
ಹೊಸದಿಲ್ಲಿ,ಜೂ.19:ತನ್ನ ಟಿವಿ ಕಾರ್ಯಕ್ರಮ ‘ಸತ್ಯಮೇವ ಜಯತೇ’ಯಲ್ಲಿ ದೇಶದಲ್ಲಿನ ವೈದ್ಯಕೀಯ ಕ್ಷೇತ್ರದ ಅವ್ಯವಹಾರಗಳನ್ನು ಬಯಲಿಗೆಳೆದ ಬಾಲಿವುಡ್‌ನ ಜನಪ್ರಿಯ ನಟ ಆಮಿರ್ ಖಾನ್ ಬಗ್ಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತ ಪಡಿಸಿದೆ. ವೈದ್ಯ ಸಮುದಾಯದ ಒಂದು ವರ್ಗದ ವಿರೋಧದ ನಡುವೆಯೂ, ವೈದ್ಯರ ಬೆದರಿಕೆಗೆ ಜಗ್ಗದೆ ತನ್ನ ನಿಲುವಿನಲ್ಲಿ ದೃಢತೆಯನ್ನು ಪ್ರದರ್ಶಿಸಿದ ಆಮಿರ್ ಖಾನ್‌ಗೆ ಇದೀಗ ದೇಶದ ಆಡಳಿತ ವರ್ಗವೂ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ಸಮಾಜದ ಅನಾಚಾರಗಳನ್ನು ತನ್ನ ಕಾರ್ಯಕ್ರಮದ ಮೂಲಕ ಬಯಲಿಗೆಳೆಯುವ ಬಾಲಿವುಡ್ ನಟನ ಪ್ರಯತ್ನಗಳನ್ನು ಮೆಚ್ಚಿರುವ ಸಂಸದೀಯ ಸಮಿತಿಯೊಂದು ಇದೀಗ ಆಮಿರ್ ಖಾನ್‌ಗೆ ಸಂಸತ್ತಿನಲ್ಲಿ ವಿಷಯಕ್ಕೆ ಸಂಬಂಧಿಸಿ ಮಾತನಾಡುವ ಅವಕಾಶ ನೀಡಿದೆ. ಈ ಬಗ್ಗೆ ಆಮಿರ್ ಖಾನ್ ಗುರುವಾರ ಸಂಸತ್ತಿಗೆ ಹಾಜರಾಗಲಿದ್ದಾರೆ ಎಂದೂ ಅವರ ಆಪ್ತ ಮೂಲಗಳು ದೃಢ ಪಡಿಸಿವೆ.ಬಿಜೆಪಿಯ ರಾಜ್ಯ ಸಭಾ ಸಂಸದ ಶಾಂತಾ ಕುಮಾರ್ ಅಧ್ಯಕ್ಷತೆಯ ಸಂಸದೀಯ ಸಮಿತಿಯು, ತನ್ನ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಂಶೋಧನೆಯ ವೇಳೆ ತಾನು ಕಂಡುಕೊಂಡ ಮಾಹಿತಿಗಳನ್ನು ತಮ್ಮೆಂದಿಗೆ ಹಂಚಿಕೊಳ್ಳುವಂತೆ ಆಮಿರ್ ಖಾನ್‌ಗೆ ಸ್ವಾಗತಿಸಿದೆ.
ಈ ಹಿನ್ನೆಲೆಯಲ್ಲಿ ಆಮಿರ್ ಖಾನ್ ಗುರುವಾರ ಸಂಸತ್ತಿಗೆ ಭೇಟಿ ನೀಡಲಿದ್ದಾರೆ ಎಂದು ಅವರ ವಕ್ತಾರ ಮಾದ್ಯಮಗಳಿಗೆ ದೃಢ ಪಡಿಸಿದ್ದಾರೆ. ವೈದಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನಾಚಾರಗಳನ್ನು ಆಮಿರ್ ತನ್ನ ಸತ್ಯಮೇವ ಜಯತೇ ಕಾರ್ಯಕ್ರಮದ ಮೂಲಕ ಬಹಿರಂಗ ಪಡಿಸಿದ್ದರು.ಸಾಧಾರಣ ಔಷಧಗಳಿಂದ ಗುಣಮುಖವಾಗ ಬಲ್ಲ ಹಲವಾರು ಕಾಯಿಲೆಗಳಿಗೆ ದೊಡ್ಡ ಸರ್ಜರಿಯನ್ನೇ ನಡೆಸುವಂತೆ ವೈದ್ಯರು ಸಲಹೆ ನೀಡುವುದು ಮತ್ತು ಈ ಮೂಲಕ ವೈದ್ಯ ಸಮುದಾಯವು ರೋಗಿಗಳ ಅಮೂಲ್ಯ ಹಣವನ್ನು ದರೋಡೆ ಮಾಡುತ್ತಿರುವ ಕುರಿತು ಆಮಿರ್ ಖಾನ್ ತನ್ನ ಕಾರ್ಯಕ್ರಮದಲ್ಲಿ ನೇರವಾಗಿ ಬಹಿರಂಗ ಮಾಡಿದ್ದಾರೆ.
ಮೇ 27ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಆಮಿರ್ ಈ ವಿಷಯಕ್ಕೆ ಸಂಬಂಧಿಸಿ ದೇಶದ ಗಮನ ಸೆಳೆದಿದ್ದರು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿ ಆಮಿರ್ ಖಾನ್ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ)ಯು ಗರಂ ಆಗಿತ್ತು ಮತ್ತು ಈ ಕುರಿತು ಆಮಿರ್ ಖಾನ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿತ್ತು.ಇಲ್ಲವಾದಲ್ಲಿ ಆಮಿರ್‌ರ ಚಿತ್ರಗಳಿಗೆ ಬಹಿಷ್ಕಾರ ಹಾಕುವುದಾಗಿ ಅದು ಬೆದರಿಕೆಯೊಡ್ಡಿತ್ತು.ಆದರೆ ಅದನ್ನು ಲೆಕ್ಕಿಸದ ಆಮಿರ್, ತಾನು ಕ್ಷಮೆ ಯಾಚಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು.ಹೆಣ್ಣು ಶಿಶು ಹತ್ಯೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸೆ ಮುಂತಾದ ಪ್ರಮುಖ ಸಾಮಾಜಿಕ ಸಮಸ್ಯೆಗಳ ಬಗ್ಗೆ ಆಮಿರ್ ಖಾನ್ ತನ್ನ ಚೊಚ್ಚಲ ಟಿವಿ ಕಾರ್ಯಕ್ರಮದಲ್ಲಿ ಗಮನ ಸೆಳೆಯುವ ಮೂಲಕ, ದೇಶಾದ್ಯಂತ ಭಾರೀ ಜನ ಮೆಚ್ಚುಗೆ ಪಡೆಯುತ್ತಿದ್ದಾರೆ.
ಅವರ ಟಿವಿ ಕಾರ್ಯಕ್ರಮಕ್ಕೂ ಸರಕಾರ ಹಾಗೂ ಜನ ಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಸಂಸತ್ತು ಕಠಿಣ ಕಾನೂನುಗಳನ್ನು ರಚಿಸಿದೆ. ಆದರೆ ಕಾನೂನು ಸರಿಯಾಗಿ ಜಾರಿಯಾಗದಿದ್ದಲ್ಲಿ, ಅವುಗಳಿಂದಾಗುವ ಪರಿಣಾಮಗಳ ಕುರಿತಂತೆ ಆಮಿರ್ ಬೆಳಕು ಚೆಲ್ಲಿದ್ದಾರೆ. ಅವರ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಸಂಖ್ಯೆಯೂ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ರೀತಿಯಲ್ಲಿ ತಾನು ಸಮಾಜದ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಆಮಿರ್ ಹೇಳಿದ್ದಾರೆ.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...
1881ರಲ್ಲೇ ವಿಲಿಯಂ ಹಂಟರ್ ಎಂಬವರು ‘ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನ ವಾಗುವುದೆಂದು’ ಭವಿಷ್ಯ ನ ...