mail-img print-img

ತನಿಖಾ ದಾಖಲೆ ನಾಶಪಡಿಸಲು ಜೋಹ್ರಿಗೆ ಸೂಚಿಸಿದ್ದ ಅಮಿತ್: ತುಳಸೀರಾಮ್ ಪ್ರಜಾಪತಿ ಎನ್‌ಕೌಂಟರ್ ಪ್ರಕರಣದಲ್ಲಿ ಸಿಬಿಐ ಆರೋಪಪಟ್ಟಿ

ಶುಕ್ರವಾರ - ಸೆಪ್ಟೆಂಬರ್ -21-2012

ಅಹ್ಮದಾಬಾದ್, ಸೆ. 20: ಈಗ ಜೈಲಿನಲ್ಲಿರುವ ಐಪಿಎಸ್ ಅಧಿಕಾರಿ ಡಿ.ಜಿ. ವಂಝಾರ ಸೂಚನೆಯಂತೆ ಗ್ಯಾಂಗ್‌ಸ್ಟರ್ ತುಳಸೀರಾಮ್ ಪ್ರಜಾಪತಿ ತನ್ನ ಗ್ಯಾಂಗ್‌ನ ನಾಯಕ ಸೊಹ್ರಾಬುದ್ದೀನ್ ಶೇಖ್‌ನ ಅಪಹರಣಕ್ಕೆ ವ್ಯವಸ್ಥೆ ಮಾಡಿದ್ದ ಎಂದು ತುಳಸೀರಾಮ್ ಪ್ರಜಾಪತಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸಲ್ಲಿಸಿದ ಆರೋಪಪಟ್ಟಿ ಹೇಳುತ್ತದೆ.

2005 ನವೆಂಬರ್‌ನಲ್ಲಿ ಆಂಧ್ರಪ್ರದೇಶ- ಮಹಾರಾಷ್ಟ್ರ ಗಡಿ ಭಾಗದಿಂದ ಸೊಹ್ರಾಬುದ್ದೀನ್ ಮತ್ತು ಆತನ ಹೆಂಡತಿ ಕೌಸರ್‌ಬಿಯ ಅಪಹರಣ ನಡೆದಾಗ ಅವರ ಜೊತೆಗೆ ಮೂರನೆ ವ್ಯಕ್ತಿಯಾಗಿ ತುಳಸೀರಾಮ್ ಇದ್ದ. ಬಳಿಕ ಪೊಲೀಸರು ತುಳಸೀರಾಮ್‌ನನ್ನು ಹೋಗಲು ಬಿಟ್ಟರು ಹಾಗೂ ದಂಪತಿಯನ್ನು ಕೊಂದರು.

ಈ ದಂಪತಿಯೊಂದಿಗೆ ಇದ್ದ ಮೂರನೆ ವ್ಯಕ್ತಿ ತುಳಸೀರಾಮ್ ಎಂದು ಹಿರಿಯ ಪೊಲೀಸ್ ಅಧಿಕಾರಿ ಗೀತಾ ಜೋಹ್ರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ, ದಂಪತಿಯೊಂದಿಗೆ ಇದ್ದ ವ್ಯಕ್ತಿ ಕಲೀಮುದ್ದೀನ್ ಎಂದು ಹೇಳುವ ಮೂಲಕ ಅವರು ಎರಡು ಎನ್‌ಕೌಂಟರ್‌ಗಳ ನಡುವಿನ ಕೊಂಡಿಯನ್ನು ಕಳಚಲು ಪ್ರಯತ್ನಿಸಿದರು ಎಂದು ಆರೋಪಪಟ್ಟಿಯಲ್ಲಿ ಆರೋಪಿಸಲಾಗಿದೆ. ಅಂತಿಮವಾಗಿ ತುಳಸೀರಾಮ್‌ನನ್ನು 2006 ಡಿಸೆಂಬರ್‌ನಲ್ಲಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಮುಗಿಸಿದರು. ಆತನಿಗೆ ತುಂಬಾ ವಿಷಯಗಳು ಗೊತ್ತಿತ್ತು ಎಂಬುದೇ ಆತನನ್ನು ಮುಗಿಸಲು ಕಾರಣವಾಗಿತ್ತು.

ಸೊಹ್ರಾಬುದ್ದೀನ್ ಶೇಖ್ ಸಹೋದರ ರುಬಾಬುದ್ದೀನ್ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿ, ತನ್ನ ಸಹೋದರ ಸೊಹ್ರಾಬುದ್ದೀನ್‌ನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಸಾಯಿಸಲಾಗಿದೆ ಹಾಗೂ ಅಂದಿನಿಂದ ತನ್ನ ಅತ್ತಿಗೆ ಕಾಣೆಯಾಗಿದ್ದಾರೆ ಎಂದು ಆರೋಪಿಸಿದ್ದರು. ಆಗ ಸುಪ್ರೀಂ ಕೋರ್ಟ್ 2006 ಜನವರಿಯಲ್ಲಿ ಅಂದಿನ ಗುಜರಾತ್ ಪೊಲೀಸ್ ಮಹಾ ನಿರ್ದೇಶಕ ಪಿ.ಸಿ. ಪಾಂಡೆಗೆ ದೂರನ್ನು ಕಳುಹಿಸಿತು. ಸ್ವಲ್ಪ ಸಮಯದವರೆಗೆ ಪಾಂಡೆ ಈ ವಿಷಯದಲ್ಲಿ ‘‘ಅಸಹಜವಾಗಿ ಹಾಗೂ ಉದ್ದೇಶಪೂರ್ವಕವಾಗಿ’’ ಏನನ್ನೂ ಮಾಡಲಿಲ್ಲ ಹಾಗೂ ಬಳಿಕ, ವಿಷಯದ ಬಗ್ಗೆ ಕೇವಲ ವಿಚಾರಿಸಿ, ತನಿಖೆ ಮಾಡಬೇಡಿ ಎಂದು ಗೀತಾ ಜೋಹ್ರಿಗೆ ಸೂಚಿಸಿದರು ಎಂದು ಸಿಬಿಐ ಆರೋಪಪಟ್ಟಿ ಹೇಳಿದೆ.

ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್ ವಿ.ಎಲ್. ಸೋಳಂಕಿ ಸಲ್ಲಿಸಿದ ತನಿಖಾ ವರದಿಯ ಬಗ್ಗೆ ವಿಳಂಬವಾಗಿ ನಿರ್ಧಾರ ತೆಗೆದುಕೊಳ್ಳಲು ಪಾಂಡೆ ಮತ್ತು ಜೋಹ್ರಿ ತಮ್ಮ ಅಧಿಕಾರಗಳನ್ನು ದುರ್ಬಳಕೆ ಮಾಡಿಕೊಂಡರು ಎಂದು ಆರೋಪಿಸಿದೆ.

ಸೋಳಂಕಿ ತನ್ನ ವರದಿಯನ್ನು 2006 ಸೆಪ್ಟಂಬರ್ 1ರಂದು ಸಲ್ಲಿಸಿದ್ದರು. ಆದರೆ, ಅದನ್ನು 2006 ಡಿಸೆಂಬರ್ 7ರಂದು ಸುಪ್ರೀಂ ಕೋರ್ಟ್‌ಗೆ ಕಳುಹಿಸಲಾಯಿತು.

2006 ಡಿಸೆಂಬರ್ ಮಧ್ಯಭಾಗದಲ್ಲಿ ಅಂದಿನ ಗೃಹ ಖಾತೆ ರಾಜ್ಯ ಸಚಿವ ಅಮಿತ್ ಶಾ ತನ್ನ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಯೊಂದನ್ನು ಕರೆದಿದ್ದರು. ಸೋಳಂಕಿಯ ತನಿಖೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಲು ಸಭೆಯನ್ನು ಕರೆಯಲಾಗಿತ್ತು. ಪಾಂಡ, ಜೋಹ್ರಿ ಮತ್ತು ಜಿ.ಸಿ. ರೈಗರ್ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಸಿಬಿಐ ಆರೋಪಿಸಿದೆ.

ತನಿಖಾ ಪೇಪರ್‌ಗಳನ್ನು ನಾಶಪಡಿಸುವಂತೆ ಅಮಿತ್ ಶಾ ಜೋಹ್ರಿಗೆ ಸೂಚಿಸಿದರು ಎಂದು ಸಿಬಿಐ ಹೇಳಿದೆ. ‘‘ಈ ವಿಷಯದಿಂದ ತನ್ನನ್ನು ಹೊರಗಿಡಬೇಕೆಂದು ರೈಗರ್ ವಿನಂತಿಸಿದರು. ಆದರೆ, ಈ ಪಿತೂರಿಯಲ್ಲಿ ಪಾಂಡೆ ಮತ್ತು ಜೋಹ್ರಿ ಮನಸಾರೆ ಶಾಮೀಲಾಗಿದ್ದರು’’ ಎಂದು ಸಿಬಿಐ ಆರೋಪಿಸಿದೆ. ಈ ಪ್ರಕರಣದಲ್ಲಿ ರೈಗರ್‌ರನ್ನು ಸಾಕ್ಷಿಯನ್ನಾಗಿ ಸಿಬಿಐ ಹೆಸರಿಸಿದೆ.

ತುಳಸೀರಾಮ್‌ನನ್ನು ತನಿಖೆಗೊಳಪಡಿಸಲು ಉದಯಪುರಕ್ಕೆ ಹೋಗಲು ಸೋಳಂಕಿ 2006 ಡಿಸೆಂಬರ್ 18ರಂದು ಅನುಮತಿ ಕೋರಿದಾಗ ಆತನ ದಿನಗಳು ಎಣಿಸಲ್ಪಟ್ಟದ್ದವು. ಅನುಮೋದನೆಗಾಗಿ ಮನವಿಯನ್ನು ತಾನು ಆಗಿನ ಹೆಚ್ಚುವರಿ ಡಿಜಿಪಿ ರೈಗರ್‌ಗೆ ಕಳುಹಿಸಿದ್ದೆ ಎಂದು ಪಿತೂರಿಯ ಭಾಗವಾಗಿ ಆರಂಭದಲ್ಲಿ ಜೋಹ್ರಿ ಹೇಳಿದರು. ರೈಗರ್ ಅನುಮತಿ ನಿರಾಕರಿಸಿದ್ದಾರೆ ಎಂದು ಬಳಿಕ ಜೋಹ್ರಿ ಸೋಳಂಕಿಗೆ ತಿಳಿಸಿದರು. ತುಳಸೀರಾಮ್‌ನನ್ನು ವಿಚಾರಣೆಗೊಳಪಡಿಸಲು ಕೋರಿ ಕಳುಹಿಸಲಾದ ಮನವಿ ಪತ್ರವನ್ನು ಜೋಹ್ರಿ ನಾಶಪಡಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಸೋಳಂಕಿ ಜೋಹ್ರಿಗೆ ಮನವಿ ಸಲ್ಲಿಸಿದ 10 ದಿನಗಳ ಬಳಿಕ ತುಳಸೀರಾಮ್‌ನ ಹತ್ಯೆಯಾಗುತ್ತದೆ. ಅಲ್ಲಿಯವರೆಗೆ ಶಾ, ವಂಝಾರ ಮತ್ತು ಜೈಲಿನಲ್ಲಿರುವ ಇನ್ನೊಬ್ಬ ಅಧಿಕಾರಿ ರಾಜ್‌ಕುಮಾರ್ ಪಾಂಡ್ಯನ್ ನಡುವಿನ ಫೋನ್ ಕರೆಗಳಲ್ಲಿ ಅಸಾಧಾರಣ ಏರಿಕೆಯಾಗಿರುವುದನ್ನು ಫೋನ್ ಕರೆ ದಾಖಲೆಗಳು ಹೇಳುತ್ತವೆ.

‘‘ಗೃಹ ರಾಜ್ಯ ಸಚಿವರಾಗಿರುವ ವ್ಯಕ್ತಿಯೊಬ್ಬರು ಎಸ್‌ಪಿ ದರ್ಜೆಯ ಅಧಿಕಾರಿ (ಪಾಂಡ್ಯನ್) ಜೊತೆ ಇಷ್ಟೊಂದು ಮಾತನಾಡುವುದು ಅತ್ಯಂತ ಅಸಹಜ’’ ಎಂದು ಆರೋಪಪಟ್ಟಿ ಹೇಳುತ್ತದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್