಬೇಕಾಗುತ್ತವೆ ಅಲ್ಲವೆ? ಸಾರಾಂಶದಲ್ಲಿ ಈ ಡೌನ್‌ಲೋಡ್ ಮ್ಯಾನೇಜರ್‌ಗಳು ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ಬಹಳಷ್ಟು ಸಂದಭರ್ದಲ್ಲಿ ನಿಮ್ಮ ಇಂಟರ್‌ನೆಟ್ ಪೈಪು ದೊಡ್ಡದಿರುತ್ತದೆ. ಆದರೆ, ನೀವು ಸಂಪರ್ಕಿಸುವ ವೆಬ್‌ಸೈಟು ಆ ಕೊಳವೆ ತುಂಬಾ ಹರಿಯುವಷ್ಟು ದತ್ತಾಂಶವನ್ನು ಕೊಡುವುದಿಲ್ಲ. ಹಾಗಾಗಿ, ದೊಡ್ಡ ಕೊಳವೆಯಿದ್ದರೂ ಕಡಿಮೆ ದತ್ತಾಂಶ ನಿಮ್ಮ ಕಂಪ್ಯೂಟರಿಗೆ ನಿಧಾನವಾಗಿ ಇಳಿಯುತ್ತಿರುತ್ತದೆ. ನೀವು ಒಂದು ದೊಡ್ಡ ಫೈಲನ್ನು ಡೌನ್‌ಲೋಡ್ ಮಾಡುವಾಗ ಮೊದಲು ಆ ಫೈಲನ್ನು ಡೌನ್ ಲೋಡ್ ಮ್ಯಾನೇಜರ್‌ಗಳು ತುಂಡು ತುಂಡಾಗಿ ಕತ್ತರಿಸುತ್ತವೆ; ನಂತರ ಒಂದೇ ಇಂಟರ್‌ನೆಟ್ ಸಂಪರ್ಕವನ್ನು ಬಳಸಿಕೊಂಡು ಆ ಫೈಲು ಇರುವ ವೆಬ್‌ಸೈಟಿನ ಸರ್ವರ್‌ನೊಂದಿಗೆ ಏಕಕಾಲದಲ್ಲಿ ಹಲವು ಸಂಪರ್ಕಗಳನ್ನೇರ್ಪಡಿಸುತ್ತವೆ. ನಂತರ ಆ ಸಂಪರ್ಕಗಳ ಮೂಲಕ ಫೈಲಿನ ತುಂಡುಗಳನ್ನು ಏಕಕಾಲದಲ್ಲಿ ಕಂಪ್ಯೂಟರಿಗೆ ಹರಿಸುತ್ತವೆ. ಕೊನೆಗೆ, ಕಂಪ್ಯೂಟರಿನಲ್ಲಿ ತುಂಡು ತುಂಡಾಗಿ ಶೇಖರಣೆ ಯಾದ ಫೈಲುಗಳನ್ನು ಸೇರಿಸಿ ಒಂದೇ ಫೈಲನ್ನು ಮಾಡುತ್ತವೆ. ಈ ರೀತಿಯ ಡೌನ್‌ಲೋಡನ್ನು ಸೆಗ್ಮೆಂಟೆಡ್ ಡೌನ್‌ಲೋಡ್ ಎಂದು ಕರೆಯಲಾಗುತ್ತದೆ.
ಇದೇ ಕೆಲಸವನ್ನು ಇನ್ನೊಂದು ವಿಧಾನದ ಮೂಲಕವೂ ಮಾಡಬಹುದು. ಅದೆಂದರೆ ಕನ್ನಡಿ ಸೈಟುಗಳನ್ನು ಬಳಸುವುದು! ಬಹುತೇಕ ಸಂದರ್ಭಗಳಲ್ಲಿ ಒಂದು ಫೈಲು ಒಂದೇ ವೆಬ್‌ಸೈಟಿನಲ್ಲಿರುವುದಿಲ್ಲ. ಒಂದು ವೆಬ್‌ಸೈಟನ್ನು ಯಥಾವತ್ತಾಗಿ ನಕಲು ಮಾಡಿ ಇನ್ನೊಂದು ವೆಬ್‌ಸೈಟನ್ನು ಸೃಷ್ಟಿಸಿರುತ್ತಾರೆ. ಅದನ್ನು ಮಿರರ್ ಸೈಟ್ (ಕನ್ನಡಿ ಸೈಟು) ಎಂದು ಕರೆಯಲಾಗುತ್ತದೆ. ಒಂದೇ ರೀತಿಯ ದತ್ತಾಂಶಗಳನ್ನು ಹೊಂದಿರುವ ಇಂತಹ ಹತ್ತು ಹಲವು ಮಿರರ್ ಸೈಟುಗಳು ಅಂತರ್ಜಾಲ ಲೋಕದಲ್ಲಿ ಇರಬಹುದು. ಅಂತಹ ಸನ್ನಿವೇಶದಲ್ಲಿ ನೀವು ಡೌನ್‌ಲೋಡ್ ಮಾಡುತ್ತಿರುವ ದೊಡ್ಡ ಫೈಲು ಬೇರೆ ಬೇರೆ ಮಿರರ್ ಸೈಟುಗಳಲ್ಲಿ ಇರುವ ಸಾಧ್ಯತೆ ಯಿರುತ್ತದೆ. ಹೀಗಿದ್ದಾಗ ಆ ಫೈಲನ್ನು ತುಂಡು ತುಂಡಾಗಿ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ಈ ಮಿರರ್ ಸೈಟು ಗಳನ್ನು ಬಳಸಿಕೊಳ್ಳಬಹುದು. ಈ ಮಿರರ್ ಸೈಟುಗಳನ್ನು ಹೇಗೆ ಹುಡುಕುವುದು? ಚಿಂತೆ ಬೇಕಿಲ್ಲ.
ಎಲ್ಲಾ ಪ್ರಮುಖ ಡೌನ್ ಲೋಡ್ ಮ್ಯಾನೇಜರ್ ಪ್ರೋಗ್ರಾಂಗಳು ಈ ಸೌಲಭ್ಯವನ್ನು ಹೊಂದಿರುತ್ತವೆ. ನೀವು ಯಾವುದಾದರೂ ಫೈಲನ್ನು ಡೌನ್ ಲೋಡ್ ಮಾಡಲು ಪ್ರಾರಂಭಿಸಿದ ತಕ್ಷಣ ಆ ಫೈಲು ಇರುವ ಇತರ ಮಿರರ್ ಸೈಟುಗಳು ಅಂತರ್ಜಾಲದಲ್ಲಿ ಇದ್ದರೆ ತಿಳಿಸು ತ್ತವೆ. ನೀವು ಆಯ್ಕೆ ಮಾಡಿಕೊಂಡು ಡೌನ್‌ಲೋಡ್ ಮಾಡಿ ಕೊಂಡರಾಯಿತಷ್ಟೆ. ಇವುಗಳ ಒಂದು ಮಿತಿ ಎಂದರೆ ಈ ಪ್ರೋಗ್ರಾಂಗಳ ಪಟ್ಟಿಯಲ್ಲಿರದ ಮಿರರ್ ಸೈಟುಗಳನ್ನು ಗುರುತಿಸುವುದಕ್ಕೆ ಇವುಗಳಿಂದ ಸಾಧ್ಯವಾಗುವುದಿಲ್ಲ.
ಹಾಗಾದರೆ, ಯಾವ ಡೌನ್‌ಲೋಡ್ ಮ್ಯಾನೇಜರ್ ಬಳಸಿದರೆ ಉತ್ತಮ ಹಾಗೂ ಅದು ಎಲ್ಲಿ ಸಿಗುತ್ತದೆ? ಎಫ್‌ಡಿಎಂ ಎಂದೇ ಪ್ರಚಲಿತದಲ್ಲಿರುವ ಫ್ರೀ ಡೌನ್‌ಲೋಡ್ ಮ್ಯಾನೇಜರ್ ಈ ನಿಟ್ಟಿನಲ್ಲಿ ಉತ್ತಮ ಎಂದು ಹೇಳಬಲ್ಲೆ. ಇದಲ್ಲದೇ ಬೇಕಾದಷ್ಟು ಪ್ರೋಗ್ರಾಂಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಅವೆಲ್ಲ ವನ್ನೂ ಬಿಟ್ಟು ಇದನ್ನು ಸೂಚಿಸುವು ದಕ್ಕಿರುವ ಏಕೈಕ ಕಾರಣ ಎಂದರೆ ಇದು ಹೆಸರೇ ಸೂಚಿಸುವಂತೆ ಉಚಿತವಾಗಿ ದೊರೆಯುತ್ತದೆ. ಉಳಿದವುಗಳಿಗಾದರೆ ದುಡ್ಡು ಕೊಟ್ಟು ಕೊಂಡುಕೊಳ್ಳಬೇಕಾ ಗುತ್ತದೆ. ಈ ಅಂಕಣದ ಪ್ರಮುಖ ಉದ್ದೇಶವೇ ಯಾವುದೇ ದುಡ್ಡು ತೆರದೇ ಉಚಿತವಾಗಿ ಇಂಟರ್‌ನೆಟ್ ಮೂಲಕ ಏನೆಲ್ಲಾ ಅನುಕೂಲತೆಗಳನ್ನು ಪಡೆಯಬಹುದೋ ಅದನ್ನು ಪರಿಚಯಿಸುವುದೇ ಆಗಿರುವುದರಿಂದ ಇಂತಹ ಉಚಿತ ಪ್ರೋಗ್ರಾಂಗಳ ಉಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಈ ಪ್ರೋಗ್ರಾಂ ದೊರೆಯುವ ಅಂತರ್ಜಾಲ ತಾಣ: <http://www.freedownloadmanager.org/>
ರಾಜ್ಯಾದ್ಯಂತ ಮಳೆ ಚುರುಕುಗೊಳ್ಳುತ್ತಿದೆ. ಈ ಸಾಲಿನಲ್ಲಿ ಮಳೆ ನಿರೀಕ್ಷೆಯಷ್ಟು ಬರದೆ ಇದ್ದರೂ, ಮುಂದಿನ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ರಾಜ್ಯಾದ್ಯ ...
Click here to post your views ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...