
ದಮಾಮ್, ಆ.5: ಕೆಎಸ್‌ಎ ದಮಾಮ್, ಖೋಬರ್ ಘಟಕದ ವತಿಯಿಂದ ದಮಾಮ್ ಸೆಂಟರ್‌ನಲ್ಲಿ ಆ.4ರಂದು ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು.
ಇಫ್ತಾರ್ ಕೂಟಕ್ಕೆ ದಮಾಮ್, ಖೋಬರ್, ಜುಬೈಲ್‌ಗಳಿಂದ ಬೃಹತ್ ಸಂಖ್ಯೆಯಲ್ಲಿ ಅತಿಥಿಗಳು ಆಗಮಿಸಿದರು. ಇಫ್ತಾರ್‌ಗೆ ಮುಂಚಿತವಾಗಿ ಅಬ್ದುಲ್ ಮಜೀದ್ ಎಸ್.ಎ ಬ್ಯಾರಿ ಭಾಷೆಯಲ್ಲಿ ಹಿತೋಪದೇಶ ನೀಡಿದರು. ಇಫ್ತಾರ್‌ನ ಬಳಿಕ ಮುಹಮ್ಮದ್ ಖಲೀಲ್ ಉರ್ದು ಭಾಷೆಯಲ್ಲಿ ಹಿತೋಪದೇಶಗಳನ್ನು ನೀಡಿದರು.
ಇದೇ ಸಂದರ್ಭ ಶೈಖ್ ಮುಹಮ್ಮದ್ ಜಮೀಲ್ ಝೈನ್ ರಚಿಸಿದ ‘ಸಂತಾನ ಪರಿಪಾಲನೆ’ ಎಂಬ ಪುಸ್ತಕವನ್ನು ಇಂಡಿಯನ್ ಇಸ್ಲಾಹಿ ಸೆಂಟರ್‌ನ ಸೌದಿ ಅರೇಬಿಯಾದ ಅಧ್ಯಕ್ಷ ಇಂಬಿಚ್ಚಿ ಕೋಯಾರವರು ಅಹ್ಮದ್ ಅಲ್ ಸಾದಿ (ಮ್ಯಾನೇಜಿಂಗ್ ಡೈರೆಕ್ಟರ್ ಆಫ್ ಜಿ ಮೀಡಿಯಾ)ಯವರಿಗೆ ನೀಡುವ ಮೂಲಕ ಬಿಡುಗಡೆ ಗೊಳಿಸಿದರು.
ಈ ಕೃತಿಯನ್ನು ಅಬ್ದುಲ್ ಮಜೀದ್ ಎಸ್.ಎಂ ಕನ್ನಡಕ್ಕೆ ಅನುವಾದಿಸಿದ್ದಾರೆ. ಎಂ.ಎಚ್ ಅಬ್ದುಲ್ ಹಮೀದ್ ‘ಸಂತಾನ ಪರಿಪಾಲನೆ’ ಕೃತಿಯ ಬಗ್ಗೆ ಹಾಗೂ ಕೆ.ಎಸ್.ಎ. ದಮಾಮ್, ಖೋಬರ್ ಘಟಕದ ಚಟುವಟಿಕೆಗಳ ಬಗ್ಗೆ ಸೇರಿದ ಜನರ ಗಮನಕ್ಕೆ ತಂದರು.
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ಕೆ.ಎಸ್.ಎ ದಮಾಮ್ ಖೋಬರ್ ಘಟಕದ ಅಧ್ಯಕ್ಷ ಇಸ್ಮಾಯೀಲ್ ಬಬ್ಬುಕಟ್ಟೆ, ಕೆಎಸ್‌ಎ ದಮಾಮ್ ಖೋಬರ್ ಘಟಕದ ವೀಕ್ಲಿ ಕ್ಲಾಸ್‌ಗಳ ಬಗ್ಗೆ ಮತ್ತು ಮದ್ರಸಗಳ ಕುರಿತು ಮಾಹಿತಿ ನೀಡಿದರು.
ಶರೀಫ್ ಎಣ್ಣೆಹೊಳೆ ವಂದಿಸಿದರು.













